ಭಾರತೀಯರ ನೆಚ್ಚಿನ ಮೆಸೇಂಜಿಂಗ್ ಆಪ್ ಆಗಿರುವ ವಾಟ್ಸ್‌ಆಪ್ ತನ್ನ ಬಳಕೆದಾರರಿಗೆ ಜಾಹಿರಾತು ನೀಡಲು ನಿರ್ಧರಿಸಿದೆ ಎನ್ನಲಾಗಿದೆ. ಈ ಮೊದಲು ಯಾವುದೇ ಕಾರಣಕ್ಕೂ ತನ್ನಲ್ಲಿ ಜಾಹೀರಾತು ಪ್ರಕಟಿಸುವುದಿಲ್ಲ ಎಂದು ಹೇಳಿದ್ದ ವಾಟ್ಸ್‌ಆಪ್ ಸಂಸ್ಥೆ ಈಗ ತನ್ನ ಈ ನಿರ್ಧಾರದಲ್ಲಿ ಯೂ ಟರ್ನ್ ಹೊಡೆಯುವ ಸಾಧ್ಯತೆಯಿದೆ ಎಂದು ಇತ್ತೀಚಿನ ವರದಿಗಳು ದೃಢಪಡಿಸಿವೆ.

WaBetaInfo ಪ್ರಕಟಿಸಿರುವ ವರದಿ ಅನ್ವಯ ವಾಟ್ಸ್‌ಆಪ್ ತನ್ನ​ ಬಳಕೆದಾರರ ಸ್ಟೇಟಸ್​ನಲ್ಲಿ ಜಾಹೀರಾತುಗಳನ್ನು ತೋರಿಸಲಿದೆ ಎಂದು ಹೇಳಲಾಗಿದೆ. ವಾಲ್​ ಸ್ಟ್ರೀಟ್​ ಜರ್ನಲ್​ ಪ್ರಕಟಿಸಿದ್ದ ವರದಿಯಲ್ಲಿಯೂ ಸಹ ವಾಟ್ಸ್‌ಆಪ್​ನಲ್ಲಿ ಜಾಹೀರಾತುಗಳು 2019ರಿಂದ ಆರಂಭವಾಗಲಿವೆ ಎಂದು ಹೇಳಿರುವುದು ಈಗ ವಾಟ್ಸ್‌ಆಪ್ ಕೂಡ ಜಾಹಿರಾತು ತರುವ ಸೂಚನೆಗಳನ್ನು ನೀಡಿದೆ.

ಲಭ್ಯವಾದ ಮಾಹಿತಿ ಅನ್ವಯ ಈ ಜಾಹೀರಾತು ವಿಡಿಯೋ ರೂಪದಲ್ಲಿದ್ದು, ಇನ್ಸ್ಟಾಗ್ರಾಂ ಸ್ಟೋರೀಸ್​ನಂತೆಯೇ ಇದು ಕಾರ್ಯ ನಿರ್ವಹಿಸಲಿದೆ ಎಂದು ತಿಳಿದು ಬಂದಿದೆ. ಫೇಸ್​ಬುಕ್​ ಇದೇ ವರ್ಷ ಜೂನ್​ನಲ್ಲಿ ಇನ್ಸ್ಟಾಗ್ರಾಂ ಸ್ಟೋರೀಸ್​ನಲ್ಲಿ ಜಾಹೀರಾತನ್ನು ಆರಂಭಿಸಿತ್ತು. ಇದೇ ರೀತಿ ಈಗ ವಾಟ್ಸ್‌ಆಪ್‌ನಲ್ಲಿಯೂ ಜಾಹಿರಾತು ಟೆಸ್ಟಿಂಗ್​ನ್ನೂ ಈಗಾಗಲೇ ಆರಂಭಿಸಿದೆ ಎನ್ನಲಾಗಿದೆ.

RELATED ARTICLES  ಇಂದಿನ ನಿಮ್ಮ ದಿನ ಭವಿಷ್ಯ ಹೇಗಿದೆ?ಯಾವ ರಾಶಿಯವರಿಗೆ ಏನು ಫಲ? ಅದೃಷ್ಟ ಸಂಖ್ಯೆ ಯಾವುದು? ದಿನಾಂಕ 03/10/2018 ರ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ …

