ಬೆಂಗಳೂರು: ಮೀ ಟೂ ಗಂಭೀರ ಆರೋಪ ಮಾಡಿದ್ದ ನಟಿ ಶ್ರುತಿ ಹರಿಹರನ್ ಅವರ ವಿರುದ್ಧ ನಟ ಅರ್ಜುನ್ ಸರ್ಜಾ ಅವರು ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದಾರೆ.

ಧ್ರುವ ಸರ್ಜಾ ಮೂಲಕ ಮಾನನಷ್ಟ ಮೊಕದ್ದಮೆಯನ್ನು ಬೆಂಗಳೂರಿನ ಸಿವಿಲ್ ಕೋರ್ಟ್ನಲ್ಲಿ ದಾಖಲು ಮಾಡಿಸಿದ್ದು, 5 ಕೋಟಿ ರೂಪಾಯಿ ನಷ್ಟ ಪರಿಹಾರ ನೀಡಲು ಮನವಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ಅರ್ಜಿ ಇವತ್ತು ಸಂಜೆ ಇಲ್ಲದ ಕಾರಣ ನಾಳೆ ವಿಚಾರಣೆಗೆ ಬರಲಿದೆ.

RELATED ARTICLES  ಮಾಜಿ ಸಚಿವ ಜನಾರ್ಧನ ರೆಡ್ಡಿಗೆ ನ್ಯಾಯಾಂಗ ಬಂಧನ.

ಅರ್ಜುನ್ ಸರ್ಜಾ ಅವರ ಮ್ಯಾನೇಜರ್ ಶಿವಾರ್ಜುನ ಅವರು ಸೈಬರ್ ಕ್ರೈಂ ಠಾಣೆಗೆ ದೂರ ನೀಡಿದ್ದು, ಸರ್ಜಾ ಅವರ ಟ್ವೀಟರ್ ಮತ್ತು ಈ ಮೇಲ್ ಖಾತೆ ಹ್ಯಾಕ್ ಮಾಡಲಾಗಿದ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ ಎಂದು ತಿಳಿದುಬಂದಿದೆ.

RELATED ARTICLES  ಸಾಲ ಮನ್ನಾ ಮಾಡಿ : ದೆಹಲಿಯಲ್ಲಿ ಲಕ್ಷ ಮಂದಿ ರೈತರ ಪ್ರತಿಭಟನೆ.!!

ನಟ ಅರ್ಜುನ್ ಸರ್ಜಾ ಅವರು ಸದ್ಯ ಚೆನ್ನೈನಿಂದ ಬೆಂಗಳೂರಿನತ್ತ ಆಗಮಿಸುತ್ತಿದ್ದು ಇಂದು ಮಧ್ಯಾಹ್ನ ಅಂಬರೀಶ್ ನೇತೃತ್ವದಲ್ಲಿ ಸಂಧಾನ ಸಭೆ ನಡೆಯಲಿದೆ.
ಶ್ರುತಿ ಆರೋಪಗಳು ಗಂಭೀರವಾಗಿದ್ದು ಅವರ ಜತೆ ಯಾವುದೇ ರೀತಿಯ ಸಂಧಾನ ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.