ಕಾರವಾರ: ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನೀಡುವ 2018ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಹಿರಿಯ ಸಾಹಿತಿ ಶಾಂತಾರಾಮ ನಾಯಕ ಹಿಚಕಡ ಆಯ್ಕೆ ಆಗಿದ್ದಾರೆ ಎಂದು ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅವರು ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಜಿಲ್ಲಾ ಕಸಾಪ ನೀಡುತ್ತಿದ್ದು ಪ್ರಸಕ್ತ ಸಾಲಿನ ಪ್ರಶಸ್ತಿಗೆ ಶಾಂತಾರಾಮ ನಾಯಕ ಅವರ ಹೆಸರನ್ನು ಆಯ್ಕೆ ಸಮಿತಿ ಅಂತಿಮಗೊಳಿಸಿದೆ. ನ.4ರಂದು ಅಂಕೋಲಾದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಾಂತಾರಾಮ ನಾಯಕ ಅವರಿಗೆ ಪ್ರಶಸ್ತಿ ನೀಡಿ ಗಭರವಿಸಲಾಗುವುದು. ಪ್ರಶಸ್ತಿಯು ರೂ. 15 ಸಾವಿರ ಮೊತ್ತದೊಂದಿಗೆ ಪ್ರಶಸ್ತಿ ಫಲಕ ಮತ್ತು ಪ್ರಶಸ್ತಿ ಪತ್ರವನ್ನೊಳಗೊಂಡಿರುತ್ತದೆ ಎಂದು ಅರವಿಂದ ಕರ್ಕಿಕೋಡಿ ತಿಳಿಸಿದ್ದಾರೆ.
80 ವರ್ಷ ವಯಸ್ಸಿನ ಶಾಂತಾರಾಮ ನಾಯಕ ಹಿಚಕಡ ಅವರು ಈವರೆಗೆ ಕಾಡಹೆಣ್ಣು, ದಾರಿ ಮಾಡಿಕೊಡಿ, ಅನುಭವ, ಆತಂಕ, ಅನುರಾಗ, ನಿನಾದ, ಸಂಭ್ರಮ, ಒಡಲಗೀತ ಕವನ ಸಂಕಲನ, ಕಥೆಯಾದಳು ಗಂಗೆ ಕಥಾ ಸಂಕಲನ, ನಾಡವರು ಒಂದು ಸಾಂಸ್ಕøತಿಕ ಅಧ್ಯಯನ, ಹಂಬಲ, ಹುಡುಕಾಟ, ಒಡನಾಟ ಪ್ರಬಂಧ ಸಂಕಲನ, ಚರಿತ್ರೆಯಲ್ಲಿ ಮರೆತರವರ ಕಥೆ, ಸ್ವಾತಂತ್ರ್ಯ ಹೋರಾಟದ ಹೊರಳು ನೋಟ- ಸಂಶೋಧನ ಗ್ರಂಥ ಹೀಗೆ ಅನೇಕ ಕೃತಿಗಳನ್ನು ಕನ್ನಡಕ್ಕೆ ಕೊಟ್ಟಿದ್ದಾರೆ. 1984 ರಲ್ಲಿ ಜಿನದೇವ ಪ್ರಕಾಶನವನ್ನು ಹುಟ್ಟು ಹಾಕಿ ಒಟ್ಟೂ 20 ಕೃತಿಗಳನ್ನು ಪ್ರಕಟಿಸಿದ್ದಾರೆ. ರಾಜ್ಯ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದ ಶಾಂತಾರಾಮ ನಾಯಕರು ಡಾ.ಸೈಯ್ಯದ್ ಜಮೀರುಲ್ಲಾ ಷರೀಫ್ ಕಾವ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ.
ಯುವ ಬರಹಗಾರರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಆರಂಭಿಸಲಾದ ಜಿಲ್ಲಾ ರಾಜ್ಯೋತ್ಸವ ಯುವ ಕೃತಿ ಪುರಸ್ಕಾರಕ್ಕೆ ಕುಮಟಾದ ಉದಯ ಮಡಿವಾಳ, ಸಿದ್ದಾಪುರದ ಶೋಭಾ ಹಿರೇಕೈ, ಮುಂಡಗೋಡದ ಷರೀಫ್ ಹಾರ್ಸಿಕಟ್ಟಾ, ಸಿರಸಿಯ ದತ್ತಗುರು ಕಂಠಿ ಅವರು ಆಯ್ಕೆ ಆಗಿದ್ದಾರೆ. ನಾಲ್ವರು ಯುವ ಬರಹಗಾರರಿಗೂ ನ.4ರಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದ ವೇದಿಕೆಯಲ್ಲೇ ಯುವ ಕೃತಿನ ಪುರಸ್ಕಾರ ನೀಡಿ ಗೌರವಿಸಲಾಗುವುದು. ಪುರಸ್ಕಾರವು ಮಹತ್ವದ ಕೃತಿಯೊಂದಿಗೆ ಫಲಕ, ಪುರಸ್ಕಾರ ಪತ್ರ ಒಳಗೊಂಡಿರುತ್ತದೆ.
Home Uttara Kannada ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಸಾಹಿತಿ ಶಾಂತಾರಾಮ ನಾಯಕ ಹಿಚಕಡ ಆಯ್ಕೆ ಉದಯ, ಶೋಭಾ, ಷರೀಫ್, ದತ್ತಗುರು...