ಇಲ್ಲಿಯವರೆಗೂ ಉಚಿತವಾಗಿ ಸೇವೆಯನ್ನು ನೀಡುತ್ತಿದ್ದ ವಾಟ್ಸಆಪ್‌ನಲ್ಲಿಯೂ ಆದಾಯ ಮಾಡಲು ಮಾತೃಸಂಸ್ಥೆ ಸಿದ್ಧತೆ ನಡೆಸಿದೆ. ಇದರ ಜೊತೆಯಲ್ಲಿ ಮೆಸೇಂಜಿಂಗ್ ಅಪ್ಲಿಕೇಶನ್ ಗಳಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ವಾಟ್ಸ್‌ಆಪ್ ಜಾಹಿರಾತುಗಳನ್ನು ನೀಡದೇ ಹೇಗೆಲ್ಲಾ ಹಣ ಗಳಿಸುತ್ತಿತ್ತು ಎಂಬ ಸ್ಟೋರಿ ಕೂಡ ವೈರಲ್ ಆಗಿದ್ದನ್ನು ಸಹ ಈ ಕೆಳಗೆ ನೀವು ನೋಡಬಹುದು.

2014 ರಲ್ಲಿ ವಾಟ್ಸ್‌ಆಪ್ ಅನ್ನು ಫೇಸ್‌ಬುಕ್ ಖರೀದಿ ಮಾಡಿದ್ದು 1.23 ಸಾವಿರ ಕೋಟಿ ರೂ.ಗೆ.! ಆದರೆ, ಇಂದು ವಾಟ್ಸ್‌ಆಪ್ ಮೌಲ್ಯ ಎಷ್ಟು ಎಂಬುದನ್ನು ಸುಮ್ಮನೆ ಬೆಲೆ ಕಟ್ಟಲು ಸಾಧ್ಯವಿಲ್ಲ. 2014ರಿಂದ ಈಚೆಗೆ ಭಾರೀ ಮಾರುಕಟ್ಟೆ ಮೌಲ್ಯವನ್ನು ಹೊಂದಿರುವ ವಾಟ್ಸ್‌ಆಪ್ ಬೆಲೆ ಇಂದು ಎಷ್ಟೋ ಲಕ್ಷ ಕೋಟಿಗಳನ್ನು ಮೀರಿದೆ ಎಂದರೆ ಆಶ್ಚರ್ಯವೇನಿಲ್ಲ.!

RELATED ARTICLES  ಭಾರತೀಯ ಸೈನ್ಯದ 'ಅಗ್ನಿವೀರ್' ಮೂಲಕ ದೇಶ ಸೇವೆಗೆ ಹೊರಟ ಹೊನ್ನಾವರದ ಹುಡುಗ.

ಒಂದು ಅಂದಾಜಿನ ಪ್ರಕಾರ, ವಾಟ್ಸ್‌ಆಪ್ ಫೇಸ್‌ಬುಕ್‌ಗಿಂತ ಹೆಚ್ಚು ಗಳಿಕೆ ಮಾಡುತ್ತದೆ ಎಂದರೆ ನೀವು ನಂಬಲೇಬೇಕು. ವಾಟ್ಸ್‌ಆಪ್ ನೇರವಾಗಿ ಏನನ್ನೂ ಮಾರದೆ, ಜಾಹೀರಾತುಗಳನ್ನು ಸಹ ತೋರದೆ ಸಾವಿರಾರು ಕೋಟಿ ಹಣಗಳಿಕೆಯ ಮೂಲವಾಗಿದೆ. ಏಕೆಂದರೆ, ವಾಟ್ಸ್‌ಆಪ್ ಅವಶ್ಯಕತೆ ಫೇಸ್‌ಬುಕ್ ಸೇರಿದಂತೆ ಬಹುತೇಕ ಎಲ್ಲಾ ಆನ್‌ಲೈನ್ ದೈತ್ಯ ಕಂಪೆನಿಗಳಿಗೂ ಇದೆ.

ಮೊದಲೇ ಹೇಳಿದಂತೆ ವಾಟ್ಸ್‌ಆಪ್ ಹಣ ಮಾಡುವುದೇ ನಮ್ಮೆಲ್ಲರಿಗೂ ಒಂತರ ವಿಚಿತ್ರ. ನಮಗೆ ಏನನ್ನೂ ಮಾರದೆ, ಜಾಹೀರಾತುಗಳನ್ನು ಸಹ ತೋರದೆ ಹಣಗಳಿಸುತ್ತಿರುವುದು ನಮ್ಮ ದತ್ತಾಂಶಗಳಿಂದ. ವಾಟ್ಸ್‌ಆಪ್‌ಗೆ ದತ್ತಾಂಶಗಳೇ ಅದರ ಬಂಡವಾಳ. ಹಾಗಾಗಿ, ಈ ದತ್ತಾಂಶ ವಾಟ್ಸ್‌ಆಪ್‌ಗೆ ಕೇವಲ ಚಿನ್ನವನ್ನೆ ಹೊಂದಿರುವ ‘ಚಿನ್ನದ ಗಣಿ” ಇದ್ದಹಾಗೆ.