ನಿನ್ನ ನೂರು ಕುಹಕಗಳು
ಕುಗ್ಗಿಸದು ನನ್ನ.
ನೀನಾಡುವ ಚುಚ್ಚು ನುಡಿಗಳು
ಅಳುಕಿಸದು ನನ್ನ.
ನಿನ್ನ ವಿತಂಡವಾದಗಳು
ಬದಲಿಸಲಾರವು,
ನನ್ನ ನಿಲುವುಗಳನ್ನ.
ನಿನ್ನ ನಿಂದನೆಗಳಾವುವು
ಧೃತಿಗೆಡಿಸಲಾರವು ನನ್ನ.
ನಿನ್ನ ಕುಹಕ,ಚುಚ್ಚು ನುಡಿ,
ನಿಂದನೆಗಳನ್ನ ನಾನು
ಸದಾ ಸ್ವಾಗತಿಸುವೆ.
ಅವು ನನ್ನ ಗುರಿ, ಧ್ಯೇಯವನ್ನು
ಸದಾ ಜ್ಞಾಪಿಸುತ್ತವೆ.
ದಿನನಿತ್ಯ ನನ್ನಲ್ಲಿ
ಆತ್ಮಾವಲೋಕನ ನಡೆಸುತ್ತವೆ.
ನೂರು ನಮನಗಳು ನಿನಗೆ
ನನ್ನ ಸದಾ ಜಾಗೃತಗೊಳಿಸುವ
ನಿಂದಕನೆ.
ರಚನೆ- ಉಮೇಶ ಮುಂಡಳ್ಳಿ
9945840552