ಕುಮಟಾ : ಶಾಸಕ ದಿನಕರ ಕೆ ಶೆಟ್ಟಿಯವರು ಸೋಮವಾರದಂದು ಕುಮಟಾ ತಾಲೂಕಾ ಆಸ್ಪತ್ರೆಗೆ ಭೇಟಿ ನೀಡಿ ವ್ಯವಸ್ಥೆಯ ವೀಕ್ಷಣೆ ಮಾಡಿದರು. ನಂತರ ಮಾತನಾಡಿದ ಮಾತನಾಡಿದ ಅವರು ತಾಲೂಕಾ ಆಸ್ಪತ್ರೆಯಲ್ಲಿ ಸ್ವಚ್ಚತೆಯ ಬಗ್ಗೆ ಸಾಕಷ್ಟು ಗಮನ ಕೊಡಲಾಗಿದೆ ಆದರೆ ಆಸ್ಪತ್ರೆಗೆ ಬರುವ ಸಾರ್ವಜನಿಕರೂ ಸಹ ಸ್ವಚ್ಚತೆಯ ಬಗ್ಗೆ ಗಮನ ಹರಿಸಬೇಕು ಎಂದರು ಅಲ್ಲದೇ ತಾನು ಶಾಸಕನಾದ ಕೆಲವೇ ದಿನಗಳಲ್ಲಿ ಜನರೇಟರ ತೀರಾ ಅವಷ್ಯಕತೆಯ ಬಗ್ಗೆ ತಿಳಿಸಿದ್ದರು.
ಸಾರ್ವಜನಿಕರ ಬೆಡಿಕೆಯಂತೆ ಉಸ್ತುವಾರಿ ಸಚಿವರಲ್ಲಿ ಮಾತನಾಡಿದ್ದೇನೆ ಕೆಲವೇ ದಿನಗಳಲ್ಲಿ ಜನರೇಟರ್ ವ್ಯವಸ್ಥೆ ನೀಡಲಾಗುತ್ತದೆ ಎಂದರು ಅಲ್ಲದೇ ಮೊದಿ ಕೇರ್ ಔಷದ ವಿತರಣಾ ವ್ಯವಸ್ಥೆ ಸಾರ್ವಜನಿಕರಿಗೆ ಸಧ್ಯದಲ್ಲಿ ಲಭ್ಯವಾಗಲಿದೆ ಕಟ್ಟಡ ನಿರ್ಮಾಣ ಹಂತದಲ್ಲಿರುವುದರಿಂದ ತಾತ್ಕಾಲಿಕವಾಗಿ ಸ್ಥಳದ ವ್ಯವಸ್ಥೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕಾ ಉಪಾಧ್ಯಕ್ಷ ಜಿ ಐ ಹೆಗಡೆ ಉದ್ಯಮಿ ಎಲ್ ವಿ ಶಾನಭಾಗ ಉಪಸ್ಥಿತರಿದ್ದರು.