ಹೊನ್ನಾವರ : ಶಬರಿಮಲೆ ದೇವಸ್ಥಾನದಲ್ಲಿ ಮಹಿಳೆಯರ ಪ್ರವೇಶದ ವಿಷಯದಲ್ಲಿ ಕೇರಳ ಸರ್ಕಾರವು ಕೂಡಲೇ ಸುಗ್ರಿವಾಜ್ಞೆ ಹೊರಡಿಸಿ ಶಬರಿಮಲೆ ಕ್ಷೇತ್ರದ ಪರಂಪರೆಯ ರಕ್ಷಣೆ ಮಾಡಬೇಕು.ಕೊಟ್ಯಾಂತರ ಹಿಂದೂಗಳ ಶ್ರದ್ಧಾಕೇಂದ್ರವಾದ ಶಬರಿಮಲೆಯ ಪರಂಪರೆಗೆ ಸರ್ವೋಚ್ಚ ನ್ಯಾಯಾಲಯದ ಮಹಿಳೆಯರ ಪ್ರವೇಶದ ತೀರ್ಪಿನಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟುಗಿದೆ. ಧಾರ್ಮಿಕ ವಿಷಯಗಳ ತೀರ್ಪು ನೀಡುವಾಗ ಶಬರಿಮಲೆ ದೇವಸ್ಥಾನದ ತಂತ್ರಿಗಳ, ರಾಜಮನೆತನ ಮತ್ತು ಹಿಂದೂ ಧರ್ಮಚಾರ್ಯರ ಅಬಿಪ್ರಾಯ ಪಡೆಯದಿರುವುದು ದುರದೃಷ್ಟಕರವಾಗಿದೆ. ಇಂದು ದೇಶದಲ್ಲಿ ಬಹುಸಂಖ್ಯಾತ ಹಿಂದೂಗಳ ಧಾರ್ಮಿಕ ಪರಂಪರೆಯನ್ನು ಭಗ್ನ ಮಾಡುವ ಷಡ್ಯಂತ್ರ್ಯವು ನಡೆಯುತ್ತಿದೆ. ಕೆಲವು ನಾಸ್ತಿಕರ ಸ್ವಾರ್ಥಕ್ಕೆ ಲಕ್ಷಾಂತರ ಮಹಿಳೆಯ ಧಾರ್ಮಿಕ ಶ್ರದ್ಧೆಯನ್ನು ಬಲಿಪಶು ಮಾಡುವುದು ಎಷ್ಟು ಸರಿ?. ಕೇರಳದ ಸಾಮ್ಯವಾಧಿ ಸರ್ಕಾರ ಸರ್ವೋಚ್ಚ ನ್ಯಾಯಾಲಯದ ನಿರ್ಣಯವನ್ನು ಆತುರದಿಂದ ಪಾಲಿಸಲು 500 ಮಹಿಳಾ ಪೋಲಿಸರನ್ನು ಶಬರಿಮಲೆಯಲ್ಲಿ ನೇಮಕ ಮಾಡಿರುವುದು ಖಂಡನೀಯವಾಗಿದೆ. ಕೇರಳ ಸರ್ಕಾರ ಜೆಲ್ಲಿಕಟ್ಟು ವಿಷಯದಲ್ಲಿ ಸುಗ್ರಿವಾಜ್ಞೆ ಹೊರಡಿಸಿದಂತೆ ಶಬರಿಮಲೆ ದೇವಸ್ಥಾನದ ಪರಂಪರೆಯನ್ನು ಕಾಪಾಡಲು, ಮೊದಲಿನಂತೆ ಯಥಾವತ್ತಾಗಿ ನಡೆಸಿಕೊಂಡು ಬರಲು ಕೂಡಲೇ ಸುಗ್ರಿವಾಜ್ಞೆಯನ್ನು ಹೊರಡಿಸಬೇಕು. ಇಲ್ಲವಾದರೇ ತೀವ್ರ ವಿರೋಧವನ್ನು ಎದುರಿಸಬೇಕಾದೀತು.
