ವೈವಿಧ್ಯಮಯ ಮತ್ತು ಹೊಸತನವನ್ನು ತನ್ನ ಪ್ರತಿಗ್ರಾಹಕ ಸ್ನೇಹಿ ಚಟುವಟಿಕೆಯಲ್ಲಿ ವ್ಯಕ್ತಪಡಿಸುತ್ತಿರುವದಿ ತೋಟಗಾರ್ಸಕೋ-ಆಪರೇಟಿವ್ ಸೇಲ್ ಸೊಸೈಟಿಯಆವಾರದಲ್ಲಿ ಅಕ್ಟೋಬರ್ 23 &24 ರಂದು ನಡೆದ ಅಟೋ ಎಕ್ಸ್‍ಪೋ-2018 ಮತ್ತು ಫುಡ್‍ಎಕ್ಸ್‍ಪ್ರೆಸ್‍ನ್ನು ಮೇಳವು ಅತ್ಯಂತ ಯಶಸ್ವಿಯಾಯಿತು. ಸಾಕಷ್ಟು ವಾಹನ ಕಂಪನಿಗಳು ತೀವ್ರ ಪೈಪೋಟಿಯಲ್ಲಿತಮ್ಮತಮ್ಮ ವಾಹನಗಳ ವೈಶಿಷ್ಟ್ಯಗಳನ್ನು ಗ್ರಾಹಕರಿಗೆತೃಪ್ತಿಆಗುವಂತೆ ತಿಳಿಸಿ ಮಾರಾಟ ಮಾಡುವಲ್ಲಿ ಯಶಸ್ವಿಯಾದರು.ಈ ಎರಡು ದಿನಗಳ ಕಾಲ ನಡೆದ ಮೇಳದಲ್ಲಿ 27 ಹೊಸ ಕಾರುಗಳು ಹಾಗೂ 72 ದ್ವಿಚಕ್ರ ವಾಹನಗಳು ಮಾರಾಟವಾದವು.ಇದರಜೊತೆಯಲ್ಲಿ50ಕ್ಕೂಅಧಿಕ ಹಳೆಯ ವಾಹನಗಳು ಮಾರಾಟಕ್ಕೆ ಬಂದಿದ್ದು, ಇದರಲ್ಲಿ14 ವಾಹನಗಳು ಸ್ಥಳದಲ್ಲಿಯೇ ಮಾರಾಟವಾದರೆ ಬಹುತೇಕ ವಾಹನಗಳು ವಿಚಾರಣೆಆದವು.ಪ್ರತಿ ವಾಹನದಖರೀದಿಯ ಮೇಲೆ ಕಂಪನಿ ಮತ್ತು ಡೀಲರ್‍ಗಳಿಂದ ವಿಶೇಷ ರಿಯಾಯತಿ ನೀಡಲಾಯಿತು.ಸಂಘದಿಂದ ಸಹ ಖರೀದಿಸಿದ ಗ್ರಾಹಕರಿಗೆಖಚಿತಉಡುಗೊರೆ ಮತ್ತು ಲಕ್ಕಿ ಡ್ರಾಯೋಜನೆಯನ್ನು ರೂಪಿಸಲಾಗಿತ್ತು.

ಇದೇ ಪ್ರಥಮ ಬಾರಿಗೆ ವಿವಿಧ ತಿನಿಸುಗಳ ಸಂಭ್ರಮ “ಫುಡ್‍ಎಕ್ಸ್‍ಪ್ರೆಸ್” ಸಹ ಆಯೋಜನೆಮಾಡಲಾಗಿತ್ತು,ದಕ್ಷಿಣ ಭಾರತೀಯ ಮತ್ತುಉತ್ತರ ಭಾರತೀಯ ಶೈಲಿಯ ತಿನಿಸುಗಳಾದರುಮಾಲಿ ರೋಟಿ, ತಂದೂರಿರೋಟಿ, ಪ್ರೈಡ್‍ರೈಸ್, ಗೋಬಿ ಮಂಚೂರಿ,ದೋಸೆ, ಗಿರಮಿಟ್, ಮಿರ್ಚಿ, ಪಾನಿಪುರಿಗಳನ್ನು ತಯಾರಿಸಿಗ್ರಾಹಕರಿಗೆ ಪೂರೈಸಿಲಾಯಿತು.ಈ ರೀತಿಯ ತಿನಿಸುಗಳಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

