ಗೋಕರ್ಣ: ತಾಲೂಕಿನ ಅಗ್ರಗೋಣ ಗ್ರಾಮದ ರಹೀಮ್ ಇದ್ರಿಸ್ ಮುಜಾವರ ಎಂಬ 11 ವರ್ಷದ ಬಾಲಕನಿಗೆ ವಿಷಯುಕ್ತ ಹಾವು ಕಚ್ಚಿದ ಘಟನೆ ವರದಿಯಾಗಿದೆ.
ಹಾವು ಕಡಿದ ತಕ್ಷಣ ಈತನನ್ನು ಗ್ರಾಮಕ್ಕೆ ಸಮೀಪದ ಬಂಕಿಕೊಡ್ಲ ಗ್ರಾಮದ ಪಿಎಚ್ಸಿಗೆ ದಾಖಲಿಸಲಾಯಿತು. ಆದರೆ, ಅಲ್ಲಿ ಸಿಬ್ಬಂದಿ ಇಲ್ಲದ್ದರಿಂದ 40 ನಿಮಿಷದ ಬಳಿಕ ಗೋಕರ್ಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆ ತರಲಾಯಿತೆಂದು ಹೇಳಲಾಗಿದೆ. ಆ ಸಂದರ್ಭದಲ್ಲಿ ಗಂಭೀರ ಸ್ಥಿತಿ ತಲುಪಿದ್ದ ಬಾಲಕನಿಗೆ ವೈದ್ಯರು ತಕ್ಷಣ ಆಕ್ಷಿಜನ್ ಮತ್ತು ವಿಷನಿವಾರಕ ಮೂರು ಇಂಜೆಕ್ಷನ್ ನೀಡಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ . ಬಾಲಕನಿಗೆ ಸದ್ಯ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದು, ಕುಮಟಾ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ನಂತರದಲ್ಲಿ ಇಲ್ಲಿ ಸೂಕ್ತ ಚಿಕಿತ್ಸೆ ಸಿಗದ ಕಾರಣ ಬಾಲಕನನ್ನು ಖಾಸಗಿ ಆಸ್ಪತ್ರೆ ಬಾಲಕನನ್ನು ಉಡುಪಿಗೆ ಕಳುಹಿಸಲಾಗಿದೆ.