ಪಾಚಿ ಹಸುರಿನ, ತೆಳುವಿನ, ತಣ್ಣಗಿನ,ರಸಭರಿತವಾದ ಒಂದು ಎಲೆ. ಅಡಿಕೆ ಮತ್ತು ಸುಣ್ಣದ ಸಾಂಗತ್ಯದಿಂದ ತಾಂಬೂಲವೆಂದು ಕರೆಯಲ್ಪಡುತ್ತದೆ. ಆಸ್ಟೆಯೋಪೋರೋಸಿಸ್ ಎಂಬ ಮೂಳೆ ಸಂಬಂಧಿ ರೋಗಕ್ಕೆ ವೀಳ್ಯದೆಲೆ ಮದ್ದು. ವೀಳ್ಯದ ರಸ ಸುಣ್ಣದಲ್ಲಿರುವ ಕ್ಯಾಲ್ಶಿಯಮ್ ಅಂಶಕ್ಕೆ ಬೆರೆತು ದೇಹದಲ್ಲಿ ಬಹುಬೇಗ ಹರಡಲ್ಪಡುವುದೇ ಇದಕ್ಕೆ ಕಾರಣ.
ಚಿಗುರು ವೀಳ್ಯದೆಲೆ, ವಾತಹರ, ಉದರ ವಾಯುಹರ ಮತ್ತು ಉತ್ತೇಜನಕಾರಿ. ಇದು ಕಾಮೋತ್ತೇಜಕವಾಗಿದ್ದು ಸೋಂಕನ್ನು ತಡೆಗಟ್ಟುವ ಗುಣವನ್ನೂ ಹೊಂದಿದೆ. ಜೀರ್ಣಶಕ್ತಿ ಹೆಚ್ಚಿಸಿ, ಧ್ವನಿ ಸರಿಪಡಿಸಿ, ಗ್ಯಾಸ್ಟ್ರಿಕ್ ಟ್ರಬಲ್ ನ್ನು ಬಹುಮಟ್ಟಿಗೆ ಗುಣಪಡಿಸುತ್ತದೆ. ಮಕ್ಕಳಲ್ಲಿನ ಕೆಮ್ಮು ಮತ್ತು ಅಜೀರ್ಣಕ್ಕೆ ಈ ಎಲೆಯ ರಸ ಉಪಯೋಗ. ಸಣ್ಣ ಮಕ್ಕಳಲ್ಲಿ ಉಸಿರಾಟದ ತೊಂದರೆಯಾದಾಗ ಎಣ್ಣೆ ಸವರಿ, ಬಾಣಲೆಯಲ್ಲಿ ಬೆಚ್ಚಗೆ ಮಾಡಿದ ವೀಳ್ಯದೆಲೆಯನ್ನು ಎದೆಯ ಮೇಲಿಡುವುದು ಪ್ರಯೋಜನಕಾರಿ.

ಕರಾವಳಿ ಕರ್ನಾಟಕದಲ್ಲಿ ಎಲ್ಲಾ ಶುಭಕಾರ್ಯಗಳಿಗೂ ಎಲೆ ಅಡಿಕೆ ಬೇಕೇಬೇಕು. ನಿತ್ಯದ ದೇವರ ಸಮರ್ಪಣೆಗೂ ಹಣ್ಣು ಕಾಯಿಗಳ ಜತೆಗೆ ಎಲೆ ಅಡಿಕೆ ಇರಲೇಬೇಕು,`ಫಲತಾಂಬೂಲ’ ಕೊಡುವಾಗ ತೆಂಗಿನ ಕಾಯಿಯ ಜತೆಗೆ ವೀಳ್ಯದೆಲೆ ಮತ್ತು ಅಡಿಕೆ ಇಡಲೇ ಬೇಕು.

RELATED ARTICLES  ಹತ್ತೇ ನಿಮಿಷದಲ್ಲಿ ಹಲ್ಲುನೋವು ಮಾಯ! ಇಲ್ಲಿದೆ ಉಪಾಯ!

ಆರೋಗ್ಯಕರ ಲಾಭ:

*ಮೂತ್ರ ವಿಸರ್ಜನೆಗೆ ತೊಂದರೆಯಾದಾಗ ವೀಳ್ಯದ ಎಲೆಯ ರಸವನ್ನು ಹಾಲಿನೊಂದಿಗೆ ಬೆರೆಸಿ ಸೇವಿಸಿದಾಗ ಮೂತ್ರಕ್ಕೆ ಸಂಬಂಧ ಪಟ್ಟ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ

