ಬೆಂಗಳೂರು :ರಾಮಚಂದ್ರಾಪುರ ಮಠದ ಶ್ರೀಗಳ ತೇಜೋವಧೆಯ ಪ್ರಯತ್ನಗಳು ಸಾಕಷ್ಟು ನಡೆದಿರುವುದು ಎಲ್ಲ ಜನರಿಗೂ ಗೊತ್ತಿರುವ ವಿಚಾರ. ಆದರೆ ಮತ್ತೆ ಶ್ರೀಗಳ ಬಗ್ಗೆ ಅಪ ಪ್ರಚಾರ ಮಾಡಲು ವೈರಿಪಡೆ ಪ್ಲಾನ್‌ ರೂಪಿಸುತ್ತಿದೆಯೇ ಎಂಬ ಬಗ್ಗೆ ಮಾತುಗಳು ಕೇಳಿ ಬರುತ್ತಿದೆ.

ಹೌದು ರಾಮಚಂದ್ರಾಪುರ ಮಠದ ಸುಪರ್ಧಿಗೆ ಗೋಕರ್ಣ ಸಿಗಬೇಕೆಂಬ ಬಗ್ಗೆ ಉಚ್ಚ ನ್ಯಾಯಾಲಯದಲ್ಲಿ ಹೇಳಿಕೆಗಳು ಬಂದ ನಂತರದಲ್ಲಿ ಶತಾಯಾ ಗತಾಯ ಹೇಗಾದರೂ ಮಾಡಿ ಮಠಕ್ಕೆ‌ ದೇವಾಲಯ ಹಸ್ತಾತರಿಸದೇ ನ್ಯಾಯಲಯದ ತೀರ್ಪನ್ನು ಕಡೆಗಣಿಸಿದ ವಿಚಾರವೂ ಎಲ್ಲರಿಗೂ ತಿಳಿದೆದೆ.

RELATED ARTICLES  ಜೂ.14 ರಿಂದ SSLC ಪರೀಕ್ಷೆ; ವೇಳಾಪಟ್ಟಿ ಹೀಗಿದೆ ನೋಡಿ

ಇದೀಗ ಮತ್ತೆ ಮಠದ ಶ್ರೀಗಳ ಮೇಲೆ ಮಿಥ್ಯಾರೋಪ, ತೇಜೋವಧೆಗೆ ವ್ಯವಸ್ಥಿತ ಶಡ್ಯಂತ್ತರ ನಡೆಯುತ್ತಿದೆ. ಹಿಂದೆ ನಡೆಸಲಾದ ತೇಜೋವಧೆ ಪ್ರಯತ್ನಗಳನ್ನೇ ಮತ್ತೆ ಹೊಸ ರೂಪು ನೀಡಿ ಖಾಸಗೀ ವಾಹಿನಿಗಳ ಮೂಲಕ ಸಮಾಜಕ್ಕೆ ತಲುಪಿಸುವ ಪ್ರಯತ್ನ ಮಾಡುತ್ತಿರುವಂತೆ ಭಾಸ ವಾಗುತ್ತಿದೆ ಎನ್ನುತ್ತಿದ್ದಾರೆ ಸಾರ್ವಜನಿಕರು.

RELATED ARTICLES  ಜಿಲ್ಲೆಯ ಎಲ್ಲಾ ಮಹಿಳಾ ಸಾಂತ್ವನ ಕೇಂದ್ರಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಬೇಕು : ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಲ್. ಚಂದ್ರಶೇಖರ ನಾಯಕ.

ಶ್ರೀಗಳ ತೇಜೋವಧೆಗೆ ಮತ್ತೆ ಪ್ರಯತ್ನಗಳು ಪ್ರಾರಂಭವಾಗುತ್ತಿವೆಯೇ ಎಂಬ ಪ್ರಶ್ನೆ ಭಕ್ತರಲ್ಲಿ ಮೂಡುತ್ತಿದೆ. ನಿಷ್ಕಲ್ಮಶ ಶ್ರೀಗಳ ಬಗ್ಗೆ ಈ ರೀತಿ ತೇಜೋವಧೆಯ ಪ್ರಯತ್ನ‌ ಸಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ.