ಕುಮಟಾ:ತಾಲೂಕಿನ ಕಡ್ಲೆಯಲ್ಲಿ ಶ್ರೀ ಲಕ್ಷ್ಮೀನರಸಿಂಹ ಯಕ್ಷಗಾನ ಮಂಡಳಿಯ ಉದ್ಘಾಟನಾ ಸಮಾರಂಭ ನಡೆಯಿತು. ಕುಮಟಾ ಹೊನ್ನಾವರ ಕ್ಷೇತ್ರದ ಶಾಸಕರಾದ ಶ್ರೀ ದಿನಕರ್ ಕೆ ಶೆಟ್ಟಿಯವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಶಾಸಕರು ಯಕ್ಷಗಾನವನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕಾಗಿದೆ.ಅಳಿವಿನಂಚಿನಲ್ಲಿರುವ ಈ ಕಲೆಯನ್ನು ನಾವು ಉಳಿಸಬೇಕಾಗಿದೆ ಜಿ.ಕೆ.ಹೆಗ್ಡೆಯವರ ಈ ಕೆಲಸ ಅಭಿನಂದನಾರ್ಹ ಎಂದರು .
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಎಂ.ಜಿ.ಭಟ್ ಯಕ್ಷಗಾನ ಒಂದು ಸಂಪೂರ್ಣ ಕಲೆ,ಅದರಲ್ಲಿ ಸಂಗೀತ ,ಸಾಹಿತ್ಯ,ನೃತ್ಯ,ಎಲ್ಲವೂ ಮೇಳೈಸಿದೆ.ಶುದ್ಧವಾದ ಕನ್ನಡವನ್ನು ಬಳಸುವ ಏಕೈಕ ಕಲೆ ಯಕ್ಷಗಾನ.ಅದನ್ನು ಉಳಿಸುವಲ್ಲಿ ನಮ್ಮೆಲ್ಲರ ಪಾತ್ರ ಇರಬೇಕು.ಜಿ.ಕೆ.ಹೆಗ್ಡೆ ಜತೆ ನಾವೆಲ್ಲ ನಿಲ್ಲಬೇಕು..ಅಂತಹ ಕಲಾವಿದರನ್ನು ನಾವು ಪ್ರೋತ್ಸಾಹಿಸಬೇಕು ಎಂದರು.
ವೇದಿಕೆಯಲ್ಲಿ ಶ್ರೀ ಎಮ್. ಮ್.ಹೆಗಡೆ,ಶ್ರೀ ಆರ್.ಎನ್.ಹೆಗಡೆ.ಶ್ರೀಕಾಂತ್ ಮಡಿವಾಳ,ಇನ್ನಿತರರು ಇದ್ದರು.