ಕುಮಟಾ: ಶ್ರೀ ಜಿ.ಎನ್ ಹೆಗಡೆ ಟ್ರಸ್ಟ್ (ರಿ) ಕುನಟಾ,ಭಾರತೀಯ ಶಿಕ್ಷಣ ಮಂಡಳಿ,ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯ ಕುಮಟಾ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಶೈಕ್ಷಣಿಕ ಕಾರ್ಯಾಗಾರ ಹಾಗೂ ಗುರುವಂದನಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯ ಸಂದರ್ಭದಲ್ಲಿ ಹಿರಿಯ ಶಿಕ್ಷಕಿ ಯಮುನಾ ಭಟ್ಟ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಮತಿ ಯಮುನಾ ಭಟ್ಟ ಶಿಕ್ಷಕರು ವಿಷಯಗಳ ಸಂಪತ್ತು ಹೆಚ್ಚಿಸಿಕೊಂಡು ತರಗತಿಗೆ ಪ್ರವೇಶಿಸಬೇಕು, ಶಿಕ್ಷಕರು ತನ್ನನ್ನು ತಾನು ಪರೀಕ್ಷಿಸಿಕೊಳ್ಳಬೇಕು ಎಂಬುದನ್ನು ಕಥನದ ಮೂಲಕ ವಿವರಿಸಿದರು.
ಭಾರತೀಯ ಶಿಕ್ಷಣ ಮಂಡಲದ ಅಖಿಲ ಭಾರತ ಸಹ ಸಂಘಟನಾ ಕಾರ್ಯದರ್ಶಿ ಶಂಕರಾನಂದ ಜಿ. ಶಿಕ್ಷಕ ಗುರುವಿನೆಡೆಗೆ ವಿಕಾಸ ಎಂಬ ವಿಷಯದ ಬಗ್ಗೆ ಮಾತನಾಡಿ ಶಿಕ್ಷಕನಿಗೆ ಸಮಾನ ವ್ಯಕ್ತಿ ಈ ಜಗತ್ತಿನಲ್ಲಿ ಬೇರೊಬ್ಬ ಇಲ್ಲ, ಶಿಕ್ಷಕ ದೇವರಿಗೆ ಸಮಾನ. ಇಡೀ ಸಮಾಜ ಶಿಕ್ಷಕರನ್ನು ಈ ರೀತಿ ನೋಡಬೇಕು ಎಂದರೆ ಶಿಕ್ಷಕ ಹೇಗೆ ಇರಬೇಕು ಎಂಬುದನ್ನು ಶಿಕ್ಷಕನೇ ಯೋಚಿಸಬೇಕು ಎಂದರು.
ಇದೇ ಕಾರ್ಯಕ್ರಮದಲ್ಲಿ ಶೈಕ್ಷಣಿಕ ಪದ್ದತಿಯ ಬದಲಾವಣೆ ಬಗ್ಗೆ ಸಂವಾದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ವೇದಿಕೆಯಲ್ಲಿ ಕೆನರಾ ಕಾಲೇಜ್ ಸೊಸೈಟಿಯ ಅಧ್ಯಕ್ಷರಾದ ಮುರಳೀಧರ ವಾಯ್ ಪ್ರಭು ಕಾರ್ಯಕ್ರಮ ಉದ್ಘಾಟಿಸಿದ್ದರು,ಶ್ರೀ ಜಿ.ಎನ್ ಹೆಗಡೆ ಟ್ರಸ್ಟ ಅಧ್ಯಕ್ಷರಾದ ಜಿ.ಜಿ ಹೆಗಡೆ ವೇದಿಕೆಯಲ್ಲಿದ್ದು ಪ್ರಾಸ್ತಾವಿಕ ಮಾತನಾಡಿದರು. ಪ್ರಾಚಾರ್ಯ ಡಾ. ಸುಬ್ರಾಯ ಜಿ ರಾಯ್ಕರ್ ಅಧ್ಯಕ್ಷತೆ ವಹಿಸಿದ್ದರು. ಪ್ರೀತಿ ಭಂಡಾರ್ಕರ್ ಹಾಗೂ ಇನ್ನಿತರ ಪ್ರಮುಖರು ಹಾಜರಿದ್ದರು.