ಕುಮಟಾ ; ನವೆಂಬರ್ ತಿಂಗಳು ಕರ್ನಾಟಕದ ಪಾಲಿಗೆ ನಾಡಹಬ್ಬದ ಸಂಭ್ರಮವನ್ನು ತಂದುಕೊಡುತ್ತದೆ. ನಾಡು – ನುಡಿಯ ಸ್ಮರಣೆ ಮಾಡಿಕೊಳ್ಳುವುದರೊಂದಿಗೆ ಕನ್ನಡ ನಾಡು-ನುಡಿಯನ್ನು ಇನ್ನಷ್ಟು ಸಂಪದ್ಭರಿತ, ಶ್ರೀಮಂತಗೊಳಿಸುವ ಬಗೆ ಹೇಗೆ, ನಾಡು ಎದುರಿಸುತ್ತಿರುವ ಸಮಸ್ಯೆಗಳು ಯಾವುವು, ಕನ್ನಡಿಗರು ಮಾಡಬೇಕಾದುದೇನು ಮುಂತಾದ ಹತ್ತು ಹಲವು ಸಂಗತಿಗಳ ಕುರಿತು ಗಂಭೀರ ಸ್ವರೂಪದ ಚರ್ಚೆ, ಸಮಾಲೋಚನೆ, ಚಿಂತನೆಗಳು ನಡೆಯಬೇಕಾದ ಸಂದರ್ಭ ಇದು. ಈ ದಿಸೆಯಲ್ಲಿ ರಚನಾತ್ಮಕ, ಕೃತಿರೂಪದ ಕೆಲಸಗಳಿಗೆ ಚಾಲನೆ ದೊರೆಯಬೇಕಾದ ಸನ್ನಿವೇಶ ಇದು.

ನವೆಂಬರ್ ಒಂದು ಬಂತೆಂದರೆ ಸಾಕು ಒಂದು ರೀತಿಯ ಕುಟುಂಬದಲ್ಲಿ ನಡೆಸೋ ಹಬ್ಬದ ವಾತಾವರಣ ನಿರ್ಮಾಣವಾಗಿರುತ್ತದೆ. ಎಲ್ಲೆಡೆ ಹಾರಾಡುವ ಕನ್ನಡದ ಧ್ವಜಗಳು, ಕನ್ನಡ ಗೀತೆಯದ್ದೇ ಕಾರುಬರು. ಹೌದು ಎಲ್ಲೆಡೆ ಕನ್ನಡದ ಹಬ್ಬ ಕಳೆಗಟ್ಟುವುದು ಸಾಮಾನ್ಯ. ಆದರೆ ಕುಮಟಾದಲ್ಲಿ ವಿಶೇಷವಾಗಿ ಕನ್ನಡದ ಹಬ್ಬವನ್ನು ಆಚರಿಸಲಾಗುತ್ತದೆ. ಅದುವೇ “ನುಡಿ ಹಬ್ಬ”. ಕಳೆದ ಅನೇಕ ವರ್ಷಗಳಿಂದ ಶ್ರೀ ಎಂ.ಜಿ ಭಟ್ಟರವರ ನೇತ್ರತ್ವದಲ್ಲಿ ಅತ್ಯುತ್ತಮ ರೀತಿಯಲ್ಲಿ ಸಂಘಟನೆಗೊಳ್ಳುತ್ತಿರುವ ಈ ನುಡಿ ಹಬ್ಬದ ಕುರಿತಾಗಿ ಈ ವರ್ಷವೂ ಸಾಕಷ್ಟು ಕುತೂಹಲಗಳು ಜನತೆಯಲ್ಲಿದೆ.

RELATED ARTICLES  ಮಾರ್ಚ 24 ರಿಂದ 31 ರ ವರಗೆ ಕುಮಟಾದ ಉದಯ ಬಜಾರ್ ನಲ್ಲಿ ಯಾವುದೇ ವ್ಯಾಪಾರ ವಹಿವಾಟು ಇಲ್ಲ.

ಯಾವುದೇ ಸ್ವಾರ್ಥದ ಆಸೆ ಇಲ್ಲದೆ ನುಡಿ ಹಬ್ಬವನ್ನು ಯಶಸ್ಸಿನತ್ತ ಕೊಂಡೊಯುತ್ತಿರುವ ಶ್ರೀ ಎಂ.ಜಿ ಭಟ್ಟರವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ವರ್ಷವೂ ಬಹಳ ಅದ್ಧೂರಿಯಾಗಿ ನುಡಿ ಹಬ್ಬವನ್ನು ಆಚರಿಸುವ ಯೋಜನೆ ಈಗಾಗಲೇ ಸಿದ್ಧಗೊಳ್ಳುತ್ತಿದೆ. ಸುಸಂಘಟಿತ ಹಾಗೂ ಅತ್ಯಂತ ವರ್ಣರಂಜಿತ ಕಾರ್ಯಕ್ರಮಗಳು ಕನ್ನಡದ ಕಂಪು ಪಸರಿಸಲಿದೆ. ಶ್ರೀ ಎಂ ಜಿ ಭಟ್ಟರವರು ಹಾಗೂ ಅವರ ಜೊತೆಗೂಡಿದ ರಾಜ್ಯೋತ್ಸವ ಸಮಿತಿಯ ಇನ್ನೂ ಅನೇಕರು ಹಾಗೂ ಹೆಸರು ಬಯಸದ ನೂರಾರು ಕಾರ್ಯಕರ್ತರು ಸೇರಿ ಕನ್ನಡ ಹಬ್ಬದ ಪೂರ್ವ ಸಿದ್ಧತೆಯಲ್ಲಿ ಈಗಾಗಲೇ ತೊಡಗಿಕೊಂಡಿದ್ದಾರೆ.

RELATED ARTICLES  ಹಾವು ಕಚ್ಚಿ ಮಹಿಳೆ ಸಾವು: ಚಿಕಿತ್ಸೆ ಫಲ ನೀಡದೆ ಕೊನೆಯುಸಿರೆಳೆದ ಮಾದೇವಿ ಬಡಿಯಾ ಗೊಂಡ

ವಿಶೇಷವಾಗಿ ನಡೆಯುವ ಉಪನ್ಯಾಸ, ಕನ್ನಡ ಡಿಂಡಿಮ ಹಾಗೂ ಕುಮಟಾದಲ್ಲಿ ಅತ್ಯಂತ ವೈಭವೋಪೇತವಾಗಿ ನಡೆಯುವ ಮೆರವಣಿಗೆಗಳ ಸಿದ್ಧತೆ ಹಾಗೂ ಸಂಯೋಜನೆ ನಡೆದಿದೆ. ಹಂತ ಹಂತದಲ್ಲಿ ಸಭೆ ಕರೆದು ಚರ್ಚಿಸಿ ನುಡಿ ಹಬ್ಬದ ಸಂಯೋಜನೆ ನಡೆಸಲಾಗುತ್ತಿದೆ. ಕನ್ನಡ ನಾಡು ನುಡಿಯ ಬಗ್ಗೆ ಅಭಿಮಾನದ ನುಡಿ, ನೃತ್ಯ ವೈಭವ,ರಸ ಮಂಜರಿ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆದಿವೆ. ಮಣಕಿ ಮೈದಾನದಲ್ಲಿ ನವೆಂಬರ್ ಒಂದರಂದು ಅದ್ಭುತ ಕಾರ್ಯಕ್ರಮ ನಡೆಯಲಿದೆ.