ಕುಮಟಾ: ಸೂರ್ಯ-ಚಂದ್ರರಿರುವ ತನಕ ರಾಮಾಯಣ ಮತ್ತು ಅದರ ಕರ್ತೃ ವಾಲ್ಮೀಕಿ ಜನಮಾನಸದಲ್ಲಿ ಒಂದೇ ಆಗಿ ನಿಲ್ಲುತ್ತಾರೆಂದು ಸಂಸ್ಕøತ ಅಧ್ಯಾಪಕ ವಿಷ್ಣು ಭಟ್ಟ ವಾಲ್ಮೀಕಿ ಬುದಕು ಕುರಿತು ವಿಶ್ಲೇಷಿಸಿದರು. ಅವರು ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ವಾಲ್ಮೀಕಿ ಜಯಂತ್ಯೋತ್ಸವದಂದು ಮಾತನಾಡಿದರು.
ಕ್ರೌಂಚಪಕ್ಷಿಗಳ ರೋಧನದಿಂದುಂಟಾದ ಪರಿಣಾಮದಿಂದ ಬೇಡನೊಬ್ಬ ಮಹಾನ್ ಕವಿಯಾಗಿ ಮಾರ್ಪಾಟಾದ ಕತೆಯನ್ನು ವಿದ್ಯಾರ್ಥಿಸಮುದಾಯಕ್ಕೆ ತಿಳಿಯಪಡಿಸಿದರು ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯಾಧ್ಯಾಪಕ ಎನ್.ಆರ್.ಗಜು ವಿದ್ಯಾರ್ಥಿ ದೆಸೆಯಲ್ಲಿಯೇ ಸೃಜನಶೀಲತೆಯನ್ನು ಮೈಗೂಡಿಸಿಕೊಂಡು ಅದ್ಭುತ ಪ್ರತಿಭೆಯಾಗಿ ಹೊರಹೊಮ್ಮಬೇಕಾದ ಕನಸು ಕಾಣಬೇಕೆಂದು ಕರೆ ನೀಡಿದರು.
ಕುಮಾರಿ ಪ್ರಜ್ಞಾ ಆಚಾರಿ, ಕುಮಾರ ದರ್ಶನ ಪುರಾಣ ಕ ರಾಮನಾಮ ಭಜಿಸುವ ಮೂಲಕ ಕಾರ್ಯಕ್ರಮಕ್ಕೆ ಮೆರಗು ನೀಡಿದರು. ಅಧ್ಯಾಪಕ ಕಿರಣ ಪ್ರಭು ವಂದಿಸಿದರು. ಅಧ್ಯಾಪಕ ಎಸ್.ಪಿ. ಪೈ, ಪ್ರಶಾಂತ ಗಾವಡಿ ಸಹಕರಿಸಿದರು.