ಶಿರಸಿ : ದಿನಾಂಕ:01.10.2018ರಂದು ಸುರಿದ ಅಕಾಲಿಕ ಮಳೆ ಹಾಗೂ ಬಿರುಗಾಳಿಯ ಹೊಡೆತಕ್ಕೆಎರಡು ಸಾವಿರಕ್ಕೂ ಹೆಚ್ಚು ಅಡಿಕೆ ಮರಗಳು ನೆಲಸಮಗೊಂಡಘಟನೆ ಸಿದ್ದಾಪುರ ತಾಲೂಕಿನ ಮುಠ್ಠಳ್ಳಿ ಗ್ರಾಮದ ಊರ ತೋಟದಲ್ಲಿ ನಡೆದಿರುವುದು ನಮಗೆಲ್ಲ ತಿಳಿದ ವಿಷಯವಾಗಿದೆ.ಅಡಿಕೆ ಬೆಳೆಯನ್ನೇ ನಂಬಿ ಜೀವನ ನಡೆಸುತ್ತಿರುವ ಸುಮಾರು ಹನ್ನೊಂದು ಕುಟುಂಬದ ಸ್ಥಿತಿ ಚಿಂತಾಜನಕವಾಗಿದೆ.

ಇಲ್ಲಿ ಸಣ್ಣ ಹಾಗೂ ಅತಿ ಸಣ್ಣರೈತರೇ ಇದ್ದು ಇವರಆರ್ಥಿಕ ಬೆಳೆಯೇ ಅಡಿಕೆಯಾಗಿರುವುದರಿಂದಊರಿನಪ್ರತಿಯೊಬ್ಬ ಸದಸ್ಯನುದಂಗಾಗಿದ್ದಾರೆ.ಮುಂದಿನ ಜೀವನ ಹೇಗೆ ಎಂಬ ಆತಂಕದಲ್ಲಿದ್ದಾರೆ.ಅವರಿಗೆಆದ ಹಾನಿಯ ಬಗ್ಗೆ ಹಾಗೂತೋಟದ ಪುನರ್ ನಿರ್ಮಾಣದ ಸಲುವಾಗಿ ಈ ಎಲ್ಲಾರೈತ ಸದಸ್ಯರುಗಳು ಸಂಘಕ್ಕೆ ಮನವಿ ಸಲ್ಲಿಸಿರುತ್ತಾರೆ.ಆ ಊರಿನಎಲ್ಲಾ ರೈತರುಗಳು ಸಂಘದ ಸದಸ್ಯರಾಗಿರುದನ್ನು ಮನಗಂಡು ಅವರಿಗೆ ಆದ ಹಾನಿಯ ಬಗ್ಗೆ ದಿ ತೋಟಗಾರ್ಸ್‍ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿ., ಶಿರಸಿ ಅಡಿಕೆ ಬೆಳೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ಸದಸ್ಯರಿಗೆ ಸಹಾಯ ಮಾಡಲು ಮುಂದಾಗಿದೆ.

RELATED ARTICLES  ಶ್ರೀ ಶ್ರೀ ಕಲ್ಲಪ್ಪ ಅಪ್ಪಾಜಿಯವರಿಗೆ ಗೋಕರ್ಣ ಗೌರವ

ಪ್ರಕೃತಿ ವಿಕೋಪದಿಂದ ಹಾಳಾದ ಊರ ತೋಟದ ಅಡಿಕೆ ಬೆಳೆಗಾರರಿಗೆ ಸಂಘದಿಂದ ಮುಂಬರುವ ದಿನಗಳಲ್ಲಿ ಇವರುಗಳು ಬೆಳೆಸುವ ಪ್ರತಿ ಅಡಿಕೆ ಸಸಿಗಳಿಗೆ ವರ್ಷಕ್ಕೆರೂ.90 ರಂತೆ ಮುಂದಿನ 10 ವರ್ಷಗಳ ಅವಧಿಗೆ ಸಂಘದಿಂದ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲು ನಿರ್ಧರಿಸಲಾಗಿದೆ. ಇದರಿಂದಾಗಿಈ ಊರಿನ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ರೂ.18-20 ಲಕ್ಷಗಳ ಸಹಾಯ ಮಾಡಿದಂತಾಗುತ್ತದೆ. ಸಂಕಷ್ಟದಲ್ಲಿರುವ ರೈತ ಸದಸ್ಯರ ಕುಟುಂಬವನ್ನು ಮೇಲೆತ್ತುವ ಮಾನವೀಯತೆಯದೃಷ್ಠಿಯಿಂದ ಈ ಯೋಜನೆಯನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದು ಸಂಘದ ಅಧ್ಯಕ್ಷರಾದ ಶ್ರೀ ಶಾಂತಾರಾಮ ವಿ. ಹೆಗಡೆ ಶೀಗೇಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಹೊನ್ನಾವರ - ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ಶಿಕ್ಷೆ!