ಹೊನ್ನಾವರ: ದಿನಾಂಕ 16,17,18 ಅಕ್ಟೋಬರ್‍ರಂದು ನಡೆದ ರಾಷ್ಟ್ರಮಟ್ಟದ ಮುಕ್ತ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ತಾಲೂಕಿನ ಅದ್ವೈತ ಸ್ಪೋಟ್ಸ್ ಕ್ಲಬ್ ಹೊನ್ನಾವರ ಚಾಂಪಿಯನ್ ಆಗಿ ಹೊರಹೊಮ್ಮಿದೆ. 3 ದಿನಗಳ ಕಾಲ ಬಾಗಲಕೋಟ ಜಿಲ್ಲೆಯ ಮುದ್ದೇಬಿಹಾಳ, ನಾಲತವಾಡದಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ರಾಷ್ಟ್ರದ ವಿವಿಧ ಪ್ರತಿಷ್ಠ ತಂಡಗಳು ಭಾಗವಹಿಸಿದ್ದವು.
ಅತ್ಯಂತ ಚುರುಸಿನಿಂದ ನಡೆದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕ್ವಾರ್ಟರ್ ಪೈನಲ್‍ನಲ್ಲಿ ಗುಜರಾತ್ ತಂಡವನ್ನು ಎರಡು ಸೆಟ್‍ಗಳಿಂದ ವಿಜಯಿಯಾಗಿ ನಂತರ ಸೆಮಿಪೈನಲ್‍ನಲ್ಲಿ ಮುಂಬೈ ರೈಲ್ವೇಸ ತಂಡವನ್ನು ನೇರಸೆಟ್ಟಿನಲ್ಲಿ ವಿಜಯಯಾಗಿ ಪೈನಲ್‍ನ್ನು ಪ್ರವೇಶಿಸಿ ಅಂತಿಮ ಹಣಾಹಣಿಯಲ್ಲಿ ಜೆಎಸ್‍ಡಬ್ಲ್ಯು ಜಿಂದಲ್ ಬಳ್ಳಾರಿ ತಂಡವನ್ನು ಎರಡು ಸೆಟ್ಟಿನಲ್ಲಿ ವಿಜಯವಾಗಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ತಂಡದ ಪ್ರದರ್ಶನಕ್ಕೆ ನೆರೆದ ಕ್ರೀಡಾಭಿಮಾನಿಗಳು ಹರ್ಷೊದ್ಗಾರ ವ್ಯಕ್ತಪಡಿಸಿ ತಮ್ಮ ಕ್ರೀಡಾಪ್ರೇಮವನ್ನು ಮೆರೆದರು. ಮತ್ತು ಈ ತಂಡ ಅಲ್ಲಿಯ ಎಲ್ಲಾ ಕ್ರೀಡಾಭಿಮಾನಿಗಳ ಮನಸ್ಸನ್ನು ಗೆದ್ದರು. ಈಗಾಗಲೇ ಹಲವು ಅಥ್ಲೆಟಿಕ್ಸನಲ್ಲಿ ಫಲಕವನ್ನು ಗೆದ್ದಿರುವ ಮತ್ತು ಹಲವು ಪಂದ್ಯಾವಳಿಗಳಲ್ಲಿ ಅದ್ವೀತಿಯ ಸಾಧನೆಯನ್ನು ಮಾಡಿರುವ ಅದ್ವೈತ ಸ್ಪೋಟ್ಸ್ ಕ್ಲಬ್‍ನ ಮುಡಿಗೆ ಇನ್ನೊಂದು ಗರಿ ಲಭಿಸಿದಂತಾಗಿದೆ.
ಈ ಸ್ಪೋಟ್ಸ್ ಕ್ಲಬ್‍ನ ಸಾಧನೆಗೆ ಕಾರ್ಯನಿರ್ವಾಹಕ ಅಧಿಕಾರಿಯಾದ ಸುರೇಶ ನಾಯ್ಕ, ತಹಶಿಲ್ದಾರರಾದ ವಿ.ಆರ್.ಗೌಡ, ಕ್ಷೇತ್ರ ಶಿಕ್ಷಣಾಧಿಕಾರಿಯಾಧ ಗಿರೀಶ ಪದಕಿ ಯುವಜನ ಸೇವಾಕ್ರೀಡಾಧಿಕಾರಿಯಾದ ಸುದೇಶ ನಾಯ್ಕ ಹೊನ್ನಾವರ ತಾಲೂಕ ವೈದ್ಯಾಧಿಕಾರಿಗಳು ಉದ್ಯಮಿಗರಾದ ಶ್ರೀಕಾಂತ ನಾಯ್ಕ ಸುಧೀರ ಉಲೇಕಲ್ ಇವರು ಅಭಿನಂದಿಸಿದ್ದಾರೆ.