ಕುಮಟಾ:ಇದೇ ಬರುವ ದಿನಾಂಕ : 28-10-2018 ರವಿವಾರದಂದು ಸಂಜೆ 4.00ರಿಂದ ನಿರಂತರ ನಾಲ್ಕನೇ ವರ್ಷದ ಕತಗಾಲ ಯಕ್ಷೋತ್ಸವ–2018 ಕಾರ್ಯಕ್ರಮ ಕುಮಟಾ ತಾಲೂಕಿನ ಎಸ್.ಕೆ.ಪಿ ಪ್ರೌಢಶಾಲೆ ಕತಗಾಲಿನ ಒಳಾಂಗಣ ರಂಗಮಂದಿರದಲ್ಲಿ ನಡೆಯಲಿದೆ.

ಸಂಜೆ 7.00 ಗಂಟೆಗೆ ಶ್ರೀ ಗೋಪಾಲ ಆಚಾರ್ಯ ತೀರ್ಥಹಳ್ಳಿ ಇವರಿಗೆ ಯಕ್ಷೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು ಸ್ಥಳಿಯ ಶಾಸಕರಾದ ಶ್ರೀ ದಿನಕರ ಶೆಟ್ಟಿ, ವಿಧಾನ ಪರಿಷತ್‍ನ ವಿಪಕ್ಷ ನಾಯಕರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಬಿ.ಜೆ.ಪಿ. ಯುವಮೋರ್ಚ ಪ್ರಧಾನ ಕಾರ್ಯದರ್ಶಿಗಳು ಹಾಗೂ ಖ್ಯಾತ ವಾಗ್ಮಿಗಳಾದ ಶ್ರೀ ತೇಜಸ್ವಿ ಸೂರ್ಯ, ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಶ್ರೀ ಶಿವಾನಂದ ಹೆಗಡೆ ಕಡತೋಕ, ಶ್ರೀ ಗಜಾನನ ಪೈ, ಶ್ರೀ ಪ್ರದೀಪ ನಾಯಕ ಹಾಗೂ ಸ್ಥಳೀಯ ಮುಖಂಡರುಗಳು ಪಾಲ್ಗೊಳ್ಳಲಿದ್ದಾರೆ.

RELATED ARTICLES  ಪೋಲೀಸ್ ಬಲೆಗೆ ಬಿದ್ದ ಪರೇಶ ಮೇಸ್ತಾ ಹತ್ಯೆಯ ಆರೋಪಿಗಳು: ಎಲ್ಲೆಡೆ ಮೆಚ್ಚುಗೆಗಳಿಸಿದ ಪೋಲೀಸ್ ಕಾರ್ಯ

ಯಕ್ಷೋತ್ಸವದಲ್ಲಿ ವಿಶೇಷವಾಗಿ ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಸುಪ್ರಸಿದ್ಧ ಕಲಾವಿದರಿಂದ ಸುದರ್ಶನ, ಭೀಷ್ಮ ವಿಜಯ ಮತ್ತು ವತ್ಸಾಖ್ಯ ಎಂಬ ಮೂರು ಪೌರಾಣಿಕ ಪ್ರಸಂಗಗಳು ಪ್ರದರ್ಶನಗೊಳ್ಳಲಿದೆ. ಉಚಿತ ಪ್ರವೇಶÀವಾಗಿದ್ದು ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಿಕೊಡಬೇಕೆಂದು ಕಾರ್ಯಕ್ರಮದ ಸಂಘಟಕ ಸಹೋದರರರಾದ ಶ್ರೀ ಮಂಜುನಾಥ ಎಸ್. ಭಟ್ಟ ಮತ್ತು ಶ್ರೀ ವಿನಾಯಕ ಎಸ್. ಭಟ್ಟ ಬಂಡಿವಾಳ ಹಾಗೂ ಯಕ್ಷೋತ್ಸವ ಸಮಿತಿ ಸದಸ್ಯರು ತಿಳಿಸಿರುತ್ತಾರೆ.

RELATED ARTICLES  ನಿಯಂತ್ರಣ ತಪ್ಪಿ ಕಾರು ಪಲ್ಟಿ: ಯಲ್ಲಾಪುರ ವಜ್ರಳ್ಳಿ ಬಳಿ ಘಟನೆ.