ಕುಮಟಾ: “ವಸ್ತುವಿನ ಶ್ರೇಷ್ಟತೆ, ಕರ್ತೃವಿನ ಹಿರಿಮೆ, ಪುರುಷಾರ್ಥ ಪ್ರತಿಪಾದನೆ, ಆಧ್ಯಾತ್ಮ ಚಿಂತನೆ ಈ ಎಲ್ಲಾ ದೃಷ್ಠಿಯಿಂದಲೂ ವಾಲ್ಮೀಕಿ ಉತ್ತುಂಗ ಸ್ಥಾನದಲ್ಲಿ ನಿಲ್ಲುತ್ತಾನೆ, ಅದೆಂತಹ ಚಿತ್ರವೆಂದರೆ “ರಾಮೋ ವಿಗ್ರಹವಾನ್ ಧರ್ಮ:“ ಎಂದೇ ತೃಪ್ತರಾಗುತ್ತಾರೆ, ಹೀಗೆ ಕಾವ್ಯ-ಆಧ್ಯಾತ್ಮ-ಚರಿತ್ರೆ ಮೂರನ್ನು ಏಕತ್ರ ಸಂಯೋಜಿಸಿದ ಆದಿಕವಿ ವಾಲ್ಮೀಕಿ,ನಿತ್ಯ ಪಾರಾಯಣ ಗೃಂಥವನ್ನು ನಮಗೆ ನೀಡಿದ್ದಾನೆ, ಅಲ್ಲದೇ ಈಗ ವಾಲ್ಮೀಕಿ ರಾಮಾಯಣದ ಮೇಲೆ ಜಗತ್ತನದ್ಯಾಂತ ಮರುನೋಟ ಹರಿದಿದೆ”, ಎಂದು ಮುಖ್ಯೋಧ್ಯಾಪಕ ರೋಹಿದಾಸ ಸಣ್ಣಪ್ಪ ಗಾಂವಕರ ನುಡಿದರು. ಅವರು ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲಿನಲ್ಲಿ ವಾಲ್ಮೀಕಿ ಜಯಂತಿ ದಿನದಂದು ವಿದ್ಯಾರ್ಥಿಗಳಿಗೆ ನೀತಿ ಬೋಧನೆಗಳನ್ನು ಪಾಲಿಸುವ ಮಹತ್ತರ ಜವಬ್ದಾರಿಯಿದೆ ಎಂದರು.

RELATED ARTICLES  ಹೊನ್ನಾವರ ತಾಲೂಕಿನ ನೂತನ ಬಸ್ ನಿಲ್ದಾಣದ ಕಾಮಗಾರಿ ಪರಿಶೀಲಿಸಿದ ಶಾಸಕ ದಿನಕರ ಶೆಟ್ಟಿ.

ಪ್ರಾಸ್ತಾವಿಕ ಮಾತುಗಳನ್ನಾಡಿದ ಎನ್.ರಾಮು.ಹಿರೇಗುತ್ತಿ “ವಾಲ್ಮೀಕಿಯವರ ರಾಮಾಯಣದಲ್ಲಿ ಸಾರ್ವಕಾಲಿಕ ಸತ್ಯ ಮಡುಗಟ್ಟಿದೆ, ವಾಲ್ಮೀಕಿಯವರು ತಮ್ಮ ಜೀವನದ ಪಥವನ್ನು ನೀತಿ ಭೋದಕ ರೀತಿಯನ್ನಾಗಿಸಿದ್ದಾರೆ” ಎಂದರು. ಶಿಕ್ಷಕರಾದ ವಿಶ್ವನಾಥ ಬೇವಿನಕಟ್ಟಿ, ನಾಗರಾಜ.ಜಿ.ನಾಯಕ, ಬಾಲಚಂದ್ರ.ವಿ.ಹೆಗಡೇಕರ್, ಮಹಾದೇವ.ಗೌಡ, ಜಾನಕಿ.ಗೊಂಡ, ಶಿಲ್ಪಾ.ನಾಯಕ, ಇಂದಿರಾ ನಾಯಕ, ಸೌಜನ್ಯ ಬಂಟ್, ಕವಿತಾ ಅಂಬಿಗ, ದೇವಾಂಗಿನಿ ನಾಯಕ, ಗೋಪಾಲಕೃಷ್ಣ ಗುನಗಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿü ವಿನಯಾ ಗೌಡ ಸ್ವಾUತಿಸಿದರು, ಸಹನಾ ಗೌಡ ವಂದಿಸಿದರು, ವಿದ್ಯಾರ್ಥಿ ಪ್ರತಿನಿಧಿ ವೆಂಕಟೇಶ ಪಟಗಾರ ಕಾರ್ಯಕ್ರಮ ನಿರ್ವಹಿಸಿದರು.

RELATED ARTICLES  ಸೋಡಿಗದ್ದೆಯಲ್ಲಿ ರಂಜಿಸಿದ ನಿನಾದ ಭಕ್ತಿ ಸಂಗೀತ ಕಾರ್ಯಕ್ರಮ

ವರದಿ: ಎನ್.ರಾಮು.ಹಿರೇಗುತ್ತಿ