ಭಟ್ಕಳ: ಮಾಜಿ ಶಾಸಕ, ಬಿಜೆಪಿ ಮುಖಂಡ ಶಿವಾನಂದ ನಾಯ್ಕ ಅವರ ಮೇಲೆ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಮಾಧುರಿ ಮುಧೋಳ ಎನ್ನುವ ಮಹಿಳೆ ಫೇಸ್ಬುಕ್‌ನಲ್ಲಿ ಆರೋಪ ಮಾಡಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಅವರು ಬರೆದುಕೊಂಡಿರುವ ಪೋಸ್ಟ್ ನ ಸ್ಕ್ರೀನ್ ಶಾಟ್ ಅನ್ನು ಬಿತ್ತರಿಸಿದ್ದಾರೆ.
ಇನ್ನು, ಮಾಧುರಿಯವರಿಗೆ ವಾಹಿನಿಯು ಕರೆ ಮಾಡಿದಾಗ ಬಿಜೆಪಿಯ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರ ಮೇಲೆ ಆರೋಪ ಮಾಡಿದ್ದಾರೆ ಎನ್ನಲಾಗಿದೆ.
“ನಾನು ಫೇಸ್ಬುಕ್ ನಲ್ಲಿ ಶಿವಾನಂದ ನಾಯ್ಕ ಅವರ ಬಗ್ಗೆ ಬರೆದುಕೊಂಡಿದ್ದು ನಿಜ. ಅದು ಸತ್ಯ” ಅಂತ ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಮಾಧುರಿ ಮುಧೋಳ ಸ್ಪಷ್ಟಪಡಿಸಿದ್ದಾರೆ.
#MeToo ಆಂದೋಲನದ ಅಡಿಯಲ್ಲಿ ತನಗೆ ಕೆಲವು ಆರ್ಎಸ್ಎಸ್ ಮುಖಂಡರಿಂದ ಲೈಂಗಿಕ ಕಿರುಕುಳದ ಅನುಭವ ಆಗಿದೆ ಎಂದು ಫೇಸ್ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾ ಅವರು, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಹಾಗೂ ಮಾಜಿ ಸಚಿವ ಶಿವಾನಂದ ನಾಯ್ಕರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.
ಕಾನೂನು ಸಮರಕ್ಕೂ ಸಿದ್ಧ ಎಂದ ಮಾಜಿ ಸಚಿವ ಶಿವಾನಂದ ನಾಯ್ಕ
ತಮ್ಮ ವಿರುದ್ಧ ಮಾಧುರಿ ಮುಧೋಳ್ ಎಂಬ ಮಹಿಳೆ #Metoo ಅಭಿಯಾನದಲ್ಲಿ ಮಾಡಿದ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಬಿಜೆಪಿಯ ಮಾಜಿ ಸಚಿವ ಶಿವಾನಂದ ನಾಯ್ಕ್ ಸ್ಪಷ್ಟನೆ ನೀಡಿದ್ದಾರೆ. ನನ್ನ ಮೇಲೆ ಬಂದಿರುವ ಆರೋಪವನ್ನು ವಿರೋಧಿಸುತ್ತೇನೆ ಅಂತಾ ಹೇಳಿದ್ದಾರೆ. ಇದರ ಜೊತೆಗೆ ತಮ್ಮ ಮೇಲಿನ ಆರೋಪವನ್ನು ಕಾನೂನು ಮೂಲಕ ಎದುರಿಸೋಕೆ ಸಿದ್ಧ. ರಾಜಕೀಯ ಕ್ಷೇತ್ರದಲ್ಲಿ ಇರುವಾತ ನಾನು ಯಾರದ್ದೋ ಪಿತೂರಿಯಿಂದ ಮಹಿಳೆ ಆರೋಪ ಮಾಡಿದ್ದಾಳೆ ಅಂತಾ ತಮ್ಮ ಮೇಲಿನ ಆರೋಪವನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ. ಇನ್ನು, ತಾವು ಯಾರನ್ನೂ ಯಾವತ್ತೂ ಕೆಟ್ಟ ಭಾವನೆಯಿಂದ ನೋಡಿಲ್ಲ ಅಂತಾ ಶಿವಾನಂದ ನಾಯ್ಕ್ ಸ್ಪಷ್ಟಪಡಿಸಿದ್ದಾರೆ.