ಬೆಂಗಳೂರು: ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ….ಬಣ್ಣ ಬಯಲಾದರೂ ಕ್ರಮ ಕೈಗೊಳ್ಳದ ಸರಕಾರ. ಶ್ಯಾಮ್ ಭಟ್ಟರನ್ನು ರಕ್ಷಿಸುತ್ತಿದೆಯೇ ಝಣ…ಝಣ ಕಾಂಚಾಣ.?
ಹೌದು ಇಂತಹದ್ದೊಂದು ಅನುಮಾನ ಜನಸಾಮಾನ್ಯರನ್ನು ಕಾಡುತ್ತಿದೆ. ಇತ್ತೀಚೆಗೆ ಈತನ ಕೋಟಿ..ಕೋಟಿ ರೂಪಾಯಿಗಳ ಹಗರಣ ಬಯಲಾದರೂ ಎ,ಸಿ,ಬಿ ಯಲ್ಲಿ ಪ್ರಕರಣ ದಾಖಲಾದರೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ.

ಭೃಷ್ಟ ಅಧಿಕಾರಿ ಎಂದೇ ಕುಖ್ಯಾತಿ ಪಡೆದಿರುವ ಶ್ಯಾಮ್ ಭಟ್ಟ ಕಳ್ಳ ದಾರಿಯಿಂದ ಉನ್ನತ ಹುದ್ದೆ ಪಡೆಯುವುದರಲ್ಲಿ ನಿಷ್ಣಾತರು. ಪಡೆದ ಉನ್ನತ ಹುದ್ದೆಯನ್ನು ದಕ್ಷತೆಯಿಂದ ನಿರ್ವಹಿಸದೇ ಹುದ್ದೆಗೇ ಭೃಷ್ಟತೆಯ ಕಳಂಕ ಅಂಟಿಸುವುದು ಇವನ ಜಾಯಮಾನ. ಆದರೆ ಅತಿಯಾದರೆ ಎಲ್ಲವೂ ವಿಷ ಎನ್ನುವಂತೆ ಈಗ ಈತನ ಕರ್ಮ ಕಾಂಡಗಳು ಒಂದೊಂದಾಗಿ ಈತನನ್ನು ಸುತ್ತಿಕೊಳ್ಳುತ್ತಿವೆ. ಕೆ.ಪಿ.ಎಸ್.ಸಿ ಅಧ್ಯಕ್ಷ ಹುದ್ದೆ ಎನ್ನುವ ಎ.ಟಿ.ಎಮ್ ಗೆ ಒಕ್ಕರಿಸಿರುವ ಈತ ಹಿಂದೆ ಬಿ.ಡಿ.ಎ.ಯಲ್ಲಿದ್ದಾಗ ಮಾಡಿದ ಹಗರಣಗಳ ಸುರುಳಿ ಬಿಚ್ಚಿಕೊಳ್ಳುತ್ತಿದೆ.

RELATED ARTICLES  ನನ್ನ ಮೊಬೈಲ್ ನಂಬರ್ ಗೆ ಆಧಾರ್ ಲಿಂಕ್ ಮಾಡಲ್ಲ: ಮಮತಾ ಬ್ಯಾನರ್ಜಿ

ಕೋಟಿ…ಕೋಟಿ ಲೂಟಿ ಹೊಡೆದ ಶ್ಯಾಮ ಭಟ್ಟ ನ ಹಗರಣ ಸಾಬೀತಾದ ಕುರಿತ ತನಿಖಾ ವರದಿಯೊಂದು “ಸತ್ವಾಧಾರ ನ್ಯೂಸ್” ಗೆ ಲಭ್ಯವಾಗಿದ್ದು ಸರ್ಕಾರ ಕ್ರಮ ಕೈಗೊಳ್ಳಲು ಮೀನಾಮೇಷ ಎಣಿಸುತ್ತಿರುವುದರ ಹಿಂದಿನ ಮರ್ಮ ಅರ್ಥವಾಗುತ್ತಿಲ್ಲ.

RELATED ARTICLES  ಮೂಡಬಿದಿರೆ ಕ್ಷೇತ್ರದಲ್ಲಿ ದಾಖಲೆ ಮಾಡಿರುವ ಶಾಸಕ ಅಭಯಚಂದ್ರರವರು ಹೇಳಿದ್ದೇನು?

ಸುಳ್ಳು ಕೇಸ್ ಗಳನ್ನು ಸತ್ಯವಾಗಿಸಲು ಹೆಣಗಾಡುವ ಸರ್ಕಾರ ಶ್ಯಾಮ ಭಟ್ಟನ ಕೇಸಲ್ಲಿ ಸತ್ಯವನ್ನು ಸಾಯಿಸಲು ಹೊರಟಿರುವುದು ವಿಪರ್ಯಾಸವೇ ಸರಿ….!

ಇಲ್ಲಿದೆ ನೋಡಿ ದಾಖಲೆಗಳು.!!

IMG 20181023 WA0007
IMG 20181023 WA0010
IMG 20181023 WA0009
IMG 20181023 WA0011
IMG 20181023 WA0012
IMG 20181023 WA0008