ಶಿರಸಿ: ವರ್ಷಕ್ಕೊಮ್ಮೆ ವೈದ್ಯರುಗಳನ್ನು ಸೇರಿಸಿ ಸಾರ್ವಜನಿಕರೊಡನೆ ಸಂವಹನ ನಡೆಸುವ ವ್ಯವಸ್ಥೆಗೆ ತಾಲೂಕಾ ಪಾರಂಪರಿಕ ವೈದ್ಯ ಪರಿಷತ್ ಅನುದಾನ ನೀಡಬೇಕು, ಪಂಚಾಯತ ಮಟ್ಟದಲ್ಲಿ ಪಾರಂಪರಿಕ ವೈದ್ಯರ ಮುಖಾಂತರ ಔಷಧ ಸಸ್ಯಗಳ ದಾಖಲಾತಿಯನ್ನು ಮಾಡಿ, ಅದರ ಬೆಳವಣಿಗೆಗೆ ಅರಣ್ಯ ಇಲಾಖೆಯ ಜೊತೆಗೆ ಕೆಲಸ ಮಾಡುವಂತೆ ಗ್ರಾಮ ಅರಣ್ಯ ಸಮಿತಿಗಳ ಜೊತೆಗೆ ಕೈ ಜೋಡಿಸುವುದು, ಪಂಚಾಯತ ಮಟ್ಟದಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಸಿ ಕಾಪಾಡಿಕೊಂಡು ಬರುವಲ್ಲಿ ನಿರ್ದಿಷ್ಟ ಸ್ಥಳಗಳನ್ನು ಗುರುತಿಸಿ, ಸಸ್ಯಗಳನ್ನು ಬೆಳೆಸುವ ಕಾರ್ಯಕ್ರಮ ಹಮ್ಮಿಕೊಳ್ಳುವುದು, ಪಾರಂಪರಿಕ ವೈದ್ಯರುಗಳಿಗೆ ಬೇಕಾಗುವ ಸಾಮಾಗ್ರಿಗಳನ್ನು ಒದಗಿಸುವಲ್ಲಿ ಸಹಾಯ ಮಾಡುವುದು, ವೈದ್ಯರುಗಳಿಗೆ ವಿಮಾ ಸೌಲಭ್ಯವನ್ನು ಸುಲಭ ಕಂತಿನಲ್ಲಿ ಕಲ್ಪಿಸುವುದು, ವೈದ್ಯರುಗಳಿಗೆ ತಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವಲ್ಲಿ ನುರಿತ ಪಾರಂಪರಿಕ ವೈದ್ಯರಿಂದ ತರಬೇತಿ, ಸಸ್ಯ ಪಾಲನೆ, ವರ್ಧನೆ, ಪೋಷಣೆ, ರೋಗ, ಪರೀಕ್ಷೆ ಮತ್ತು ಸಮಕಾಲೀನ ಜ್ಞಾನ ಒದಗಿಸುವ ವ್ಯವಸ್ಥೆಯನ್ನು ಕಲ್ಪಿಸುವುದು ಹಾಗೂ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಔಷಧೀಯ ಗಿಡಮೂಲಿಕೆಗಳ ಪ್ರದೇಶ ಹಾಗೂ ತಾಣಗಳಿಗೆ ಪ್ರವಾಸ ಹೋಗಿ ಬರುವಲ್ಲಿ ವೈದ್ಯರಿಗೆ ಅನುದಾನ ನೀಡುವುದು, ವೈದ್ಯರು ತಾವು ಕೊಡುವ ಔಷಧಗಳಿಗೆ ನಿರ್ವಹಣಾ ವೆಚ್ಚವನ್ನು ತೆಗೆದುಕೊಳ್ಳುವಲ್ಲಿ ಅನುವು ಮಾಡಿಕೊಡುವುದು ಮತ್ತು ತಾಲೂಕಾ ವೈದ್ಯರುಗಳು ತಾಲೂಕಿನ ಕೇಂದ್ರ ಸ್ಥಳದಲ್ಲಿ ಸೇರಿ ಔಷಧವನ್ನು ಕೊಡುವುದು ಹಾಗೂ ಸಭೆಗಳನ್ನು ನಡೆಸುವುದಕ್ಕೆ ಸರಕಾರದ ಮಟ್ಟದಲ್ಲಿ ವಿಶೇಷ ನಿವೇಶನ, ಕಟ್ಟಡ, ಸಮುದಾಯ ಭವನ ಒದಗಿಸಬೇಕು ಎಂದು ನಿರ್ಣಯ ಅಂಗೀಕರಿಸಲಾಯಿತು. ಸರ್ಕಾರ ಮಟ್ಟದಲ್ಲಿ ಆಗುವ ಕೆಲಸವನ್ನು ಮಾಡಿಕೊಡುವಂತೆ ಶಿರಸಿಯ ತೋಟಗಾರ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಪಾರಂಪರಿಕ ವೈದ್ಯರ ಸಮಾವೇಶದಲ್ಲಿ ಶಾಸಕ ಕಾಗೇರಿಯನ್ನು ಒತ್ತಾಯಿಸಲಾಯಿತು.

