ಕುಮಟಾ : ತಾಲೂಕಿನ ದಿವಗಿಯ ನವಗ್ರಾಮದಲ್ಲಿ ಮಹಿಳೆಯೋರ್ವಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ.

ಪುಷ್ಪಾ ಸುರೇಶ ಅಂಬಿಗ ಸಾವನ್ನಪ್ಪಿದ್ದ ಮಹಿಳೆ. ಈಕೆ ಮನೆಯಲ್ಲೆ ಸಾವನ್ನಪ್ಪಿದ್ದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

ಆರೋಪಿಯನ್ನು ಪೊಲೀಸರು ಶುಕ್ರವಾರ ಬೆಳಗ್ಗೆ ಬಂಧಿಸಿದ್ದಾರೆ. ನವಗ್ರಾಮ ನಿವಾಸಿ ಸುರೇಶ ಅಂಬಿಗ (೫೦) ಬಂಧಿತ ಆರೋಪಿ.

RELATED ARTICLES  ದಿವಂಗತ ಮಹಾದೇವ ಮಾಸ್ತರ ಮದ್ಗುಣಿಯವರ ಜನ್ಮ ಶತಮಾನೋತ್ಸವ.

ಈತನು ಪತ್ನಿ ಪುಷ್ಪ ಸುರೇಶ ಅಂಬಿಗ( ೩೬) ಅವರನ್ನು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಪತಿ ಮತ್ತು ಪತ್ನಿ ನಿನ್ನೆ ರಾತ್ರಿ ಜಗಳವಾಡಿದ್ದಾರೆ. ಕುಡಿತದ ಅಮಲಿನಲ್ಲಿದ್ದ ಸುರೇಶ ಪತ್ನಿಯ ಮೇಲೆ ಹಲ್ಲೆ ಮಾಡಿದ್ದರಿಂದ ಅವಳು ಮ್ರತಪಟ್ಟಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದೆ.

RELATED ARTICLES  ವರುಣನ ಅಬ್ಬರ : ಜಿಲ್ಲೆಯ ರೈತರ ಮುಖದಲ್ಲಿ ಮಂದಹಾಸ.

ಮಾಹಿತಿ ಪಡೆದ ಪೊಲೀಸರು ಸುರೇಶನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕು ಆಸ್ಪತ್ರೆಗೆ ಸಾಗಿಸಲಾಗಿದೆ.