ಹೊಸದಿಲ್ಲಿ: ಚಿನ್ನದ ದರ ಕಳೆದ 6 ವರ್ಷಗಳಲ್ಲಿಯೇ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ.ಚಿನ್ನ ಕೊಳ್ಳುವ ಗ್ರಾಹಕರಿಗೆ ಇದು ಶಾಕಿಂಗ್ ನ್ಯೂಸ್ ಆಗಿದೆ .

ದಿಲ್ಲಿಯಲ್ಲಿ ಪ್ರತಿ 10 ಗ್ರಾಂ ಚಿನ್ನದ ದರದಲ್ಲಿ 125 ರೂ. ಏರಿದ್ದು, 32,625 ರೂ.ಗೆ ಮುಟ್ಟಿತು. ಅಲ್ಲದೇ ಹಬ್ಬ ಹಾಗೂ ವೈವಾಹಿಕ ಅಗತ್ಯಗಳಿಗೆ ಆಭರಣಗಳ ಬೇಡಿಕೆ ಏರುಗತಿಯಲ್ಲಿರುವುದು ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿನ ದರ ಹೆಚ್ಚಳ ಇದಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.

RELATED ARTICLES  ಮೂಡ್ಕಣಿ ಗಣೇಶೋತ್ಸವ ಇತರರಿಗೆ ಮಾದರಿಯಾಗಿದೆ: ಶಾಸಕ ಸುನೀಲ್ ನಾಯ್ಕ

ಆದರೆ ಬೆಳ್ಳಿಯ ದರ ದುರ್ಬಲವಾಗಿದ್ದು, 130 ರೂ. ಇಳಿದು ಕೆ.ಜಿಗೆ 39,600 ರೂ.ನಷ್ಟಿತ್ತು. ಬೆಳ್ಳಿಯ 100 ನಾಣ್ಯಗಳ ಖರೀದಿ ದರ 76,000 ರೂ. ಹಾಗೂ ಮಾರಾಟ ದರ 77,000 ರೂ. ಇತ್ತು.

RELATED ARTICLES  Setting up a Service Provider in ServiceLance

ಜಾಗತಿಕ ಮಟ್ಟದಲ್ಲಿ ಇತ್ತೀಚಿನ ಷೇರು ಮಾರುಕಟ್ಟೆ ಸೂಚ್ಯಂಕಗಳ ಪರಿಣಾಮ ಬಂಗಾರದ ದರ ಹೆಚ್ಚಿಸಿದೆ.. ಅಕ್ಟೋಬರ್ 23ರಿಂದ ಸತತ ಮೂರು ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ರೂ. 405 ಏರಿಕೆಯಾಗಿದೆ.