ಕುಮಟಾ: ಕನ್ನಡ ರಾಜ್ಯೋತ್ಸವ ಸಮಿತಿಯ ವತಿಯಿಂದ ನಡೆಯುವ ಕುಮಟಾ ರಾಜ್ಯೋತ್ಸವದ ಕುರಿತು ಮಾಹಿತಿ ನೀಡಲು ಕನ್ನಡ ರಾಜ್ಯೋತ್ಸವ ಸಮಿತಿಯವರು ಖಾಸಗಿ ಹೊಟೆಲ್ ಒಂದರಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯೋತ್ಸವ ನುಡಿ ಹಬ್ಬದ ಸಂಸ್ಥಾಪಕರು ಹಾಗೂ ಜನಪರ ಹೋರಾಟ ವೇದಿಕೆಯ ಅಧ್ಯಕ್ಷರೂ ಪ್ರೋ. ಎಂ.ಜಿ. ಭಟ್ಟ ಕುಮಟಾದಲ್ಲಿ ಕಳೆದ ಒಂಬತ್ತು ವರ್ಷಗಳಿಂದ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಿಕೊಂಡು ಬಂದಿದೆ .ಈ ಒಂಬತ್ತು ವರ್ಷಗಳಲ್ಲೂ ವೈವಿಧ್ಯಮಯವಾಗಿ ಆಚರಿಸಿಕೊಂಡು ಬಂದಿದ್ದು ವಿಶೇಷ .
ಉತ್ತಮ ವಾಗ್ಮಿಗಳಿಂದ ಕನ್ನಡ ನಾಡು, ನುಡಿಯ ಬಗ್ಗೆ ಅಭಿಮಾನದ ನುಡಿ, ಸಾಧಕರಿಗೆ ಸನ್ಮಾನ , ನೊಂದವರಿಗೆ ಆರ್ಥಿಕ ಸಹಾಯ .ಹೀಗೆ ಅರ್ಥಪೂರ್ಣವಾದ ಆಚರಣೆ ಕನ್ನಡ ರಾಜ್ಯೋತ್ಸವ ಸಮಿತಿಯದ್ದು ಎಂದು ಹೇಳಿದರು.
ಸಂಸ್ಥಾಪಕರಾದ ಶ್ರೀ ಅಜಿತ್ ಪಂಡಿತ್ ,ಶ್ರೀ ಹರೀಶ್ ಶೆಟ್ಟಿ, ಶ್ರೀ ಆರ್. ಜಿ. ನಾಯ್ಕ್ ,ಶ್ರೀಧರ್ ಹರಿಕಾಂತ್, ಮಂಜು ಪಟಗಾರ ,ಹೇಮಂತ್ ಕುಮಾರ್ ,ವೆಂಕಟೇಶ್ ಹೆಗಡೆ , ಸೂರಜ್ ರಾಯ್ಕರ್ , ಅಜಯ್ ನಾಯ್ಕ್, ಅರುಣ್ ನಾಯ್ಕ್ ,ಎಂ. ಎನ್. ಭಟ್, ತಿಮ್ಮ ಮುಕ್ರಿ ಮುಂತಾದವರು ಹಾಜರಿದ್ದರು.