*ಉರಿಯೂತ ಸಂಧಿವಾತ ಮತ್ತು ವೃಷಣಗಳ ಉರಿಯೂತ ತಡೆಯಲು ವೀಳ್ಯದ ಎಲೆಯ ಮೂಲಕ ಚಿಕಿತ್ಸೆ ನೀಡಲಾಗುತ್ತದೆ.ವೀಳ್ಯದ ಎಲೆಯನ್ನು ಬಿಸಿ ಮಾಡಿ ಅದಕ್ಕೆ ಒಂದು ಪದರ ಹರಳೆಣ್ಣೆಯಲ್ಲಿ ಅದ್ದಿ ಊತ ಅಥವಾ ಕೀವು ಆದ ಜಾಗದಲ್ಲಿ ಹಚ್ಚಬೇಕು,ಪ್ರತಿ ಗಂಟೆಗೊಮ್ಮೆ ಇದನ್ನು ಬದಲಿಸುತ್ತಿರಬೇಕು.

*ಬೆನ್ನು ನೋವನ್ನು ಕಡಿಮೆ ಮಾಡುತ್ತದೆ ಎಲೆ ಅಥವಾ ಅದರ ಬಿಸಿ ರಸವನ್ನು ಯಾವುದೇ ಎಣ್ಣೆಯ ಜೊತೆ (ಕೊಬ್ಬರಿ ಎಣ್ಣೆ) ಮಿಶ್ರ ಮಾಡಿ ಹಚ್ಚುವುದರಿಂದ ಬೆನ್ನಿನ ಕೆಳಭಾಗದ ನೋವನ್ನು ಕಡಿಮೆ ಮಾಡುತ್ತದೆ.

RELATED ARTICLES  ಕಡ್ಲೆಹಿಟ್ಟು ಆರೋಗ್ಯಕ್ಕೆ ಎಷ್ಟು ಬಲು ಉಪಕಾರಿ!ನಿಮಗೆ ಗೊತ್ತೆ?

*ಸ್ತನದ ಹಾಲು ಸ್ರವಿಸುವಿಕೆ ವೀಳ್ಯದ ಎಲೆಯನ್ನು ಎಣ್ಣೆಯೊಂದಿಗೆ ಬೆರೆಸಿ ಸ್ತನಕ್ಕೆ ಹಚ್ಚುವುದರಿಂದ ಹಾಲು ಉತ್ಪತ್ತಿ ಹೆಚ್ಚಲು ಸಹಾಯಕವಾಗುತ್ತದೆ.

ಮಧುಮೇಹ:
ವೀಳ್ಯದ ಎಲೆಯ ಮೇಲೆ ಮಾಡಿದ ಸಂಶೋಧನೆಯಿಂದ ಇದರಲ್ಲಿ ಮಧುಮೇಹ ವಿರೋಧಿ ಗುಣ ಇರುವುದು ಕಂಡು ಬಂದಿದ್ದು ಇದು ಚಿಕಿತ್ಸೆಗೆ ನೆರವಾಗುತ್ತದೆ ಎನ್ನಲಾಗಿದೆ.

*ನರಗಳ ದೌರ್ಬಲ್ಯಕ್ಕೆ ವೀಳ್ಯದ ಎಲೆಯ ರಸ ಮತ್ತು ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ನರದ ಸಮಸ್ಯೆ,ನರಗಳ ಬಳಲಿಕೆ,ನಿಶ್ಯಕ್ತಿ ಇವುಗಳಿಗೆ ಪರಿಹಾರ ದೊರಕುತ್ತದೆ.

*ತಲೆನೋವಿಗೆ ವೀಳ್ಯದ ಎಲೆಯಲ್ಲಿರುವ ನೋವುನಿವಾರಕ ಮತ್ತು ತಂಪಾಗಿಸುವ ಗುಣ ತಲೆನೋವಿನ ಪರಿಹಾರಕ್ಕೆ ಸಹಕರಿಸುತ್ತದೆ

*ಮಲಬದ್ಧತೆಗೆ ಮದ್ದು: ವೀಳ್ಯದ ಎಳೆಯ ಕಾಂಡವನ್ನು ಹರಳೆಣ್ಣೆಯೊಂದಿಗೆ ಬೆರೆಸಿ ಗುದನಾಳಕ್ಕೆ ಹಾಕುವುದರಿಂದ ಮಲಬದ್ಧತೆ ತಕ್ಷಣ ನಿವಾರಣೆಯಾಗುತ್ತದೆ.

*ಗಾಯಕ್ಕೆ ಪರಿಹಾರ:
ಗಾಯವಾದ ಜಾಗಕ್ಕೆ ವೀಳ್ಯದ ಎಳೆಯ ರಸದ ಹಚ್ಚಿ ಎಲೆಯಿಂದ ಒತ್ತಿ ಹಿಡಿಯುವುದರಿಂದ 2-3 ದಿನದಲ್ಲಿ ಗಾಯ ಮಾಯವಾಗುತ್ತದೆ.