RELATED ARTICLES  ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ವಿಧಾತ್ರಿ ಅಕಾಡಮಿಯಿಂದ ಮಾದರಿ ಪ್ರಶ್ನೆಪತ್ರಿಕೆ ಕೊಡುಗೆ

ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಕಾಗೇರಿ, ವೈದ್ಯ ಪದ್ದತಿ ಮುಂದುವರಿಸುವ ಪರಿಪಾಠವಿಲ್ಲದ ಕೆಲ ವೈದ್ಯರಿಂದ ಪಾರಂಪರಿಕ ವೈದ್ಯ ಪದ್ದತಿ ಮರೆಯಾಗುತ್ತಿದೆ. ಹೀಗಾಗಿ ಯುವ ಪೀಳಿಗೆಗೆ ಅದನ್ನು ಹಸ್ತಾಂತರಿಸಬೇಕು ಎಂದು ಅಭಿಪ್ರಾಯಪಟ್ಟರು.

ಮೂಲ ಸತ್ವ ಮರೆಯದೆ ಆಧುನಿಕ ಸ್ಪರ್ಷದೊಂದಿಗೆ ನಾಟಿ ಔಷಧಿಗಳನ್ನು ಜನರೆದುರು ತೆರೆದಿಡುವ ಕಾರ್ಯವಾದರೆ ನಾಟಿ ವೈದ್ಯ ಪದ್ದತಿಯ ಇನ್ನಷ್ಟು ಬಲವರ್ಧನೆ ಸಾಧ್ಯವಿದೆ ಎಂದ ಅವರು, ದೇಶೀಯ ವೈದ್ಯ ಪದ್ದತಿಯೆಡೆ ಯಾರು ಎಷ್ಟೇ ಉದಾಸೀನ ಮಾಡಿದರೂ ನಮ್ಮವರು ನಂಬಿಕೆಯಿಂದ ಈ ವ್ಯವಸ್ಥೆಗೆ ಬರಬೇಕು. ಹಾಗಾದಾಗ ಮಾತ್ರ ಪಾರಂಪರಿಕ ವೈದ್ಯ ವ್ಯವಸ್ಥೆಗೆ ಇನ್ನಷ್ಟು ಬಲ ಬರುತ್ತದೆ ಎಂದರು.

RELATED ARTICLES  ನಾಡುಮಾಸ್ಕೇರಿಯಲ್ಲಿ ಘನತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕ ಉದ್ಘಾಟನೆ.

ವೇದ ಹಾಗೂ ವಿಜ್ಞಾನಗಳು ಹೇಳುವ ಅಂಶಗಳನ್ನು ಪಾರಂಪರಿಕ ವೈದ್ಯಪದ್ದತಿ ಒಳಗೊಂಡಿದೆ. ವನಸ್ಪತಿಗಳ ಸಂಘದಿಂದ ಆರೋಗ್ಯಯುತ ಬದುಕು ಸಾಧ್ಯ. ರೋಗವನ್ನು ಸಂಪೂರ್ಣ ಗುಣಮುಖ ಮಾಡುವ ಶಕ್ತಿ ಇರುವುದು ವನಸ್ಪತಿಗಳಲ್ಲಿ ವಿನಾ ಇಂಗ್ಲೀಷ್ ವೈದ್ಯ ಪದ್ದತಿಗೆ ಮಾರು ಹೋದರೆ ತಾತ್ಕಾಲಿಕ ಪರಿಹಾರಕ್ಕೆ ತೃಪ್ತಿಪಟ್ಟುಕೊಳ್ಳಬೇಕು ಎಂದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವೇದಮೂರ್ತಿ ನಾಗೇಂದ್ರ ಭಟ್ಟ ಹಿತ್ಲಳ್ಳಿ ಅಭಿಪ್ರಾಯ ವ್ಯಕ್ತ ಪಡಿಸಿದರು.

ಪಾರಂಪರಿಕ ವೈದ್ಯರ ಗುರುತಿಸುವ ನಿರ್ಣಯ: ಪಂಚಾಯತ ಮಟ್ಟದಲ್ಲಿ ಪ್ರತಿ ಗ್ರಾಮದಲ್ಲಿರುವ ಪಾರಂಪರಿಕ ವೈದ್ಯರುಗಳನ್ನು ಗುರುತಿಸಿ ದಾಖಲಾತಿಯನ್ನು ಮಾಡಿ, ತಾಲೂಕು, ರಾಜ್ಯ, ರಾಷ್ಟ್ರ ಮಟ್ಟದವರೆಗೆ ಆಯುಷ್ ಇಲಾಖೆಯೊಂದಿಗೆ ನಿರಂತರವಾಗಿ ಮುಂದುವರೆಯುವಂತೆ ನೋಡಿಕೊಳ್ಳಬೇಕು ಎಂದು ತಾಲೂಕಾ ಪಾರಂಪರಿಕ ವೈದ್ಯ ಪರಿಷತ್ ರವರ ಪರಿವೇಷದಲ್ಲಿ ನಿರ್ಣಯಿಸಲಾಯಿತು.