ಶಿರಸಿ: ಶಿರಸಿಯ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣ ಯಾರಿಗೆತಾನೇ ಗೊತ್ತಿಲ್ಲ ಹೇಳಿ.
ಒಂದು ಕಾಲದಲ್ಲಿ ರಣಜಿ ಪಂದ್ಯವೂ ಇಲ್ಲಿ ನಡೆದಿತ್ತು. ಇಷ್ಟೆಲ್ಲಾ ಉತ್ತಮ‌ ಕ್ರೀಡಾಂಗಣದ ಸ್ಥಿತಿಯನ್ನು ಈಗ ನೋಡಿದರೆ ಅದು ಹೇಳತೀರದು.

ಸಾವಿರಾರು ಕ್ರೀಡಾಪಟುಗಳ ಕನಸನ್ನು ನನಸು ಮಾಡಬೇಕಿದ್ದ ನಗರದ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣ ಸರಿಯಾದ ನಿರ್ವಹಣೆಯಿಲ್ಲದೆ ಸೊರಗುತ್ತಿದೆ.

ಒಂದು ಕಾಲದಲ್ಲಿ ರಣಜಿ ಕ್ರಿಕೆಟ್ ಪಂದ್ಯ ಕೂಡ ಇಲ್ಲಿ ನಡೆದಿತ್ತು. ಈಗ ಅತ್ಯಂತ ಸಾಮಾನ್ಯವಾಗಿ ತಾಲೂಕು ಮಟ್ಟದ ಕ್ರೀಡಾಕೂಟಗಳು ಮಾತ್ರವೇ ಇಲ್ಲಿ ನಡೆಸಲ್ಪಡುತ್ತಿವೆ. ಕ್ರೀಡಾಂಗಣದಲ್ಲಿ 2 ಸಾಲಿನ ಟ್ರ್ಯಾಕ್​ಗಳು ಬಹಳ ಹಿಂದೆಯೇ ನಿರ್ಮಾಣವಾಗಿದ್ದು, ಇನ್ನೂ 4 ಸಾಲುಗಳ ಟ್ರ್ಯಾಕ್​ಗಳ ಅವಶ್ಯಕತೆಯಿದೆ.

ಕ್ರೀಡಾಂಗಣದಲ್ಲಿ ಒಂದು ಜಿಮ್ ಇದೆ. ಆದ್ರೆ.. ಅಲ್ಲಿನ ಅನೇಕ ಸಾಮಗ್ರಿಗಳು ಹಾಳಾಗಿವೆ. ಇದರಿಂದಾಗಿ ಜಿಮ್​​ಗೆ ಬರುವವರ ಸಂಖ್ಯೆ ದಿನೇ ದಿನೆ ಕಡಿಮೆಯಾಗ್ತಿದೆ. ಕ್ರೀಡಾ ಸಾಮಗ್ರಿಗಳ ಕೊರತೆಯಿದೆ. ಮೊದಲು ಸ್ಥಳೀಯವಾಗಿ ಕ್ರೀಡಾ ಸಾಮಗ್ರಿಗಳ ಖರೀದಿಗೆ ಅವಕಾಶ ಇಲ್ಲವಾಗಿತ್ತು. ಈಗ ಲೋಕಲ್ ಆಗಿ ಸಾಮಗ್ರಿಗಳ ಖರೀದಿಗೆ ಅವಕಾಶ ನೀಡಲಾಗಿದೆ. ಕೂಡಲೇ ಹೊಸ ಸಾಮಗ್ರಿಗಳ ಖರೀದಿ ಮಾಡಬೇಕಿದೆ.

RELATED ARTICLES  ಸಂಕೊಳ್ಳಿ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ದೇಣಿಗೆ

ಕ್ರೀಡಾಂಗಣದಲ್ಲಿದ್ದ ಬೆಳಕಿನ ವ್ಯವಸ್ಥೆ ಕೂಡ ಹಾಳಾಗಿದೆ. ಇನ್ನು, ಹೊನಲು ಬೆಳಕಿನಲ್ಲೂ ಆಡುವಂತಾಗಲು ದೀಪದ ಕಂಬಗಳ ವ್ಯವಸ್ಥೆ ಆಗಬೇಕಿದೆ.

ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಅಧೀನದಲ್ಲಿ ಬರುವ ಈ ಕ್ರೀಡಾಂಗಣ ಕ್ರೀಡಾಪಟುಗಳ ಪಾಲಿಗೆ ಇದ್ದೂ ಇಲ್ಲದಂತಾಗಿದೆ ಎಂಬುದೇ ವಿಷಾದದ ಸಂಗತಿಯಾಗಿದೆ.

RELATED ARTICLES  ಯಲ್ಲಾಪುರ ಕ ಸಾ ಪ ದಿಂದ ಚಿಟ್ಟಾಣಿಯವರ ಅಗಲುವಿಕೆಗೆ ಸಂತಾಪ ಸಭೆ

ಹಳೆಯದಾಗಿರುವ ಕ್ರೀಡಾ ಸಾಮಗ್ರಿಗಳನ್ನು ಬದಲಿಸಿ ಹೊಸ ಪರಿಕರ ನೀಡಬೇಕು. 400 ಮೀಟರ್ ಓಟಕ್ಕೆ ಅನುಕೂಲವಾಗಲು ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸಬೇಕಿದೆ. ಜಿಲ್ಲಾ ಕ್ರೀಡಾಂಗಣವಾದರೂ ಕೋಚ್ ವ್ಯವಸ್ಥೆಯಿಲ್ಲದ ಕಾರಣ ಆಸಕ್ತ ಕ್ರೀಡಾಳುಗಳಿಗೆ ತರಬೇತಿ ಸಿಗುತ್ತಿಲ್ಲ. ಇದರಿಂದ ಕ್ರೀಡೆಯಲ್ಲಿ ಭವಿಷ್ಯ ಕಾಣಬೇಕೆನ್ನುವವರಿಗೆ ನ್ಯಾಯ ಸಿಗದಂತಾಗಿದೆ.

ಈ ಎಲ್ಲಾ ಅಂಶಗಳೂ ಕ್ರೀಡಾಧಿಕಾರಿಯವರ ಗಮನದಲ್ಲಿ ಇದ್ದರೂ ಅವರು ಇದಾವುದಕ್ಕೂ ಸ್ಪಮದಿಸುತ್ತಿಲ್ಲ ಎಂಬುದು ಸಾರ್ವಜನಿಕರ ಮಾತಾಗಿದೆ.

ಏನೇ ಆಗಲಿ, ಜಿಲ್ಲಾಮಟ್ಟದ ಕ್ರೀಡಾಂಗಣದಲ್ಲಿಯೇ ವ್ಯವಸ್ಥೆ ಸರಿಯಿಲ್ಲದೆ ಕ್ರೀಡಾಳುಗಳು ಪರದಾಡುವಂತಾಗಿದೆ. ಆದಷ್ಟು ಬೇಗನೆ ಈ ವ್ಯವಸ್ಥೆ ಸರಿಪಡಿಸುವತ್ತ ಇಲಾಖೆ ಗಮನ ನೀಡಲಿ ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.