ನವದೆಹಲಿ: ದೇಶದಾದ್ಯಂತ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಮತ್ತೆ ಇಳಿಕೆಯಾಗಿರುವ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಸ್ವಲ್ಪ ಮಟ್ಟಿಗೆ ನಿರಾಳವಾಗಿದೆ.

ಅಂತಾರಾಷ್ಟ್ರೀಯ ಕಚ್ಚಾ ತೈಲ ದರ ಇಳಿಕೆಯ ಹಿನ್ನೆಲೆಯಲ್ಲಿ ದೇಶೀಯ ತೈಲ ದರ ಕೂಡ ಇಳಿಕೆಯಾಗಿದೆ. ಕಳೆದ ಒಂದು ವಾರದಲ್ಲಿ ಪ್ರತೀ ಲೀಟರ್ ಪೆಟ್ರೋಲ್ ಬೆಲೆ ರೂ.1.98 ಹಾಗೂ ಡೀಸೆಲ್ 99 ಪೈಸೆ ಇಳಿಕೆಯಾಗಿದೆ.

RELATED ARTICLES  ಬಿಜೆಪಿಗೆ ಸೇರ್ಪಡಗೊಂಡ ಮುಸ್ಲಿಂ ಮಹಿಳೆಯರು!

ರಾಜಧಾನಿ ದೆಹಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ಬೆಲೆ ರೂ.80.45ಗಳಿದ್ದು, ಡೀಸೆಲ್ ಬೆಲೆ ರೂ.74.38 ಇದೆ. ವಾಣಿಜ್ಯ ನಗರಿ ಮುಂಬೈ ನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ಬೆಲೆ ರೂ.85.93 ಹಾಗೂ ಡೀಸೆಲ್ ರೂ.77.969ಕ್ಕೆ ಮಾರಾಟವಾಗುತ್ತಿದೆ.

RELATED ARTICLES  ಇಂಡೋನೇಷ್ಯಾದಲ್ಲಿ ಸುನಾಮಿ ಅಬ್ಬರ : ಸುಮಾರು 222 ಕ್ಕೂ ಹೆಚ್ಚು ಮಂದಿ ಸಾವು.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ಬೆಲೆ 22 ಪೈಸೆ ಇಳಿಕೆಯೊಂದಿಗೆ ರೂ.81.74 ಇದ್ದು, 11 ಪೈಸೆ ಇಳಿಕೆ ಕಂಡಿರುವ ಡೀಸೆಲ್ ರೂ.75.19ಕ್ಕೆ ಮಾರಾಟವಾಗುತ್ತಿದೆ ಎಂದು ತಿಳಿದುಬಂದಿದೆ.