ಕರ್ನಾಟಕದ ಹಿಂದುತ್ವನಿಷ್ಠರ ಹತ್ಯೆಯನ್ನು ಮಾಡುವ ಅಬಿದ ಪಾಶಾ ಮತ್ತು ಅವರ ಗುಂಪಿನ ಮೇಲೆ `ಕೋಕಾ’ ಕಾನೂನಿನಡಿಯಲ್ಲಿ ಕ್ರಮ ಕೈಕೊಳ್ಳಿರಿ.
`ಪಾಪ್ಯುಲರ ಫ್ರಂಟ ಆಫ್ ಇಂಡಿಯಾ’ದ ಮೈಸೂರಿನ ಅಬಿದ ಪಾಶಾ ಮತ್ತು ಅವನ ಗುಂಪು ಆರ್‍ಎಸ್‍ಎಸ್ ಮತ್ತು ಭಾಜಪದ 8 ಹಿಂದುತ್ವನಿಷ್ಠ ಕಾರ್ಯಕರ್ತರನ್ನು ಹತ್ಯೆ ಮಾಡಿರುವುದಾಗಿ ವಿಚಾರಣೆಯ ಸಮಯದಲ್ಲಿ ತಿಳಿದುಬಂದಿದೆ. ಆದರೂ ಕರ್ನಾಟಕದ ಇಂದಿನ ಕಾಂಗ್ರೆಸ್- ಜನತಾದಳ(ಜಾತ್ಯಾತೀತ) ಸಂಯುಕ್ತ ಸರಕಾರವು ಈ ಆರೋಪಿಗಳಿಗೆ ಸಹಾಯ ಮಾಡುತ್ತಿದೆ. ಹಿಂದೂಗಳ ಮೇಲೆ ತಕ್ಷಣವೇ `ಕೋಕಾ’ನುಸಾರ ಕ್ರಮ ಕೈಕೊಳ್ಳ್ಳುವ ಸರಕಾರವು ಈ ಗುಂಪಿನ ಮೇಲೆ ಇದುವರೆಗೂ `ಕೋಕಾ’ (ಕರ್ನಾಟಕ ಗುಂಪು ಅಪರಾಧ ನಿಯಂತ್ರಣ ಕಾನೂನು) ಜಾರಿಗೊಳಿಸಿಲ್ಲ. ಅಲ್ಲದೇ ಅಬಿದ ಪಾಶಾ ಮತ್ತು ಅವರ ಗುಂಪಿನ ಮೇಲೆ ಕೈಕೊಳ್ಳಲಾಗಿರುವ ಕ್ರಮಗಳನ್ನು ಬೇಕೆಂತಲೇ ಸಡಿಲಗೊಳಿಸುತ್ತಿರುವ ಪೊಲೀಸ ಅಧಿಕಾರಿಗಳ ವಿಚಾರಣೆಯನ್ನು ನಡೆಸಿ ಅವರ ಮೇಲೆ ಕ್ರಮ ಕೈಕೊಳ್ಳಬೇಕು . ಹಾಗೂ ಈ ಗುಂಪಿನ ಮೇಲೆ `ಕಕಾನೂನಿನಡಿಯಲ್ಲಿಯಲ್ಲಿ ಕ್ರಮ ಕೈಕೊಳ್ಳಬೇಕು. ಈ ಗುಂಪು ನಡೆಸುವ `ಪಾಪ್ಯುಲರ ಫ್ರಂಟ ಆಫ್ ಇಂಡಿಯಾ’ ಈ ದೇಶದ್ರೋಹಿ ಸಂಘಟನೆಯನ್ನು ಶೀಘ್ರವಾಗಿ ನಿಷೇಧಿಸಬೇಕೆಂದು ಆಗ್ರಹಿಸಿ ಹೊನ್ನಾವರದಲ್ಲಿ ಮನವಿ ಸಲ್ಲಿಸಲಾಯಿತು.

