ಕಾರವಾರ: ಹೊಸ ಕಥೆಗಾರರಿಗೆ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಸಿದ್ದಾಪುರದ ಶಂಕರಮಠ ಸಭಾಭವನದಲ್ಲಿ ಕಥಾ ಕಮ್ಮಟವನ್ನು ಡಿ. 1 ಮತ್ತು 2 ರಂದು ಹಮ್ಮಿಕೊಳ್ಳಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅವರು ತಿಳಿಸಿದ್ದಾರೆ.
ಕಮ್ಮಟದಲ್ಲಿ ಆಯ್ಕೆ ಆದ ಕಥೆಗಾರರಿಗೆ ಲೇಖನ ಪರಿಕರ, ಪ್ರಮಾಣ ಪತ್ರದೊಂದಿಗೆ ಕೆಲ ಕಥಾ ಸಂಕಲನಗಳನ್ನು ಅಧ್ಯಯನಕ್ಕಾಗಿ ಉಚಿತವಾಗಿ ನೀಡಲಾಗುವುದು.

RELATED ARTICLES  ಕಳ್ಳತನದ ವೇಳೆ ಅಡ್ಡಬಂದವರಿಗೆ ಮೆಣಸಿನ ಪುಡಿ ಹಾಕಿ ಪರಾರಿಯಾಗುತ್ತಿದ್ದ ಆರೋಪಿ ಅರೆಸ್ಟ್..!

ಕಮ್ಮಟಾರ್ಥಿಗಳಿಗೆ ಊಟ ವಸತಿ ವ್ಯವಸ್ಥೆ ಇರುತ್ತದೆ. ನಾಡಿನ ಹಿರಿಯ ಕಥೆಗಾರರು, ವಿಮರ್ಶಕರು ಕಮ್ಮಟದ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಜಿಲ್ಲೆಯ 25 ಕಥೆಗಾರರಿಗೆ ಮಾತ್ರ ಕಮ್ಮಟದಲ್ಲಿ ಭಾಗವಹಿಸಲು ಅವಕಾಶವಿದೆ. ಆಸಕ್ತರು ಸ್ವರಚಿತ ಒಂದು ಕಥೆಯನ್ನು ತಮ್ಮ ಅಂಚೆ ವಿಳಾಸ, ದೂರವಾಣಿ ಸಂಖ್ಯೆಯೊಂದಿಗೆ ‘ಗಂಗಾಧರ ಕೊಳಗಿ, ಗೌರವ ಕಾರ್ಯದರ್ಶಿ, ಉತ್ತರ ಕನ್ನಡ ಜಿಲ್ಲಾ ಕ.ಸಾ.ಪ, ಸಿದ್ದಾಪುರ’ ವಿಳಾಸಕ್ಕೆ ಅಥವಾ ಇ-ಮೇಲ್: [email protected] ಗೆ ಕಳುಹಿಸಿಕೊಡಬೇಕು. ಹೆಚ್ಚಿನ ವಿವರಗಳಿಗೆ ಮೊ.ಸಂ: 9448609871 ಸಂಪರ್ಕಿಸಬಹುದಾಗಿದೆ.

RELATED ARTICLES  ಜೀವನದಲ್ಲಿ ಜಿಗುಪ್ಸೆ : ಆತ್ಮಹತ್ಯೆಗೆ ಶರಣಾದ ವ್ಯಕ್ತಿ.