ಭೂಮಿ ಹುಣ್ಣಿಮೆಯ ದಿನ ಕುಮಟಾದ ರಾಯೇಶ್ವರ ಕಾವೂರು ಕಾಮಾಕ್ಷಿ ಹಾಗೂ ಶಾಂತೇರಿ ಕಾಮಾಕ್ಷಿ ದೇವಾಲಯದಲ್ಲಿ ವಿಶಿಷ್ಟವಾಗಿ ವಡೆ ಸೇವೆ ನೆರವೇರುತ್ತದೆ.
ಪ್ರತಿ ವರ್ಷ ಭೂಮಿ ಹುಣ್ಣಿಮೆಯ ದಿನ ದೇವಸ್ಥಾನದ ಮುಂಭಾಗದಲ್ಲಿ ಒಲೆಯನ್ನು ಇಟ್ಟು ಬಾಣಲಿಯಲ್ಲಿ ಎಣ್ಣೆಯನ್ನು ಹಾಕುತ್ತಾರೆ. ನಂತರ ದೇವಿಗೆ ಮಂಗಳಾರತಿ ಮಾಡುವ ಮೂಲಕ ಸಂಕಲ್ಪ ಮಾಡಿ ಮುಖ್ಯ ಅರ್ಚಕರು ಕಾದ ಬಾಣಲಿಯಲ್ಲಿ ಕುದಿಯುತ್ತಿರುವ ಎಣ್ಣೆಗೆ ಹೂವನ್ನು ಹಾಕಿ ನಂತರ ಹಿಟ್ಟು ಮತ್ತು ಮೆಂತೆಯ ಮಿಶ್ರಣದಿಂದ ಮಾಡಿದ ಹಸಿ ವಡೆಯನ್ನು ಕಾದ ಎಣ್ಣೆಯಲ್ಲಿ ಕರಿಯುತ್ತಾರೆ.

RELATED ARTICLES  27ರಿಂದ ರಾಮಕಥೆ; ರಾಘವೇಶ್ವರ ಶ್ರೀಗಳ ಪುರಪ್ರವೇಶ

ಕುದಿಯುತ್ತಿರುವ ಎಣ್ಣೆಯಲ್ಲಿ ಒಂದೆಡೆ ವಡೆ ಕರಿಯುತ್ತಿದ್ದರೆ ಮತ್ತೊಂದೆಡೆ ಬರಿಗೈನಲ್ಲಿ ಎಣ್ಣೆಗೆ ಕೈಯನ್ನು ಹಾಕಿ ವಡೆಯನ್ನ ತೆಗೆಯುತ್ತಾರೆ. ಇದಾದ ನಂತರ ಸಾಲು ಸಾಲಾಗಿ ಬರುವ ಭಕ್ತರು ದೇವಸ್ಥಾನದ ಅರ್ಚಕರಿಂದ ಹೂವಿನ ಪ್ರಸಾದವನ್ನ ಪಡೆದು ಕಾದಿರುವ ಎಣ್ಣೆಯಲ್ಲಿ ಕೈಯನ್ನ ಹಾಕಿ ವಡೆಯನ್ನ ತೆಗೆಯುತ್ತಾರೆ. ಭೂಮಿ ಹುಣ್ಣಿಮೆಯ ದಿನ ತಮ್ಮ ಒಳಿತಿಗಾಗಿ ಹರಕೆ ಕಟ್ಟಿಕೊಳ್ಳುವ ಭಕ್ತರು ಕಾದ ಬಾಣಲಿಯಲ್ಲಿ ವಡೆ ತೆಗೆಯುವ ಮೂಲಕ ಹರಕೆ ತೀರಿಸುತ್ತಾರೆ.
ಬಾಣಲೆಯಿಂದ ತೆಗೆದ ವಡೆಯನ್ನು ಪ್ರಸಾದವಾಗಿ ಭಕ್ತರಿಗೆ ನೀಡಲಾಗುತ್ತೆ. ಈ ಮೂಲಕ ಸುಮಾರು ನಾನೂರು ವರ್ಷಗಳ ಇತಿಹಾಸವಿರುವ ಈ ಆಚರಣೆ ಕುಮಟಾ ಮೂಲಕ ಜಿಲ್ಲೆಯ ಹಲವು ಭಾಗಕ್ಕೆ ಹರಡಿದ್ದು ಪ್ರಸಿದ್ಧಿ ಪಡೆದಿದೆ.

RELATED ARTICLES  ಶ್ರೀ ಶ್ರೀ ಬಸವಾನಂದ ಸ್ವಾಮೀಜಿಯವರಿಗೆ ಗೌರವ