ಕುಮಟಾ : ರಾಷ್ಟ್ರೀಯ ಹೆದ್ದಾರಿ 66ರ ಹೊನ್ಮಾವ್ ಕ್ರಾಸ್ ಸಮೀಪ ಆಯಿಲ್ ತುಂಬಿದ ಲಾರಿಯೊಂದು ಬೈಕ್ ಸವಾರನ ಮೇಲೆ ಹರಿದ ಪರಿಣಾಮ ಆತ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ನಡೆದಿದೆ.

ಅಪಘಾತದಲ್ಲಿ ಸಾವನ್ನಪ್ಪಿದವನನ್ನು ಕುಮಟಾ ಕಲಭಾಗ ನಿವಾಸಿಯಾಗಿರುವ ಶಶಿಧರ ಹರಿಕಾಂತ ಎಂದು ಗುರುತಿಸಲಾಗಿದೆ.

RELATED ARTICLES  ಶಿರಸಿಯಲ್ಲಿ ಭೀಕರ ಅಪಘಾತ : ಛಿದ್ರ ಛಿದ್ರವಾಯ್ತು ಬಾಲಕಿಯ ದೇಹ!

ಟ್ಯಾಂಕರ್ ಚಾಲಕನ ಅಜಾಗರುಕತೆಯ ಚಾಲನೆಯೆ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಟ್ಯಾಂಕರ್ ಟಾಯರ್ ಬೈಕ್ ಸವಾರನ ಮೇಲೆ ಹಾಯ್ದ ಪರಿಣಾಮ ದೇಹದ ಕೆಲ ಭಾಗ ಸಂಪೂರ್ಣವಾಗಿ ಛಿದ್ರವಾಗಿದೆ.

RELATED ARTICLES  ಬಣ್ಣ‌ ಬಳಿದ ಹಾಗೂ ಪಿಒಪಿ ಗಣಪತಿ ಮೂರ್ತಿಗಳನ್ನು ಸಮುದ್ರದಲ್ಲಿ ವಿಸರ್ಜನೆ ಮಾಡಿದರೆ ಶಿಕ್ಷೆ

ಘಟನೆ ನಡೆದ ನಂತರ ಟ್ಯಾಂಕರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು. ಆತನ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ.

ಘಟನೆಯಿಂದಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರ ಕೆಲ ಹೊತ್ತು ಅಸ್ತವ್ಯಸ್ಥವಾಗಿತ್ತು .ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.