ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿನ ಕರಾವಳಿ ನಿಯಂತ್ರಣ ವಲಯದ ನದಿ ಪಾತ್ರಗಳಲ್ಲಿ ಗುರುತಿಸಲಾಗಿರುವ ಮರಳು ದಿಬ್ಬಗಳಿಗೆ ನಿರಾಕ್ಷೇಪಣಾ ಪತ್ರ ದೊರೆತಿರುವ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆ ನಡೆಸಿದ ಅವರು, ತಾತ್ಕಾಲಿಕ ಪರವಾನಿಗೆ ಪಡೆಯುವ ಎಲ್ಲರೂ ಕಡ್ಡಾಯವಾಗಿ ಮೊದಲ 10 ಲೋಡ್‍ಗಳನ್ನು ಸರ್ಕಾರದ ಕಟ್ಟಡಗಳ ನಿರ್ಮಾಣ ಉದ್ದೇಶಕ್ಕಿರುವ ಸ್ಟಾಕ್‍ಯಾರ್ಡ್‍ಗಳಿಗೆ ಮಾರಾಟಮಾಡಬೇಕು ಎಂದು ತಿಳಿಸಿದರು.ಇದನ್ನು ಉಲ್ಲಂಘಿಸಿದರೆ ಪರವಾನಿಗೆ ರದ್ದು ಮಾಡುವುದಾಗಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ ಎಚ್ಚರಿಸಿದರು.

ಮರಳು ತೆಗೆಯಲು ತಾತ್ಕಾಲಿಕ ಪರವಾನಿಗೆ ಪಡೆಯುವವರು ಮೊದಲ 10 ಲೋಡ್ ಮರಳನ್ನು ಹಳಿಯಾಳ ಮತ್ತು ಶಿರಸಿಯಲ್ಲಿರುವ ಸರ್ಕಾರದ ಮರಳು ಸಂಗ್ರಹಾಗಾರ (ಸ್ಟಾಕ್‍ಯಾರ್ಡ್)ಕ್ಕೆ ಮಾರಾಟ ಮಾಡುವುದು ಕಡ್ಡಾಯ ಎಂದು

RELATED ARTICLES  ಉತ್ತರ ಕನ್ನಡದ ಇಂದಿನ ಕೊರೋನಾ ಅಪ್ಡೇಟ್

ಉತ್ತರ ಕನ್ನಡ ಜಿಲ್ಲೆಯ ಕಾಳಿ, ಗಂಗಾವಳಿ, ಅಘನಾಶಿನಿ ಮತ್ತು ಶರಾವತಿ ನದಿ ಪಾತ್ರಗಳಲ್ಲಿ ಗುರುತಿಸಲಾಗಿದ್ದ ಒಟ್ಟು 16 ಮರಳು ದಿಬ್ಬಗಳ ಪೈಕಿ ಕಾಳಿ ನದಿಯ 4, ಗಂಗಾವಳಿಯ 1 ಮತ್ತು ಶರಾವತಿಯ 3 ಮರಳು ದಿಬ್ಬಗಳು ಮೀನು ಸಂತಾನಾಭಿವೃದ್ಧಿ ಪ್ರದೇಶದಲ್ಲಿ ಬರುವುದರಿಂದ ಇವನ್ನು ಹೊರತುಪಡಿಸಿ ಉಳಿದ 8 ಮರಳು ದಿಬ್ಬಗಳಲ್ಲಿ ಮರಳು ತೆಗೆಯಲು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ನಿರಾಕ್ಷೇಪಣಾ ಪತ್ರ ನೀಡಿದ್ದು ಸಾಂಪ್ರದಾಯಿಕವಾಗಿ ಮರಳು ತೆಗೆಯುವ ಅಂಕೋಲದ 9 (ಗಂಗಾವಳಿ -51,750 ಮೆ.ಟ.), ಕುಮಟಾ- 37 (ಅಘನಾಶಿನಿ-2,64,366 ಮೆ.ಟ.), ಹೊನ್ನಾವರದ 45 (ಶರಾವತಿ- 1,25,550 ಮೆ.ಟ.) ಮಂದಿಗೆ ತಾತ್ಕಾಲಿಕ ಪರವಾನಿಗೆ ನೀಡಬಹುದಾಗಿದೆ ಎಂದು ಅವರು ತಿಳಿಸಿದರು.

ಸ್ಟಾಕ್‍ಯಾರ್ಡ್‍ಗಳಲ್ಲಿ ನಿರ್ಮಿತಿ ಕೇಂದ್ರದ ಎಂಜಿನಿಯರ್‍ರವರು ಮರಳು ದಾಸ್ತಾನು ಪಡೆದು ಎರಡು ವಾರದ ಒಳಗಾಗಿ ಪರವಾನಿಗೆದಾರರ ಖಾತೆಗೆ ಹಣ ಸಂದಾಯ ಮಾಡಬೇಕು ಹಾಗೂ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ನಗರ, ಪಟ್ಟಣ ಪ್ರದೇಶಗಳಲ್ಲಿ ಮುಖ್ಯಾಧಿಕಾರಿಗಳು ಆಶ್ರಯ ಮನೆ ನಿರ್ಮಿಸುತ್ತಿರುವ ಫಲಾನುಭವಿಗಳ ದಾಖಲೆಗಳನ್ನು ಪರಿಶೀಲಿಸಿ ಪ್ರತಿ ಫಲಾನುಭವಿಗಳಿಗೆ ನೀಡಬಹುದಾದ ಮರಳಿನ ಪ್ರಮಾಣವನ್ನು ದೃಢೀಕರಿಸಿಕೊಡಬೇಕು ಹಾಗೂ ಮರಳು ಯಾರ್ಡಿನಿಂದ ಫಲಾನುಭವಿಗಳು ಮರಳು ಸಾಗಣೆಗೆ ದ್ವಿತೀಯ ಹಂತದ ರಹದಾರಿಗೆ ಕ್ರಮ ವಹಿಸುವಂತೆ ಸೂಚಿಸಿದರು.

RELATED ARTICLES  ಹುಲ್ಲಿನ ಗೊಣವೆಗೆ ಬೆಂಕಿ ಇಟ್ಟ ಕಿಡಿಗೇಡಿಗಳು : ಸುಟ್ಟು ಭಸ್ಮವಾಯ್ತು 40 ಸಾವಿರ ರೂಪಾಯಿಗಳ ಹುಲ್ಲು

ಪರವಾನಿಗೆ ಪಡೆದವರು ಜಿಪಿಎಸ್ ಅಳವಡಿಸಿದ ಬೋಟ್‍ಗಳಲ್ಲಿ ನಿಯಮಾನುಸಾರ ಷರತ್ತಿಗಳಿಗೊಳಪಟ್ಟು ಮರಳು ತೆಗೆಯಬಹುದಾಗಿದೆ. ಅಲ್ಲದೆ ಮರಳು ತೆಗೆಯುವ ಬ್ಲಾಕ್‍ಗಳಲ್ಲಿ ಮರಳು ಸಾಗಣೆ ಸಂಬಂಧ ಎಲ್ಲ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ.