ಶಿರಸಿ : ಸಹಕಾರಿ ಸಂಸ್ಥೆಯಾದ ಟಿಎಸ್ಎಸ್ ನಲ್ಲಿ ಅಕ್ಟೋಬರ್ 23 ಮತ್ತು 24 ರಂದು ಆಯೋಜಿಸಿರುವ ಅಟೊ ಎಕ್ಸ್ಪೋಮತ್ತು ಫುಡ್ ಎಕ್ಸ್ಪ್ರೆಸ್ನ ಮಾಹಿತಿ ನೀಡುವ ರಾರಯಲಿ ಸೋಮವಾರ ನಗರದಲ್ಲಿ ಸಂಚರಿಸಿತು. ಈ ಸಂಸ್ಥೆಯ ಆವಾರದಲ್ಲಿ ಟಿಎಸ್ಎಸ್ ಅಧ್ಯಕ್ಷ ಶಾಂತಾರಾಮ ಹೆಗಡೆ ಹಾಗೂ ಪ್ರಧಾನ ವ್ಯವಸ್ಥಾಪಕರಾದ ರವೀಶ ಹೆಗಡೆ ಹಸಿರು ನಿಶಾನೆ ತೋರಿಸಿ, ಈ ಎಕ್ಸ್ಪೋ ರಾರಯಲಿಗೆ ಚಾಲನೆ ನೀಡಿದರು.
ನಂತರ ಬೈಕ್ ಹಾಗೂ ವಾಹನಗಳು ರಾರಯಲಿಯಲ್ಲಿ ಸಂಚರಿಸಿದವು. ಈ ಮೂಲಕವಾಗಿ ಎರಡು ದಿನಗಳಕಾಲ ನಡೆಯುವ ಎಕ್ಸ್ಪೋ ಬಗ್ಗೆ ಜನರಿಗೆ ಮಾಹಿತಿ ನೀಡುವ ಕಾರ್ಯ ನಡೆಯಿತು.
ಈ ಮೇಳವು ಗ್ರಾಹಕರಿಗೆ ಹಾಗೂ ಕಂಪನಿಗಳ ನಡುವೆ ಅಟೊ ಲಿಂಕ್ ಮಾಡಲಿಕ್ಕೆ ಅನುಕೂಲವಾಗಲಿದೆ ಎಂದು ಟಿಎಸ್ಎಸ್ ಅಧ್ಯಕ್ಷ ಶಾಂತಾರಾಮ ಹೆಗಡೆ ತಿಳಿಸಿದರು.
ಅಲ್ಲದೇ ಅವರು ಕಳೆದ ವರ್ಷ ಈ ಎಕ್ಸ್ಪೋ ಮಾಡಿದ್ದೆವು. ಈ ಬಾರಿಯ ಅಟೊ ಎಕ್ಸ್ಪೋದಲ್ಲಿ ಹಳೆಯ ಬೈಕ್, ಕಾರು ಬದಲಾವಣೆ ಮಾಡಿಕೊಂಡು ಹೊಸ ವಾಹನ ಖರೀದಿಗೆ ಅನುಕೂಲವಾಗಲಿದೆ. ಇದಲ್ಲದೇ,ರಿಯಾಯಿತಿ ಇದ್ದು, ಫೈನಾನ್ಸ್ ಸೌಲಭ್ಯ ಸಹ ದೊರೆಯಲಿದೆ ಎಂದರು.
ಫುಡ್ ಎಕ್ಸ್ಪ್ರೆಸ್ನಲ್ಲಿ ಉತ್ತರ ಭಾರತೀಯ ಶೈಲಿಯ ತಿನಿಸುಗಳ ಪ್ರದರ್ಶನ ಹಾಗೂ ಮಾರಾಟವೂ ಸಹ ಇದೆ ಎಂದು ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ ತಿಳಿಸಿದರು. ಗ್ರಾಹಕರಿಗೆ ಹಾಗೂ ರೈತರಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಯೋಜನೆಗಳ ಮೂಲಕ ಅನುಕೂಲ ಮತ್ತು ಸೌಲಭ್ಯ ಕಲ್ಪಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಇಂದು ಆಟೊ ಎಕ್ಸ್ಪೋ ನ್ನು ಉದ್ಘಾಟನಾ ಸಮಾರಂಭ ನಡೆಯಲಿದ್ದು,
ಆಟೊ ಎಕ್ಸ್ಪೋ ನ್ನು ಅಕ್ಟೋಬರ್ 23ರ ಬೆಳಗ್ಗೆ 10ಕ್ಕೆ ಎಪಿಎಂಸಿ ಅಧ್ಯಕ್ಷ ಸುನೀಲ ನಾಯ್ಕ ಉದ್ಘಾಟಿಸುವರು. ಅಲ್ಲದೇ, ಕೆನರಾವೃತ್ತ ಮುಖ್ಯ ಅರಣ್ಯ ಸಂರಕ್ಷ ಣಾಧಿಕಾರಿ ಅಶೋಕ ಬಿ.ಬಾಸರಕೋಡ ಭಾಗವಹಿಸುವರು. ಅಕ್ಟೋಬರ್ 24ರ ಸಂಜೆ 6ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಪೊಲೀಸ್ ಉಪಾಧೀಕ್ಷ ಕ ಡಿ.ಎಲ್. ನಾಗೇಶ ಭಾಗವಹಿಸುವರು ಎಂದು ವರದಿಯಾಗಿದೆ.