ಸಾಗರ :ಹರತಾಳು ಹಾಲಪ್ಪ ಅಣ್ಣನ ಮಗ ರವೀಂದ್ರಗೆ ಜಿ.ಪಂ ಟಿಕೇಟು ಕೊಟ್ಟ ಬೆನ್ನಲ್ಲೇ ಬೀಜೇಪಿಯಲ್ಲಿ ಭಿನ್ನಮತ ಬುಗಿಲೆದ್ದಿದೆ, ಪಕ್ಷದ ಯಾವುದೇ ಸಂಘಟನಾತ್ಮಕ ಜವಾಬ್ದಾರಿ ಹೊರದೇ, ಯಾವುದೇ ರಾಜಕೀಯ ಅನುಭವ ಇರದೇ ಇದ್ದರೂ ಕೇವಲ ಅಣ್ಣನ ಮಗನ ಅನ್ನೋ ಕಾರಣಕ್ಕೆ ಟಿಕೇಟ್ ನೀಡಿದ್ದು ದಶಕಗಳಿಂದ ಬಿಜೆಪಿ ಅನೇಕ ಹುದ್ದೆಯಲ್ಲಿದ್ದ ಹಲವು ಆಕಾಂಕ್ಷಿಗಳು ಈಗ ತಿರುಗಿಬಿದ್ದಿದ್ದಾರೆ. ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷ ಲೋಕೇಶ್ ಹುಣಾಲುಮಡಿಕೆಯೆನ್ನುವವರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ.

ಆವಿನಹಳ್ಳಿ ಜಿ.ಪಂ ಉಪಚುನಾವಣೆ ಇದೇ ಬರುವ ೨೮ರಂದು ನೆಡೆಯಲಿದೆ, ಕಾಗೋಡು ಅಣ್ಣಪ್ಪ ನಿಧನದ ನಂತರ ತೆರವಾದ ಈ ಸ್ಥಾನದ ಮೇಲೆ ಹಲವರು ಟಿಕೆಟ್ ಮೇಲೆ ಕಣ್ಣಿಟ್ಟಿದ್ದರು,  ಆದರೆ ಪ್ರಾರಂಭದಲ್ಲಿ ಇಲ್ಲದ ಹೆಸರು, ಏಕಾಏಕಿ ಬರಲು ಹಾಲಪ್ಪ ಕಾರಣ, ಪಕ್ಷದ ಮೇಲೆ ಹಿಡಿತ ಸಾಧಿಸಲು ಅಣ್ಣನ ಮಗನಿಗೆ ಟಿಕೆಟ್ ನೀಡಿದ್ದು, ಹಲವರ ಕಣ್ಣು ಕೆಂಪಾಗಿಸಿದೆ.

RELATED ARTICLES  ಗೋವಿನ ಉಳಿವಿಗೆ ಹಾಲು ಹಬ್ಬ.

ಬ್ರಾಹ್ಮಣ ಕಾರ್ಯಕರ್ತರ ಮುನಿಸು : ಸಾಗರ ಬಿಜೆಪಿ ಸಧೃಢವಾಗಲು  ಬ್ರಾಹ್ಮಣ ಹಾಗೂ ಲಿಂಗಾಯತ ಕಾರ್ಯಕರ್ತರೇ ಮೂಲಕಾರಣ, ದಶಕಗಳ ಕಾಲ ಹೋರಾಟಮಾಡಿದ್ದಾರೆ, ಕಾಗೋಡಿನಂತಹ ದೊಡ್ಡ ನಾಯಕರನ್ನೇ ಸೋಲಿಸಿದ್ದಾರೆ, ಆದರೆ ಅದರ ಫಲ ಅನುಭವಿಸಿದ್ದು ಮಾತ್ರ ಹರತಾಳು…! ಯಾವಾಗ ಶಾಸಕರಾದರೋ,  ಈ ಕಾರ್ಯಕರ್ತರು ಮುಂದೊಂದು ದಿನ ತಮಗೆ ಮುಳುವಾಗುತ್ತಾರೆಂದು  ಸದ್ದಿಲ್ಲದೇ ಬ್ರಾಹ್ಮಣ ಕಾರ್ಯಕರ್ತರ ಸೈಡ್ಲೈನ್ ಮಾಡುತ್ತಿದ್ದಾರೆಯೆಂದು ಬ್ರಾಹ್ಮಣ ಕಾರ್ಯಕರ್ತರು ಆರೋಪಿಸುತ್ತಿದ್ದಾರೆ, ಹರತಾಳುವಿಗೆ ಬ್ರಾಹ್ಮಣರು ನೆನಪಾಗುವುದು ಚುನಾವಣೆಯಲ್ಲಿ ಮಾತ್ರವೆಂದು ಆರೋಪಿಸುತ್ತಿದ್ದಾರೆ.