RELATED ARTICLES  ಉತ್ತರಕನ್ನಡದಲ್ಲಿ ನಿನ್ನೆ 877 ಜನರಿಗೆ ಕೊರೋನಾ ಪಾಸಿಟಿವ್..!

ಚರ್ಚ್‍ಗಳಲ್ಲಿ ನಡೆಯುವ ಲೈಂಗಿಕ ಶೋಷಣೆ ಮತ್ತು ಬಲಾತ್ಕಾರ ಪ್ರಕರಣಗಳ ಹಿನ್ನೆಲೆಯಲ್ಲಿ ದೇಶಾದ್ಯಂತ ಎಲ್ಲ ಚರ್ಚಗಳು ಮತ್ತು ಮಿಶನರಿ ಸಂಸ್ಥೆಗಳ ತಪಾಸಣೆ ನಡೆಸಿರಿಕಳೆದ ಕೆಲವು ದಿನಗಳಿಂದ ವಿವಿಧ ಚರ್ಚಗಳು ಮತ್ತು ಮಿಶನರಿ ಸಂಸ್ಥೆಗಳಲ್ಲಿ ಲೈಂಗಿಕ ಶೋಷಣೆ, ಬಲಾತ್ಕಾರ, ಶಿಶು ಮಾರಾಟ ಇತ್ಯಾದಿ ಅವ್ಯವಹಾರಗಳು ಸತತವಾಗಿ ನಡೆಯುತ್ತಿವೆ. ಕೇರಳದ ಚರ್ಚಿನಲ್ಲಿ ಒಬ್ಬ ನನ್ ಮೇಲೆ ಬಿಶಪ್ ಫ್ರಂಕೋ ಮುಲಕ್ಕಲ ಇವರು 13 ಬಾರಿ ಬಲಾತ್ಕಾರ ಮಾಡಿರುವುದು ಬಹಿರಂಗವಾಗಿದೆ, ಇದು ಬಹಿರಂಗಗೊಂಡಿರುವ ಕೇವಲ ಒಂದು ಪ್ರಕರಣವಾಗಿದ್ದು ದೇಶಾದ್ಯಂತ ಇಂತಹ ಅನೇಕ ಘಟನೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಎಲ್ಲ ಚರ್ಚಗಳು ಮತ್ತು ಮಿಶನರಿ ಸಂಸ್ಥೆಗಳ ತಪಾಸಣೆಯನ್ನು ನಡೆಸಲು ಒಂದು ವಿಶೇಷ ಆಯೋಗವನ್ನು ರಚಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹಿಸಿದೆ.

RELATED ARTICLES  ಕೊಂಕಣದ ಸಿ.ವಿ.ಎಸ್.ಕೆ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಮಾದರಿ ತಯಾರಿಕೆ ಸ್ಪರ್ಧೆಯಲ್ಲಿ ಸಾಧನೆ.

ಮನವಿಯನ್ನು ತಹಶೀಲದಾರ ಮುಖಾಂತರ ಗೃಹ ಸಚಿವರು ನವದೆಹಲಿಗೆ ಮನವಿಯನ್ನು ನೀಡಲಾಯಿತು. ಈ ಸಂಧರ್ಭದಲ್ಲಿ ರಮೇಶ ನಾಯ್ಕ, ಮಂಜು ನಾಯ್ಕ, ಎಮ್.ಡಿ.ನಾಯ್ಕ, ಸತೀಶ ಶೇಟ, ಶರತ ಶೇಟ, ಗೌರೀಶ ಗೌಡ, ನವೀತಾ ಕಾಮತ, ಕಲ್ಪನಾ ನಾಯ್ಕ ಮುಂತಾದವರು ಉಪಸ್ತಿತರಿದ್ದರು.