ಅಂಕೋಲಾ :ಕೆಎಲ್ಇ ಶಿಕ್ಷಣ ಮಹಾವಿದ್ಯಾಲಯ 2017 – 18 ನೇ ಸಾಲಿನ ಪೌರತ್ವ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭವು ಶಾಸಕರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಬಾಸಗೋಡದಲ್ಲಿ ಜರುಗಿತು. ಮುಖ್ಯ ಅತಿಥಿಗಳಾಗಿ ಡಾ. ಎಸ್. ಜಿ. ವಸ್ತ್ರದ ಪ್ರಾಧ್ಯಾಪಕರು ಜಿ. ಸಿ. ಕಾಲೇಜು ಅಂಕೋಲಾ ಇವರು ಉದ್ಘಾಟಿಸಿ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಪ್ರಜ್ಞೆ, ಜಾತಿ ಪದ್ಧತಿ, ಉತ್ತಮ ನಾಗರಿಕರ, ಸಂವಿಧಾನದ ಬಗ್ಗೆ ಅರಿಯಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಎಲ್ಈ ಸಮೂಹ ಸಂಸ್ಥೆಯ ಸಂಯೋಜಕರಾದ ಶ್ರೀ ಆರ್ ನಟರಾಜ್ ವಹಿಸಿ ಮಾತನಾಡಿ ಶಿಕ್ಷಕರು ನಿಸ್ವಾರ್ಥಿಗಳಾಗಬೇಕು, ವಿದ್ಯಾರ್ಥಿ ಗಳನ್ನು ನಿರ್ಮಿಸುವ ಹೊಣೆಗಾರಿಕೆ ಶಿಕ್ಷಕನದಾಗಿದೆ ಎಂದರು
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ರಾಜಮ್ಮ ನಾಯಕ ಮಾತನಾಡಿದರು.
ಕೀರ್ತಿ ನಾಯಕ ಸಂಗಡಿಗರು ಪ್ರಾರ್ಥಿಸಿದರು, ಪ್ರಾಚಾರ್ಯರಾದ ಡಾ. ವಿನಾಯಕ ಜಿ ಹೆಗಡೆ ಸ್ವಾಗತಿಸಿದರು
ಈ ಸಂದರ್ಭದಲ್ಲಿ ಕೆ.ಎಲ್.ಇ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀ ವಿನಾಯಕ ಹೆಗಡೆ ಮತ್ತು ಪೌರತ್ವ ತರಬೇತಿ ಶಿಬಿರದ ಸಮನ್ವಯಾಧಿಕಾರಿ ಶ್ರೀ ರಾಘವೇಂದ್ರ. ಪಾಂ. ಅಂಕೋಲೆಕರ್ ಹಾಗೂ ಇತರ ಸಿಬ್ಬಂದಿ ವರ್ಗದವರು, ಶಿಕ್ಷಕ ವಿದ್ಯಾರ್ಥಿಗಳು, ಆಮಂತ್ರಿತರು ಶಿಬಿರದಲ್ಲಿ ಭಾಗವಹಿಸಿದ್ದರು ಈ ಕಾರ್ಯಕ್ರಮ ಕುಮಾರಿ ಶ್ವೇತಾ ಪಟಗಾರ ನಿರೂಪಿಸಿದರು, ಕುಮಾರ್ ನವಿನ ಹೆಗಡೆ ರವರು ವಂದಿಸಿದರು
✍ ಶ್ರೀ ರಾಘವೇಂದ್ರ. ಪಾಂ. ಅಂಕೋಲೆಕರ್