ಮೈಸೂರು:ಸಾಂಸ್ಕೃತಿಕ ನಗರಿಯ ಹುಡುಗರು ಇಂದು ನಾಡು ನುಡಿ ಭಾಷೆಗೆ ಸಂಬಂಧಿಸಿದ ಹಾಡೊಂದರ ಟೀಸರ್ ಲಾಂಚ್ ಮಾಡಲು ಮುಂದಾಗಿದ್ದಾರೆ.
ತನಿಷ್ ಫಿಲಂನ್ಸ್ ಅರ್ಪಿಸುತ್ತಿರುವ ಈ ಹಾಡಿಗೆ ಸಾಹಿತ್ಯ – ರಚನೆ – ನಿರ್ದೇಶನ ಮಾಡಿರುವುದು ವಿಜಯ್ ವೀರಪ್ಪ. ಇನ್ನು ಈ ಹಾಡಿಗೆ ರಾಗ ಸಂಯೋಜನೆ ಮಾಡಿರುವುದು ನಿತಿನ್ ಸಾಲಿ.ಅಕ್ಷಿತ್ ಟಿ. ಪಿ ಛಾಯಾಗ್ರಹಣ – ಸಂಕಲನ – ಡಿಜಿಟಲ್ ಆಪ್ಟಿಕಲ್ಸ್ ಜವಾಬ್ದಾರಿ ಹೊತ್ತಿದ್ದು, ಪ್ರಯಾಗ್ ಜೆ ಕೋರೆಯಂತಹ ಗಾಯಕ ಕಂಠ ನೀಡಿದ್ದಾರೆ. ಇತ್ತ ಹಾಡಿನ ಸೌಂಡ್ಸ್ ವಿಭಾಗದ ಕೈಂಕರ್ಯವನ್ನು ಆರ್ ಕೆ ಸ್ಟುಡಿಯೋ ನಿರ್ವಹಿಸಿದೆ.
ಇನ್ನು ಈ ಮೈಸೂರು ಹುಡುಗರ ವಿನೂತನ ಪ್ರಯತ್ನದ ನಿರ್ವಹಣಾ ತಂಡದಲ್ಲಿ ದಿನೇಶ್ ಬಿ. ಎಂ, ಚೇತನ್ ಮನೋಜ್ , ಶ್ರೀನಿವಾಸ್ ಕಲಾವಿದ, ಶ್ರೇಯಸ್, ಮಂಜುನಾಥ್ ಅಭಿ , ಸುಬ್ಬು ಹುಣಸೂರು ಕೈ ಜೋಡಿಸಿದ್ದಾರೆ.
ಬಿಟ್ಟಿ ಪ್ರಚಾರ ಗಿಟ್ಟಿಸಲು “ನವೆಂಬರ್ ಮತ್ತು ಕನ್ನಡ” ಒಳ್ಳೆಯ ‘ಅವಕಾಶ’ ಮತ್ತು ‘ಪದಾರ್ಥ’ ಎಂಬ ಮನಸ್ಥಿತಿಯಲ್ಲಿ ಖಂಡಿತ ಪ್ರಸ್ತುತ ಪಡಿಸುತ್ತಿರುವುದಲ್ಲ ! ತುಂಬಾ ಹಿಂದಿನ ಸರಕು ಸಮಯ ಕೂಡಿಬಂದಿದೆ ಅಷ್ಟೆ.
ಒಂದಷ್ಟಲ್ಲ ಸಾಕಷ್ಟು ಸನ್ನಿವೇಶಗಳನ್ನು ಕಣ್ಣೆದುರೇ ನೋಡಿ ಆ ಎಲ್ಲಾವನ್ನೂ ಒಂದೆಡೆ ಸೇರಿಸಿ ಏನಾದರೂ ಮಾಡಬಹುದು ಎಂದು ಯೋಸಿದಾಗ ಮೂಡಿದ್ದು ಈ ಹಾಡು. ಕೆಲವೊಂದು ಸಾಲು, ಕೆಲ ದೃಶ್ಯ ಕೆಲವರಿಗೆ ನೋವಾಗಬಹುದು. ಆದರೆ ಅದು ನಮ್ಮ ಉದ್ದೇಶವಲ್ಲ. ವಾಸ್ತವವನ್ನು ಪ್ರಸ್ತುತ ಪಡಿಸುವಾಗ ನೈಜತೆ ಕಾಯ್ದುಕೊಂಡರೆ ಒಳಿತೆಂದು ಭಾವಿಸಿ ಪ್ರಯತ್ನಿಸಿದ್ದೇವೆ ಅಷ್ಟೆ ಎನ್ನುತ್ತಾರೆ “ಕನ್ನಡ ತಾಯಿ ಮಕ್ಕಳು” ಹಾಲ್ಬಂಬ್ ಸಾಂಗ್ ನಟ – ನಿರ್ದೇಶಕ ವಿಜಯ್ ವೀರಪ್ಪ.
ಇನ್ನು ಇಂದು 6 ಗಂಟೆಗೆ ತಾಯಿ ಮಕ್ಕಳ ಸಂಬಂಧದ ಒಂದು ಸಣ್ಣ ತುಣುಕಿನ ಅನಾವರಣವಾಗಲಿದ್ದು, “ಕನ್ನಡ ತಾಯಿ ಮಕ್ಕಳು” ಆಲ್ಬಮ್ ಸಾಂಗ್ ಟೀಸರ್ ಬಿಡುಗಡೆ ಮಾಡಲಾಗುತ್ತಿದೆ. ನಂತರ ಈ ಆಲ್ಬಮ್ ಸಾಂಗ್ ಅನ್ನು ನವೆಂಬರ್ 1 ರಂದು ಲಾಂಚ್ ಮಾಡಲಾಗುವುದು ಎಂದಿದ್ದಾರೆ.