ಈ ಹಿಂದೆ ಕ್ಷೇತ್ರದ ಸಭೆಯೊಂದರಲ್ಲಿ ಬ್ರಾಹ್ಮಣರನ್ನು ದಿವಾನ್ ಪೂರ್ಣಯ್ಯಗೆ ಹೋಲಿಸಿ, ಟಿಪ್ಪು ಇರಲಿ, ಒಡೆಯರ್ ಇರಲಿ, ಅಥವಾ ಇಂಗ್ಲೀಷರೇ ಇರಲಿ, ದಿವಾನ್ ಪೂರ್ಣಯ್ಯ ತಮ್ಮ ಹುದ್ದೆಗೆ ಅಂಟಿದ್ದರು, ಬ್ರಾಹ್ಮಣರ ಬುದ್ದಿಯೇ ಹಾಗೆಯೆಂದು ಅಣಿಕಿಸಿದ್ದಾರೆಯೆಂಬ ಬ್ರಾಹ್ಮಣ ಮೂದಲಿಕೆ ಬ್ರಾಹ್ಮಣ ಕಾರ್ಯಕರ್ತರ ಕೋಪಕ್ಕೆ ಕಾರಣವಾಗಿದೆ.

RELATED ARTICLES  ಭಟ್ಕಳದ ಗೋಪಾಲ ಮೋಗೇರರವರಿಗೆ ಶೌರ್ಯ ಪ್ರಶಸ್ತಿ

ಸೈದ್ದಾಂತಿಕ ನಿಲುವಿಗೆ ದ್ರೋಹ : ಹಿಂದೆ ಬೇಳೂರು ಗೊಪಾಲಕೃಷ್ಣ ಬಿಜೇಪಿಯಲ್ಲಿದ್ದಾಗ, ಅವರ ಅಣ್ಣನ ಮಗ ಅಶೋಕರ್ವರಿಗೆ ಟಿಕೆಟ್ ನಿರಾಕರಿಸಲಾಗಿತ್ತು, ಕಾರಣ ಕುಟುಂಬ ರಾಜಕೀಯವೆಂಬ ತಪ್ಪು ಸಂದೇಶ ಹೋಗಬಾರದೆಂಬ ಉದ್ದೇಶಕ್ಕೆ, ಈಗ ಸಿದ್ದಾಂತ ಏನಾಯಿತು?  ಅವರಿಗೊಂದು ಸಿದ್ದಾಂತ, ಇವರಿಗೊಂದು ಸಿದ್ದಾಂತವೇಯೆಂದು ಪ್ರಶ್ನಿಸುತ್ತಿದ್ದಾರೆ…!

ಒಟ್ಟಿನಲ್ಲಿ ಸಾಗರದ ಬಿಜೆಪಿಯಲ್ಲಿ ಬಂಡಾಯವೆದ್ದಿದ್ದಕ್ಕೆ , ಕಾರ್ಯಕರ್ತರಲ್ಲಿ ಚುನಾವಣಾ ಉತ್ಸಾಹ ಬತ್ತಿ ಹೋಗಿದ್ದರೆ, ಇತ್ತ ಬಿಜೆಪಿ ಬಂಡಾಯ ಬಳಸಿಕೊಳ್ಳಲು ಕಾಂಗೈ ರಣೋತ್ಸಾಹದಲ್ಲಿದೆ.