ಭಟ್ಕಳ :ದಸರಾ ಹಬ್ಬದ ಪ್ರಯುಕ್ತ ಭಟ್ಕಳ ತಾಲೂಕಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ದಸರಾ ಕಾವ್ಯೋತ್ಸವವು ಶಿರಾಲಿಯ ಸಾಲೆಮನೆಯ ಮಠದ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನಡೆಯಿತು. ಕವಿಗೋಷ್ಠಿಯಲ್ಲಿ ಕವಿಗಳಾದ ಸುರೇಶ ಮುರ್ಡೇಶ್ವರ ನವರಾತ್ರಿಯ ಪರ್ವಕಾಲದ ವಿಶೇಷತೆಯನ್ನುಕಾವ್ಯದಲ್ಲಿಕಟ್ಟಿಕೊಟ್ಟರೆ, ಉದಯೋನ್ಮುಖ ಕವಿ ಕ್ರಷ್ಣ ಮೊಗೇರಅಳ್ವೇಕೋಡಿ ನವರಾತ್ರಿಯ ಸಂದರ್ಭಕ್ಕಾಗಿಯೇ ರಚಿಸಿದ ಅಳ್ವೆಕೋಡಿ ದುರ್ಗಾಪರಮೇಶ್ವರಿಯನ್ನಾಧರಿಸಿದ ಕವಿತೆಯನ್ನು ವಾಚಿಸಿದರು.

ಕುಮಾರಿ ಚಂದ್ರಪ್ರಭಾ ಕೊಡಿಯಾ ಕೃಷ್ಣನನ್ನು ಕುರಿತ ತಮ್ಮ ಕವನ ವಾಚಿಸಿ ಎಲ್ಲರ ಗಮನ ಸೆಳೆದರು. ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಪ್ರಾಸ್ಥಾವಿಕ ನುಡಿಗಳನ್ನಾಡಿ ನವರಾತ್ರಿಯ ಸಂದರ್ಭದಲ್ಲಿ ಪರಿಷತ್ತಿನ ಮೂಲಕ ಯುವ ಕವಿಗಳಿಗೆ ವೇದಿಕೆಯನ್ನೊದಗಿಸಿ ಅವರಕಾವ್ಯಕೃಷಿಯನ್ನು ಪ್ರೋತ್ಸಾಹಿಸುವುದಲ್ಲದೇ ಅನುಭವಿ ಕವಿಗಳ ಮಾರ್ಗದರ್ಶನ ಒದಗಿಸುವುದು ಕಾರ್ಯಕ್ರಮದ ಉದ್ದೇಶ ಎಂದು ನುಡಿದರು. ಕಲ್ಪಿಸುವುದುಈ ತಮ್ಮ ಕವನ ವಾಚಿಸಿದರು. ಕವಿಗೋಷ್ಠಿಯಅಧ್ಯಕ್ಷತೆ ವಹಿಸಿದ್ದ ಸಾಹಿತಿ ಶ್ರೀಧರ ಶೇಟ್ ಮಾತನಾಡಿ ನವರಾತ್ರಿ ಬರಿಯಒಂಭತ್ತುರಾತ್ರಿಗಳಲ್ಲ.

RELATED ARTICLES  ಜನತಾ ಕಾಲೋನಿಯ‌‌ ನಿವಾಸಿ ನಾಪತ್ತೆ : ದೂರು ದಾಖಲು.

ನಮ್ಮಲ್ಲಿನ ಅರಿಷಡ್ವರ್ಗಗಳ ಜೊತೆಗೆಅಹಂಕಾರಅಮಾನವೀಯತೆಯಂತಹರಾಕ್ಷಸನನ್ನು ಸಂಹರಿಸಿ ಆತ್ಮಜ್ಞಾನದಅರಿವನ್ನು ಬೆಳಗಿಸುವ ರಾತ್ರಿಗಳು ಎಂದು ನುಡಿದರಲ್ಲದೇ ಕವನ ವಾಚಿಸಿದ ಎಲ್ಲ ಕವಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದ ವೇದಿಕೆಯಲ್ಲಿಉದ್ಯಮಿ ಅಶೋಕ ಕಾಮತ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸುರೇಶ ಮುರ್ಡೆಶ್ವರ ನಿರ್ವಹಿಸಿದರೆ ಶಿಕ್ಷಕ ದೇವಿದಾಸ ನಾಯ್ಕಎಲ್ಲರನ್ನು ಸ್ವಾಗತಿಸಿದರು. ಕುಮಾರಿ ಪ್ರಾರ್ಥನಾ ನಾಯ್ಕ ಪ್ರಾರ್ಥನೆ ಹಾಡಿದರು. ಕಾರ್ಯಕ್ರಮದಲ್ಲಿಜನ ಸಾರ್ವಜನಿಕರು, ಮಕ್ಕಳು ಉಪಸ್ಥಿತರಿದ್ದರು.

RELATED ARTICLES  ರಿಲ್ಯಾಕ್ಸ್ ಮೂಡಿನಲ್ಲಿದ್ದಾರೆ ಕಾರವಾರದ ಶಾಸಕ ಸತೀಶ ಸೈಲ್! ಮನೆಯಲ್ಲಿ ಏನು ಮಾಡಿದರು ಗೊತ್ತಾ?