ಕುಮಟಾ : ತಾಲೂಕಿನ ದೇವಗಿರಿ ಹರನೀರಿನಲ್ಲಿರುವ ರಿಲಾಯೆಬಲ್ ಕ್ಯಾಶ್ಯೂ ಫ್ಯಾಕ್ಟರಿಯಲ್ಲಿ ಸುಮಾರು 600ಕ್ಕೂ ಅಧಿಕ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಮಾಜಿ ಶಾಸಕರಾದ ಶಾರದಾ ಶೆಟ್ಟಿ ಬೇಟಿ ನೀಡಿ ಕಾರ್ಮಿಕರ ಸಮಸ್ಯೆ ಆಲಿಸಿದರು.

ಈ ಸಂದರ್ಭದಲ್ಲಿ ತಮ್ಮ ಕಷ್ಟವನ್ನು ತೋಡಿಕೊಂಡ ಕಾರ್ಮಿಕರು ತಾವು ಕಳೆದ ಆರು ವರ್ಷಗಳಿಂದ ಫ್ಯಾಕ್ಟರಿಯಲ್ಲಿ ದುಡಿಯುತ್ತಿದ್ದು, ಈ ಮೊದಲು ನೀಡುತ್ತಿದ್ದ ಸಂಬಳವನ್ನು ಏಕಾಏಕಿ ಕಡಿಮೆಮಾಡಿದ್ದರಿಂದ ಕಂಗಾಲಾದ ತಾವು ಪ್ರತಿಭಟನೆ ನಡೆಸುತ್ತಿರುವುದಾಗಿ ವಿವರಿಸಿದರು.

RELATED ARTICLES  ಕ್ರೀಡಾಕೂಟದಲ್ಲಿ ಮೂರೂರಿನ ಪ್ರಗತಿ ವಿದ್ಯಾಲಯ ಸಾಧನೆ.

ಈ ಸಂದರ್ಭದಲ್ಲಿ ಮಾಜಿ ಶಾಸಕಿ ಶಾರದಾ ಶೆಟ್ಟಿಯವರು ವ್ಯವಸ್ಥಾಪಕ ಮಂಡಳಿಯವರ ಜತೆ ಮಾತನಾಡಿ ಕಾರ್ಮಿಕರ ಸಮಸ್ಯೆ ಕುಂದುಕೊರತೆಗಳನ್ನು ಕೂಡಲೇ ಪರಿಹರಸುವಂತೆ ಆಗ್ರಹಿಸಿದರು. ಮತ್ತು ಸಮಸ್ಯೆಗೆ ವ್ಯವಸ್ಥಾಪಕ ಸ್ಪಂದಿಸದಿದ್ದಲ್ಲಿ ಕಾರ್ಮಿಕರಿಗೆ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು.

RELATED ARTICLES  ರಾಷ್ಟ್ರಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ಮೇಘನಾ ನಾಯಕ ಪ್ರಥಮ

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವಿ.ಎಲ್.ನಾಯ್ಕ, ಹನುಮಂತ ಪಟಗಾರ, ಸಚಿನ್ ನಾಯ್ಕ, ಪಾಂಡು ಪಟಗಾರ , ಗೋವಿಂದ ಪಟಗಾರ ಮುಂತಾದವರು ಹಾಜರಿದ್ದರು.