ಯಲ್ಲಾಪುರ; ಪ್ರಶಸ್ತಿ ಯಾವುದೇ ವ್ಯಕ್ತಿಯ ಮೌಲ್ಯವನ್ನು ಅಳೆಯುವ ಮಾನದಂಡವೂ ಅಲ್ಲ. ಬಾಲ್ಯದಿಂದ ಬೆಳೆಸಿಕೊಂಡು ಬಂದ ಕೆಲವು ಆದರ್ಶಗಳೇ ನನ್ನನ್ನು ಬೆಳೆಸಿವೆ ಎಂದು ಮೊಹರೆ ಹಣುಮಂತರಾಯ ಪ್ರಶಸ್ತಿ ಪುರಸ್ಕೃತ ಹಾಗೂ ಕರಾವಳಿ ಮುಂಜವು ಪತ್ರಿಕೆಯ ಸಂಪಾದಕ ಗಂಗಾಧರ ಹಿರೇಗುತ್ತಿ ಹೇಳಿದರು.
ಅವರು ಶನಿವಾರ ಯಲ್ಲಾಪುರ ಕಾರ್ಯನಿರತ ಪತ್ರಕರ್ತರ ಸಂಘದ ಸನ್ಮಾನ ಸ್ವಿಕರಿಸಿ ಮಾತನಾಡಿದರು. ಪ್ರಶಸ್ತಿಗಾಗಿ ಎಂದೂ ಲಾಬಿ ಮಾಡದ ನನಗೆ, ಪ್ರಶಸ್ತಿಗಳಿಂದ ಏನೂ ಆಗಬೇಕಾಗಿಲ್ಲ. ಬದುಕಿನಲ್ಲಿ ಬಂದ ಅಷ್ಟು ಅಪಮಾನಗಳನ್ನು ಎದುರಿಸಿ ಬೆಳೆದಿದ್ದೆನೆ. ನನ್ನ ಮುಂದೆ ಕೆಲವು ವ್ಯಕ್ತಿಗಳ ಆದರ್ಶವಿತ್ತು. ಆ ಕಾರಣಕ್ಕಾಗಿಯೇ ಈ ಮಟ್ಟಕ್ಕೆ ಬರಲು ಸಾಧ್ಯವಾಯಿತು ಎಂದರು.
ಕೇವಲ ಪ್ರತಿಭೆಯೊಂದೇ ಯಶಸ್ಸಿಗೆ ದಾರಿತೋರದು. ಜೊತೆಗೆ ಪ್ರಯತ್ನಶೀಲತೆ ಇದ್ದರೆ ಮಾತ್ರ ಫಲ ದೊರೆಯುತ್ತದೆ ನನಗೆ ದೊರೆತ ಪ್ರಶಸ್ತಿ ಇಡೀ ಸಮಾಜಕ್ಕೆ ಹಾಗೂ ನಮ್ಮ ಓದುಗರಿಗೆ ಸಂದಿದೆ.
ಅಶೋಕ ಹಾಸ್ಯಗಾರ ಮತ್ತು ನಾನು ಅತ್ಯಂತ ನಿಷ್ಟೆಯಿಂದ ಕಟ್ಟಿ ಬೆಳೆಸಿದ, “ಕರಾವಳಿ ಮುಂಜಾವು” ಇಂದು ಓದುಗರ ಅಭಿಮಾನ ಗಳಿಸಿದೆಯಲ್ಲದೇ ತನ್ನನ್ನೂ ಗುರುತಿಸುವಂತೆ ಮಾಡಿದೆ ಎಂದು ಹಳೆಯ ನೆನಪುಗಳನ್ನು ಮೆಲಕು ಹಾಕಿದರು.
Leave a Reply