ಕಾರವಾರ: ಡೆಂಘೆ ಜ್ವರ ಪರೀಕ್ಷೆಗೆ ಶೀಘ್ರದಲ್ಲಿ ಶಿರಸಿ ಮತ್ತು ಹೊನ್ನಾವರದಲ್ಲಿ ಪ್ರಯೋಗಾಲಯ ಪ್ರಾರಂಭಿಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದು ಜನತೆಗೆ ಈ ವ್ಯವಸ್ಥೆ ಅನುಕೂಲ ಮಾಡಲಿದೆ.

ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಡೆಂಘೆ ಕಾಯಿಲೆ ನಿಯಂತ್ರಣಕ್ಕೆ ಬಂದಿದೆ 76 ಡೆಂಘೆ ಪ್ರಕರಣಗಳು ಖಚಿತವಾಗಿವೆ. 443 ಶಂಕಿತ ಪ್ರಕರಣಗಳು ಪತ್ತೆಯಾಗಿದ್ದವು. 266 ಜನರ ರಕ್ತ ಪರೀಕ್ಷೆ ಮಾಡಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದೆ. ಕಾರವಾರದಲ್ಲಿ 16 ಹಾಗೂ ಹೊನ್ನಾವರದಲ್ಲಿ 34 ಪ್ರಕರಣಗಳು ಪತ್ತೆಯಾಗಿದ್ದು, ಎಲ್ಲೆಡೆ ಜಾಗೃತಿ ಮೂಡಿಸಲಾಗಿದೆ. 30 ಮಲೇರಿಯಾ ಪ್ರಕರಣಗಳು ಖಚಿತವಾಗಿವೆ. ಹೊರ ಜಿಲ್ಲೆಗಳಿಂದ ಬರುವವರಿಂದ ಜಿಲ್ಲೆಯಲ್ಲಿ ರೋಗ ಹರಡುತ್ತಿದೆ ಎಂದು ಮಾಹಿತಿ ಇದೆ.

RELATED ARTICLES  ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಯೋಜನೆಗೆ ಚಾಲನೆ: ಮಾಹಿತಿ ನೀಡಿದ ದಿನಕರ ಶೆಟ್ಟಿ

ಸದ್ಯ ಜಿಲ್ಲಾ ಪ್ರಯೋಗಾಲಯದಲ್ಲಿ ಡೆಂಘೆ ಪರೀಕ್ಷೆಗೆ ಅವಕಾಶವಿದೆ. ಭಟ್ಕಳ, ಹೊನ್ನಾವರ, ಕುಮಟಾ ಭಾಗದಲ್ಲಿ ಡಯಾಲಿಸಿಸ್​ಗೆ ಹೆಚ್ಚಿನ ಬೇಡಿಕೆ ಇದ್ದು, ಖಾಸಗಿ ಕಂಪನಿಗಳ ಸಾಮಾಜಿಕ ಜವಾಬ್ದಾರಿ ನಿಧಿಯಲ್ಲಿ ಐದು ಹೊಸ ಡಯಾಲಿಸಿಸ್ ಯಂತ್ರವನ್ನು ಕೊಡಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಭರವಸೆ ನೀಡಿದ್ದಾರೆ. ಇನ್ನು ಜಿಲ್ಲಾ ಖನಿಜ ಪ್ರತಿಷ್ಠಾನದಿಂದ ಐದು ತಾಲೂಕು ಆಸ್ಪತ್ರೆಗಳಿಗೆ 35 ಕೆವಿ ಜನರೇಟರ್ ಕೊಡಿಸಲಾಗುತ್ತಿದೆ. ಇಲಾಖೆ ಅನುದಾನದಿಂದಲೂ ಖರೀದಿಸಿ ಎಲ್ಲ 11 ಆಸ್ಪತ್ರೆಗಳಲ್ಲಿ ವಿದ್ಯುತ್ ಸಮಸ್ಯೆ ನಿವಾರಣೆಗೆ ಜನರೇಟರ್ ವ್ಯವಸ್ಥೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

RELATED ARTICLES  ಪ್ರವಾಸಕ್ಕೆ ಬಂದವನು ಸಮುದ್ರದಲ್ಲಿ ಕಣ್ಮರೆ..!