ಕಾರವಾರ : ಆಂಬುಲೆನ್ಸ್-ಲಾರಿ ನಡುವೆ ಡಿಕ್ಕಿಯಾಗಿ ಅಂಭವಿಸಿದ ಭೀಕರ ಅಪಘಾತದಲ್ಲಿ ಶನಿವಾರ ಮೂವರು ಮೃತಪಟ್ಟಿರುವ ದುರ್ಘಟನೆ ನಡೆದಿದೆ.
ಕಾರವಾರದ ಉಲ್ಲಾಸ್ ತಳೇಕರ್ ಎಂಬುವವರಿಗೆ ಜಾಂಡೀಸ್ ಆಗಿತ್ತು. ಉಲ್ಲಾಸ್ ಜೊತೆ ಕುಟುಂಬಸ್ಥರು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಬರುತ್ತಿದ್ದರು. ಈ ವೇಳೆ ಉಡುಪಿಯ ಕೋಟ ಮಣೂರು ಬಳಿ ಲಾರಿ ಮತ್ತು ಅಂಬುಲೆನ್ಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

RELATED ARTICLES  ದಿ. ರಾಘು ನಾಗಪ್ಪ ಗೌಡ ಇವರ ಸ್ಮರಣಾರ್ಥ ಕ್ರಿಕೆಟ್ ಪಂದ್ಯಾವಳಿ ಯಶಸ್ವಿ.

ಅಪಘಾತದಲ್ಲಿ ಸಾಧನಾ ಉಲ್ಲಾಸ್ ತಳೇಕರ್ ಗಂಭೀರವಾಗಿ ಗಾಯವಾಗಿದ್ದು, ಅವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಗಿದೆ. ಮೂರು ಮೃತದೇಹಗಳನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮೂವರು ಮೃತರ ಹೆಸರುಗಳು ಇನ್ನು ಪತ್ತೆಯಾಗಿಲ್ಲ.

RELATED ARTICLES  ಏಳನೆವರ್ಷದ ತಾಳಮದ್ದಲೆ ಮತ್ತು ಸನ್ಮಾನ ಕಾರ್ಯಕ್ರಮ ಸಂಪನ್ನ.

ಘಟನಾ ಸ್ಥಳಕ್ಕೆ ಕೋಟ್ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.