RELATED ARTICLES  ಗೋಫಲ ಟ್ರಸ್ಟ್ ವತಿಯಿಂದ ಗೋಶಾಲೆಗಳಿಗೆ16.85 ಲಕ್ಷ ರೂಪಾಯಿ ದೇಣಿಗೆ

ಈ ಎರಡು ದಿನಗಳ ಕಾಲ ನಡೆದ ಮೇಳದಲ್ಲಿ ದ್ವಿ ಚಕ್ರ ವಾಹನ ಹಾಗೂ ನಾಲ್ಕು ಚಕ್ರದ ವಾಹನ ಖರೀದಿ ಹಾಗೂ ಬುಕ್ಕಿಂಗ್ ಮಾಡಿದಗ್ರಾಹಕರಿಗೆ ಸಂಘದಲ್ಲಿ ನಡೆಸಿದ ಲಕ್ಕಿ ಡ್ರಾ ಮೂಲಕ ದ್ವಿ ಚಕ್ರ ವಾಹನ ಖರೀದಿ ವಿಜೇತರಿಗೆಫೋರಗೊನ್ ಬ್ಯಾಗ್ ಹಾಗೂ ನಾಲ್ಕು ಚಕ್ರದವಾಹನ ಖರೀದಿ ವಿಜೇತರಿಗೆ ಬೆಡ್‍ಗಳನ್ನುನೀಡಲಾಯಿತು. ಅದರ ಪ್ರಕಾರವಾಗಿ ಮೊದಲ ಹಾಗೂ ಎರಡನೇ ದಿನದ ದ್ವಿ ಚಕ್ರ ವಾಹನದಖರೀದಿಯವಿಜೇತರಾಗಿಶ್ರೀ ರವಿ ಜಿ. ಹೆಗಡೆ ಹಾಗೂ ಶ್ರೀ ಗಣಪತಿ ಕೆ.ಭಟ್ಟಆಯ್ಕೆಗೊಂಡರೆ ಮತ್ತು ನಾಲ್ಕು ಚಕ್ರದ ವಾಹನ ಖರೀದಿಯ ವಿಜೇತರಾಗಿ ಶ್ರೀ ರವೀಂದ್ರ ಗೌಳಿ ಶಿರಸಿ ಹಾಗೂ ಶ್ರೀ ಸುಧೀರ ಸಿ. ಹೆಗಡೆ ಹೂಡ್ಲಮನೆ ಇವರು ಆಯ್ಕೆಯಾದರು.ದ್ವಿ ಚಕ್ರ ವಾಹನ ಬುಕ್ಕಿಂಗ್‍ಗೆ0.5 ಲೀಟರ್‍ಅಟ್ಲಾಸ್‍ವೆರ್‍ಥರ್ಮಸ್ ಹಾಗೂ ನಾಲ್ಕು ಚಕ್ರದ ವಾಹನ ಬುಕ್ಕಿಂಗ್‍ಗೆ 1 ಲೀಟರ್‍ಅಟ್ಲಾಸ್‍ವೆರ್‍ಥರ್ಮಸ್‍ಖಚಿತಉಡುಗೊರೆರೂಪದಲ್ಲಿ ಸಂಘದಿಂದ ನೀಡಲಾಯಿತು.ಈ ಎರಡು ದಿನಗಳಲ್ಲಿ ವಾಹನ ಖರೀದಿಸಿದಗ್ರಾಹಕರ ಹೆಸರುಗಳನ್ನು ನೋಂದಣಿ ಮಾಡಿಕೊಂಡುಚೀಟಿಎತ್ತುವ ಮೂಲಕವಾಗಿ ಅದೃಷ್ಠಶಾಲಿಗಳನ್ನು ಮೆಗಾ ಪ್ರೈಜ್‍ಗೆಆಯ್ಕೆ ಮಾಡಲಾಯಿತು.ಆ ಪ್ರಕಾರವಾಗಿ ದ್ವಿ ಚಕ್ರ ವಾಹನ ಖರೀದಿ ಮಾಡಿದ ಶ್ರೀ ರವಿ ಮರಾಠಿ ಶಿರಸಿ ಹಾಗೂ ನಾಲ್ಕು ಚಕ್ರದ ವಾಹನ ಖರೀದಿಸಿದ ಶ್ರೀ ಪ್ರಕಾಶಎಸ್. ಹೆಗಡೆ ಇವರುಗಳು ವಿಜೇತರಾಗಿ ಆಯ್ಕೆಗೊಂಡರು.

RELATED ARTICLES  ದಿನಕರ ಶೆಟ್ಟಿಯವರಿಗೆ ಗೌರವಾರ್ಪಣೆ ಮಾಡಿದ ನಾಡವರ ಸಮುದಾಯ.

ಈ ಎಲ್ಲ ಕೊಡುಗೆಗಳ ಪ್ರಾಯೋಜಕತ್ವವನ್ನುಟಿ.ಎಸ್.ಎಸ್. ಸಂಸ್ಥೆ ವಹಿಸಿಕೊಂಡಿತ್ತು.ಈ ಮೇಳದಲ್ಲಿ ವಿಚಾರಣೆ ನಡೆಸಿದ ಎಲ್ಲಾಗ್ರಾಹಕರ ಹೆಸರುಗಳನ್ನು ನೋಂದಣಿಮಾಡಿಕೊಂಡು ಸಂಗ್ರಹಿಸಿ ದಿನಕ್ಕೆ ಎರಡು ಬಾರಿ ಲಕ್ಕಿ ಡ್ರಾಮಾಡಲಾಯಿತು.ಈ ಲಕ್ಕಿ ಡ್ರಾದಲ್ಲಿಆಯ್ಕೆಯಾದವಿಜೇತರಿಗೆಸಂಘದ ವತಿಯಿಂದಆಕರ್ಷಕಬಹುಮಾನಗಳನ್ನು ನೀಡಲಾಯಿತು.ಒಟ್ಟಿನಲ್ಲಿಗ್ರಾಹಕರು ಈ ಮೇಳದ ಪ್ರಯೋಜನವನ್ನು ಪಡೆದು ವಾಹನಗಳ ಖರೀದಿ ಹಾಗೂ ಮಾರಾಟ ಮಾಡುವುದರ ಮೂಲಕವಾಗಿ ಆಟೋಎಕ್ಸ್‍ಪೋ-2018 &ಫುಡ್‍ಎಕ್ಸ್‍ಪ್ರೆಸ್‍ಮೇಳವು ಯಶಸ್ವಿಯಾಗಲು ಕಾರಣಿಕರ್ತರಾದರು.