ಕಾರವಾರ: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ 2018-19ನೇ ಸಾಲಿನ ಮುಖ್ಯಮಂತ್ರಿಗಳ ಸ್ವಯಂ ಉದ್ಯೋಗ ಸೃಜನಾ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ ಕೈಗಾರಿಕೆ ಮತ್ತು ಸೇವಾ ಘಟಕಗಳನ್ನು ಪ್ರಾರಂಭಿಸಲು ಸಾಲ ಪಡೆಯಲಿಚ್ಛಿಸುವ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಘಟಕದ ಗರಿಷ್ಠ ಯೋಜನಾ ವೆಚ್ಚ 10 ಲಕ್ಷ ರೂ. ಆಗಿರುತ್ತದೆ. ಸಾಮಾನ್ಯ ಅಭ್ಯರ್ಥಿಗಳಿಗೆ 18 ರಿಂದ 35 ವರ್ಷ ವಯೋಮಿತಿ, ಪ.ಜಾತಿ/ಪ.ಪಂ. ಮಹಿಳೆ, ಓ.ಬಿ.ಸಿ., ಅಲ್ಪಸಂಖ್ಯಾತರು, ಮಾಜಿ ಸೈನಿಕರು, ಅಂಗವಿಕಲರು ಗರಿಷ್ಠ 45 ವರ್ಷ ವಯೋಮಿತಿಯೊಳಗಿರಬೇಕು.
ಘಟಕದ ಯೋಜನಾ ವೆಚ್ಚ 5 ಲಕ್ಷ ರೂ. ಮತ್ತು ಅದಕ್ಕಿಂತ ಮೇಲ್ಪಟ್ಟ ಯೋಜನೆಗಳನ್ನು ಸ್ಥಾಪಿಸುವ ಅಭ್ಯರ್ಥಿಗಳು 8 ನೇ ತರಗತಿ ಪಾಸಾಗಿರಬೇಕು.
ಆಸಕ್ತ ಅಭ್ಯರ್ಥಿಗಳು ನ. 13 ರೊಳಗಾಗಿ ಸಿಎಂಇಜಿಪಿ ವೆಬ್‍ಸೈಟ್ www.cmegp.kar.nic.in ನಲ್ಲಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೈಗಾರಿಕಾ ಕೇಂದ್ರ ದೂರವಾಣಿ ಸಂಖ್ಯೆ:08382-282302, ಉಪ ನಿರ್ದೇಶಕರು ಧನಂಜಯ ಹೆಗಡೆ, ಮೊಬೈಲ್ ಸಂಖ್ಯೆ 9481372678, ಕುಮಟಾ ಉಪ ವಿಭಾಗ ಸಹಾಯಕ ನಿರ್ದೇಶಕ ಎ.ವಿ.ಜೋಶಿ 9480232789, ಶಿರಸಿ ಉಪ ವಿಭಾಗ ಸಹಾಯಕ ನಿರ್ದೇಶಕ ಎಸ್. ವೆಂಕಟೇಶ, 9449937397, ಕಾರವಾರ ಕೈಗಾರಿಕಾ ವಿಸ್ತರಣಾಧಿಕಾರಿ ಎಸ್. ಹನುಮೇಶ ಮೇಗೂರ, 7795045313, ಹಳಿಯಾಳ ಕೈಗಾರಿಕಾ ವಿಸ್ತರಣಾಧಿಕಾರಿ ರಮೇಶ ಜಾದವ 9483767219 ಇವರನ್ನು ಸಂಪರ್ಕಿಸುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.