ಕುಮಟಾ: ತಾಲೂಕಿನ ದೇವಗಿರಿ ಹರನೀರಿನಲ್ಲಿರುವ ರಿಲಾಯೆಬಲ್ ಕ್ಯಾಶ್ಯೂ ಫ್ಯಾಕ್ಟರಿಯಲ್ಲಿ ಸುಮಾರು 600ಕ್ಕೂ ಅಧಿಕ ಕಾರ್ಮಿಕರು ಕಳೆದ 4 ದಿನಗಳಿಂದ ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಮಾಜಿ ಶಾಸಕಿಯರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ದಿ:24/10/2018 ರಂದು ಭೇಟಿನೀಡಿ ಪ್ರತಿಭಟನಾಕಾರರೊಂದಿಗೆ ಸಮಾಲೋಚನೆ ಅವರ ಸಮಸ್ಯೆಗಳನ್ನು ಆಲಿಸಿದ ಬೆನ್ನಲ್ಲೇ ಅಲ್ಲಿರುವ ಮ್ಯಾನೇಜರ್ ಅವರಲ್ಲಿ ಕಾರ್ಮಿಕರ ಸಮಸ್ಯೆಯನಯನ್ನು ಪರಿಹರಿಸುವಂತೆ ಮತ್ತು ಕಾರ್ಮಿಕರಿಗೆ ಮೊದಲಿನಂತೆ ಆಹಾರದ ವ್ಯವಸ್ಥೆ ನೀಡುವಂತೆ ಆಗ್ರಹಿಸಿದರು.

RELATED ARTICLES  ಸ್ಕೌಟ್ಸ್ ಸಂಸ್ಥಾಪಕ: ಬೇಡನ್ ಪೊವೆಲ್ ದಿನಾಚರಣೆ

IMG 20181025 WA0007

ಫ್ಯಾಕ್ಟರಿಯ ಮಾಲಿಕರು ಮತ್ತು ವ್ಯವಸ್ಥಾಪಕ ಮಂಡಳಿಯವರಿಗೆ ಫೋನ್ ಮಾಡಿ ಕೂಡಲೇ ಸ್ಥಳಕ್ಕೆ ಬಂದು ಕಾರ್ಮಿಕರ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿದರು.

ಅದರಂತೆ ಇಂದು ವ್ಯವಸ್ಥಾಪಕ ಮಂಡಳಿಯವರು ಆಗಮಿಸಿ ಕಾರ್ಮಿಕರ ಜೊತೆ ಸಮಾಲೋಚನೆ ನಡೆಸಿ ಸಮಸ್ಯೆ ಬಗೆಹರೆಯುವವರೆಗೂ ತಾವು ಸ್ಥಳದಲ್ಲಿ ಹಾಜರಿದ್ದು ಕಾರ್ಮಿಕರ ಸಮಸ್ಯೆ ಬಗೆಹರಿಯುವಲ್ಲಿ ಪ್ರಮುಖ ಪಾತ್ರವಹಿಸಿದರು.

RELATED ARTICLES  "ಅಘನಾಶಿನಿಗೆ ಆರತಿ" : ಪುಳಕಗೊಂಡ ಮನಗಳು.

ತಮ್ಮ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ ಮಾಜಿ ಶಾಸಕಿಯರಿಗೆ ಕಾರ್ಮಿಕರೆಲ್ಲರು ಒಕ್ಕೋರಿಲಿನಿಂದ ಧನ್ಯವಾದ ತಿಳಿಸಿ ತಮ್ಮ ಪ್ರತಿಭಟನೆ ಹಿಂತೆಗೆದಕೊಂಡರು.

ಈ ಸಂದರ್ಭದಲ್ಲಿ ವಿ.ಎಲ್.ನಾಯ್ಕ, ಹನುಮಂತ ಪಟಗಾರ, ಎಸ್. ಟಿ. ನಾಯ್ಕ,,ಸಚಿನ್ ನಾಯ್ಕ, ಪಾಂಡು ಪಟಗಾರ , ಗೋವಿಂದ ನಾಯ್ಕ , ಕಮಲಾಕರ ನಾಯ್ಕ ಮುಂತಾದವರು ಹಾಜರಿದ್ದರು…