ಅಂಕೋಲಾ: ದಿನಾಂಕ 28 /10 /2018 ರಂದು ಕೆಎಲ್ಇ ಶಿಕ್ಷಣ ಮಹಾವಿದ್ಯಾಲಯ ಅಂಕೋಲಾ 2017 – 18 ನೇ ಸಾಲಿನ ಪೌರತ್ವ ತರಬೇತಿ ಶಿಬಿರದ ಮೂರನೇ ದಿನ ಬೆಳಿಗ್ಗೆ 8 ಘಂಟೆಗೆ ಯೋಗ ಮತ್ತು ಧ್ಯಾನ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು , ಶ್ರೀ ವಿನಾಯಕ ಗುಡಿಗಾರ ಯೋಗ ಶಿಕ್ಷಕರು ಪತಂಜಲಿ ಯೋಗ ಸಮಿತಿ ಅಂಕೋಲಾ ಇವರು ಪ್ರಾಣಾಯಾಮ, ವಜ್ರಾಸನ ಶವಾಸನ ಇತ್ಯಾದಿ ಯೋಗಾಸನಗಳನ್ನು ವಿವರಣೆಯೊಂದಿಗೆ ಪ್ರದರ್ಶನ ಮಾಡಿದರು.

RELATED ARTICLES  ಆನ್​ಲೈನ್ ಔಷಧಿ ಮಾರಾಟ ವ್ಯವಸ್ಥೆ ಜಾರಿ ಖಂಡಿಸಿ ಔಷಧಿ ಮಾರಾಟ ಮಳಿಗೆ ಬಂದ್: ಉತ್ತರ‌ ಕನ್ನಡದಲ್ಲಿ ಸಂಪೂರ್ಣ ಬೆಂಬಲ?

ನಂತರ ಬೆಳಿಗ್ಗೆ 10 – 30 ಘಂಟೆಗೆ ಶಾಸಕರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಬಾಸಗೋಡದ ಶಾಲಾ ಆವರಣವನ್ನು ಸ್ವಚ್ಛಗೊಳಿಸಿದರು

ಈ ಸಂದರ್ಭದಲ್ಲಿ ಕೆಎಲ್ಇ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀ ವಿನಾಯಕ ಹೆಗಡೆ ಮತ್ತು ಪೌರತ್ವ ತರಬೇತಿ ಶಿಬಿರದ ಸಮನ್ವಯಾಧಿಕಾರಿ ಶ್ರೀ ರಾಘವೇಂದ್ರ. ಪಾಂ. ಅಂಕೋಲೆಕರ್ ಹಾಗೂ ಇತರ ಸಿಬ್ಬಂದಿ ವರ್ಗದವರು, ಶಿಕ್ಷಕ ವಿದ್ಯಾರ್ಥಿಗಳು, ಶಿಬಿರದ ಈ ಸಂದರ್ಭದಲ್ಲಿ ಭಾಗವಹಿಸಿದ್ದರು

RELATED ARTICLES  ಸಂಪನ್ನವಾದ ಉಚಿತ ಆರೋಗ್ಯ ತಪಾಸಣಾ ಶಿಬಿರ: ಜನತೆಯ ಉತ್ತಮ ಸ್ಪಂದನೆ

✍ ಶ್ರೀ ರಾಘವೇಂದ್ರ. ಪಾಂ. ಅಂಕೋಲೆಕರ್