ಆಧುನಿಕ ಯುಗದಲ್ಲಿ ಪ್ರತಿಯೊಂದು ಹೆಣ್ಣು-ಗಂಡು ತನ್ನ ಸೌಂದರ್ಯಕ್ಕೆ ಪ್ರಾಮುಖ್ಯತೆಯನ್ನು ನೀಡುವುದರ ಜತೆಗೆ ಅದನ್ನು ಕಾಪಾಡಿಕೊಳ್ಳಲು ಅನೇಕ ಕಸರತ್ತನ್ನು ಮಾಡುತ್ತಾರೆ. ಅದರಲ್ಲಿ ಮುಂಚೂಣಿಯಲ್ಲಿರುವುದು ಕೂದಲು ಉದುರುವಿಕೆ. ಕೂದಲು ಉದ್ದವಾಗಿ ದಪ್ಪವಾಗಿರಲು ಪ್ರತಿಯೊಬ್ಬರು ಇಚ್ಛೆ ಪಡುತ್ತಾರೆ. ಕೇಶವನ್ನು ಆರೈಕೆ ಮಾಡಿಕೊಳ್ಳಲು ಬಯಸುವವರು ಅಲೋವೆರವನ್ನು ಬಳಸುವುದರಿಂದ ಬೊಕ್ಕ ತಲೆಗೆ ಬೇಗನೆ ಗುಡ್ ಬಾಯ್ ಹೇಳಬಹುದು. ಅಲೋವೆರವನ್ನು ತಲೆಗೆ ಹಚ್ಚಿಕೊಳ್ಳುವುದರಿಂದ ತಲೆ ಹೊಟ್ಟು ಹೋಗಲಾಡಿಸಿ ,ಕಾಲಕ್ರಮೇಣ ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ.

ತಲೆಗೆ ಯಾವ ರೀತಿ ಅಲೋವೆರವನ್ನು ಉಪಯೋಗಿಸಬಹುದು:

ಎಣ್ಣೆಯ ಜತೆಗೆ ಅಲೋವೆರ: ಅಲೋವೆರವನ್ನು ಚೆನ್ನಾಗಿ ರುಬ್ಬಿ ಅದಕ್ಕೆ ತೆಂಗಿನ ಎಣ್ಣೆಯನ್ನು ಹಾಕಿ ಕೂದಲ ಬುಡಕ್ಕೆ ಹಾಗೂ ಕೂದಲಿಗೆ ಚೆನ್ನಾಗಿ ಹಚ್ಚಿ 2 ರಿಂದ 3 ಗಂಟೆಗಳ ಕಾಲ ಹಾಗೆಯೇ ಬಿಡಿ. ಆ ನಂತರ ಒಂದು ಬಾರಿ ತಪ್ಪನೆಯ ನೀರಿನಲ್ಲಿ ತೊಳೆದು ನಂತರ ನೀವು ಬಳಸುವ ಶ್ಯಾಂಪೂ ಅಥವಾ ಸೋಪನ್ನು ಹಾಕಿ ಕೂದಲನ್ನು ತೊಳೆಯಿರಿ. ಈ ರೀತಿ ತಿಂಗಳಿನಲ್ಲಿ 3 ರಿಂದ 4 ಭಾರಿ ಅಲೋವೆರನ್ನು ಹಚ್ಚುವುದರಿಂದ ತಲೆ ಹೊಟ್ಟು ಕಡಿಮೆಯಾಗಿ ಕೂದಲು ಕಾಂತಿಯುತವಾಗಿ ಉದ್ದವಾಗಿ ಬೆಳೆಯುತ್ತದೆ.

RELATED ARTICLES  ಹೆರಿಗೆ ನಂತರ ತೂಕ ಕಳೆದುಕೊಳ್ಳಬೇಕೆ? ಈ ಅಂಶ ಪಾಲಿಸಿ.

ಅಲೋವೆರಾ: ಪ್ರತಿನಿತ್ಯ ಅಲೋವೆರಾ ಜೆಲ್ ಅನ್ನು ನಿಮ್ಮ ಕೂದಲ ಬುಡಕ್ಕೆ ಹಚ್ಚಿಕೊಳ್ಳಿ. ಒಂದು ಗಂಟೆ ಬಿಟ್ಟು ಸ್ನಾನ ಮಾಡಿ. ಇದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ.

ಅಲೋವೆರಾ ಮತ್ತು ಲಿಂಬೆರಸ: ಅಲೋವೆರಾ ಜೆಲ್ ಗೆ ಎರಡು ಚಮಚ ನಿಂಬೆರಸ ಹಾಕಿ ಕೂದಲಿಗೆ ಹಚ್ಚಿ ಹಾಗೆಯೇ ಬಿಡಿ. ಅದು ಒಳಗಿದ ಬಳಿಕ ತಂಪಾದ ನೀರಿನಿಂದ ತಲೆಗೆ ಸ್ನಾನ ಮಾಡಿ.

RELATED ARTICLES  ಈ ಮನೆ ಮದ್ದು ಉಪಯೋಗದಿಂದ ಸುಟ್ಟ ಗಾಯ ಮಂಗಮಾಯಾ!!

ಮೊಟ್ಟೆ, ಮೊಸರು ಜತೆಗೆ ಅಲೋವೆರ ಜೆಲ್: ಅಲೋವೆರಾ ಜೆಲ್ ಗೆ ಮೊಟ್ಟೆಯ ಬಿಳ ಭಾಗವನ್ನು ಹಾಕಿ ಅದಕ್ಕೆ ಸ್ವಲ್ಪ ಮೊಸರು ಹಾಕಿ ಮಿಶ್ರಣ ಮಾಡಿ. ನಂತರ ಅದನ್ನು ಚೆನ್ನಾಗಿ ಕೂದಲಿನ ಬುಡಕ್ಕೆ ಹಾಗೂ ಕೂದಲಿಗೆ ಹಚ್ಚಿ 2-3 ಗಂಟೆಗಳ ಕಾಲ ಒಣಗಳು ಬಿಡಿ.
ನಂತರ ತಣ್ಣನೆಯ ನೀರಿನಿಂದ ಕೂದಲನ್ನು ತೊಳೆಯಿರಿ.

ಅಲೋವೆರಾವನ್ನು ಈ ರೀತಿಯಾಗಿ ಕೂದಲಿಗೆ ಹಚ್ಚುವುದರಿಂದ ಕೇಶ ಸೌಂದರ್ಯ ಇಮ್ಮಡಿಗೊಳ್ಳುತ್ತದೆ. ಇದರಿಂದ ತಲೆಹೊಟ್ಟು ನಿವಾರಣೆಯಾಗಿ ಕೂದಲು ದಪ್ಪವಾಗಿ ಉದ್ದವಾಗಿ ಬೆಳೆಯಲು ಸಹಾಯ ಮಾಡುತ್ತದೆ.