ಶ್ರೀನಗರ : ಪಾಕ್ ಐಎಸ್ಐನಿಂದ ತರಬೇತಿ ಪಡೆದಿರುವ ಉಗ್ರರ ತಂಡವು ರಹಸ್ಯ ಸ್ಥಳದಲ್ಲಿ ಕುಳಿತುಕೊಂಡು ಯೋಧರ ಮೇಲೆ ದಾಳಿ ನಡೆಸುತ್ತಿದ್ದಾರೆ. ಭಾರತದ ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸುತ್ತಿದ್ದ ಪಾಕಿಸ್ತಾನ ಮೂಲದ ಜೈಷ್-ಇ-ಮೊಹಮ್ಮದ್ ಉಗ್ರ -ಸಂಘಟನೆಯು ಇದೀಗ ಕಾಶ್ಮೀರಕ್ಕೆ ಸ್ನೈಪರ್ ಗಳನ್ನು ರವಾನಿಸಿರುವ ಆತಂಕಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ.
ಪುಲ್ವಾಮದಲ್ಲಿ ನಿನ್ನೆಯಷ್ಟೇ, ಸ್ನೈಪರ್ ಗಳ ಗುಂಡಿನ ದಾಳಿಗೆ ಸಬ್ ಇನ್ಸ್’ಪೆಕ್ಟರ್ ಇಮ್ತಿಯಾಜ್ ಮೀರ್ ಅವರು ಬಲಿಯಾಗಿದ್ದಾರೆ ತಿಳಿದುಬಂದಿದೆ. ಅಲ್ಲದೇ,ಸೆಪ್ಟೆಂಬರ್ ಮಧ್ಯಭಾಗದಿಂದ ಇದೂವರೆಗೆ ಸೇನೆ, ಸಶಸ್ತ್ರ ಸೀಮಾ ಬಲ ಮತ್ತು ಸಿಐಎಸ್ಎಫ್ ಸೇರಿ ತಲಾ ಒಬ್ಬರು ಯೋಧರು ಬಲಿಯಾಗಿದ್ದಾರೆ.
ದೂರದ ರಹಸ್ಯ ಸ್ಥಳದಲ್ಲಿ ಕುಳಿತು ಕೊಂಡು ನಿಖರವಾಗಿ ದಾಳಿ ನಡೆಸುವ ಶಾರ್ಪ್ ಶೂಟರ್ ಗಳನ್ನು ಸ್ನೈಪರ್ ಗಳೆಂದು ಕರೆಯಾಗಿದೆ ಎಂದುಬಂದಿದೆ.
ರೈಫಲ್, ಗನ್ ಮೂಲಕ ದೂರದಿಂದಲೇ ದಾಳಿ ನಡೆಸುವ ಕುರಿತು ಇವರು ತರಬೇತಿ ಪಡೆದಿರುತ್ತಾರೆ. ಹಾಗಾಗಿ ಭಾರತದ ಭದ್ರತಾ ಪಡೆಗಳು ತಂತ್ರಗಾರಿಕೆ ಬದಲಾಯಿಸಿಕೊಳ್ಳಲು ಮುಂದಾಗಿವೆ ಎನ್ನಲಾಗಿದೆ.