ಕುಮಟಾ: ಮಹಾತ್ಮಾ ಗಾಂಧಿ ಪ್ರೌಢಶಾಲೆ ಚಿತ್ರಿಗಿಯಲ್ಲಿ ವಿದ್ಯಾಧಿದೇವತೆ ಸರಸ್ವತಿ ಪೂಜೆಯು ಶಾಸ್ತ್ರೋಕ್ತವಾಗಿ ನೆರವೇರಿತು. ವಿದ್ವಾನ್ ನಾಗರಾಜ ಭಟ್ಟರು ಪೂಜಾ ವಿಧಿ-ವಿಧಾನಗಳನ್ನು ನಡೆಸಿಕೊಟ್ಟರು.

ಶಿಕ್ಷಕ ಮತ್ತು ವಿದ್ಯಾರ್ಥಿವೃಂದದವರು ಭಜನೆ ಮತ್ತು ಭಕ್ತಿಗೀತೆಗಳನ್ನು ಸಾದರಪಡಿಸಿದರು. ವಿದ್ಯಾರ್ಥಿಪ್ರತಿನಿಧಿಗಳು ಶ್ರೀದೇವಿಗೆ ವಿಶೇಷ ವರ್ಣಮಯ ಪುಷ್ಪ ಮತ್ತು ದೀಪಾಲಂಕಾರ ಕೈಗೊಂಡು ಸಂತೃಪ್ತಪಟ್ಟರು.

RELATED ARTICLES  ಜ 23 ಕ್ಕೆ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಸಲ್ಲಿಸಿದ ಅರ್ಜಿ ತೀವ್ರ ವಿಲೇವಾರಿ ಆಗಬೇಕೆಂದು ಆಗ್ರಹಿಸಿ ಬೃಹತ್ ಪ್ರತಿಭಟನಾ ರ್ಯಾಲಿ.

ಕೆನರಾ ಎಜ್ಯುಕೇಶನ್ ಸೊಸೈಟಿಯ ಸದಸ್ಯ ಕೃಷ್ಣದಾಸ ಪೈ, ನಿವೃತ್ತ ಸಿಬ್ಬಂದಿಗಳಾದ ಮುರಲೀಧರ ಪ್ರಭು, ಬಿಕ್ಕು ಪೈ, ಅಶೋಕ ಭಂಡಾರಿ, ಮುಖ್ಯಾಧ್ಯಾಪಕ ಎನ್.ಆರ್.ಗಜು, ಎಲ್ಲ ಶಿಕ್ಷಕ ಸಿಬ್ಬಂದಿಗಳು, ಹಿತೈಷಿಗಳು ಉಪಸ್ಥಿತರಿದ್ದು ದೇವಿಯ ಅನುಗೃಹಕ್ಕೆ ಪಾತ್ರರಾದರು.

RELATED ARTICLES  ಅಪ್ರಾಪ್ತೆಯ ಮೇಲೆ ನಿರಂತರವಾಗಿ ಲೈಂಗಿಕ ಅತ್ಯಾಚಾರ : ಭಟ್ಕಳದಲ್ಲಿ ಆರೋಪಿ ಅಂದರ್.