ಹೊನ್ನಾವರ: ರಾಜ್ಯಾಮಟ್ಟದಲ್ಲೆ ಪರಿಸರ ಜಾಗ್ರತಿಯ ಜೊತೆಗೆ ವನಮಹೊತ್ಸವ ಕಾರ್ಯಕ್ರಮ ಕರೆ ನೀಡಿದ ಶ್ರೀ ಕ್ಷೇತ್ರ ಧರ್ಮಸ್ದಳ ಗ್ರಾಮಾಭಿವೃದ್ದಿ ಯೋಜನೆ ಒಂದೇದಿನದಲ್ಲಿ ಲಕ್ಷಕ್ಕೂ ಅಧಿಕ ಸಸಿಯನ್ನು ಶಾಲೆ ಹಾಗೂ ದೇವಾಲಯದ ಸುತ್ತಮುತ್ತ ನೆಡುವ ಮೂಲಕ ಸಾಮಾಜಿಕ ಜಾಗ್ರತಿ ಜೊತೆ ಪರಿಸರ ಸಂರಕ್ಷಣೆಯ ಸ್ವಚ್ಛತೆ ಸಂದೇಶ ರವಾನಿಸಿತು.
ಆ ನಿಟ್ಟಿನಲ್ಲಿ ಹೊನ್ನಾವರ ತಾಲೊಕಿನಲ್ಲಿ ಹೆರಂಗಡಿ,ನಗರಬಸ್ತಿಕೇರಿ,ಮೂಡ್ಕಣೆ,ಚಿಕ್ಕೊಳ್ಳಿ,ಚಿಕ್ಕನಕೋಡ್,ತೊಳಸಾಣೆ,ಕಾಸರಕೊಡಿನ ಕಳಸಿನಮೊಟ್ಟೆ ,ಹೊಸಪಟ್ಟಣ,ಕೆಕ್ಕಾರ,ಕಡತೋಕಾ,ಜಡ್ಡಿಗದ್ದೆ,ಕೊಡಾಣೆ,ತಲಗೊಡ,ಮುಗಲಿ ಪ್ರದೇಶದ ಸರಕಾರಿ ಪ್ರಾಥಮಿಕ ಹಾಗೂಪ್ರೌಡಶಾಲೆ ದೇವಸ್ದಾನದಲ್ಲಿ ಸ್ವಚ್ಛತೆ ಜೊತೆ ಗಿಡ ನಾಟಿಮಾಡಿ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಲಾಯಿತು. ಸ್ದಳಿಯ ಮಟ್ಟದ ಅರಣ್ಯಾಧಿಕಾರಿಗಳು,ಯೊಜನೆಯ ಕಾರ್ಯಕರ್ತರು,ಜನಪ್ರತಿನಿಧಿಗಳು,ಶಾಲಾ ಹಾಗು ದೇವಾಲಯದ ಸಮಿತಿಯವರು, ಸಂಘದ ಸದಸ್ಯರು ಭಾಗವಹಿಸಿದ್ದರು .ಎಂದು ಯೊಜನಾಧಿಕರಿಯಾದ ಶ್ರೀ ಎಂ. ಎಸ್ ಈಶ್ವರ ಮಾಹಿತಿ ನೀಡಿದರು.