ಜಕಾರ್ತ: ಇಂಡೋನೇಷ್ಯಾ ಲಯನ್ ಏರ್’ಲೈನ್ಸ್ ಪ್ರಯಾಣಿಕ ವಿಮಾನ ಸಮುದ್ರದಲ್ಲಿ ಪತನಗೊಂಡಿದ್ದು. ಇದರಲ್ಲಿ ಸುಮಾರು189 ಮಂದಿ ಪ್ರಯಾಣಿಕರಿದ್ದರೆಂದು ತಿಳಿದುಬಂದಿದೆ. ಇಂಡೋನೇಷ್ಯಾ ರಾಜಧಾನಿ ಜಕಾರ್ತದಿಂದ ಪಾಂಗ್ ಕಲ್ ಪಿನಾಗ್ ದ್ವೀಪಕ್ಕೆ ವಿಮಾನ ಹೊರಟಿತ್ತು. ಟೇಕ್ ಆಫ್ ಆದ 13 ನಿಮಿಷಗಳ ಬಳಿಕ ವಿಮಾನ ನಾಪತ್ತೆಯಾಗಿರುವುದಾಗಿ ಹೇಳಿದ್ದರು. 7.30ರ ವೇಳೆ ದ್ವೀಪದಲ್ಲಿ ವಿಮಾನ ಇಳಿಯಬೇಕಿತ್ತು. ಆದರೆ, ವಿಮಾನ ಜಾವಾ ಸಮುದ್ರದಲ್ಲಿ ಪತನಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

RELATED ARTICLES  ಶ್ರೀಭಾರತೀ ವಿದ್ಯಾಲಯದಲ್ಲಿ ಹಳೆಯ ವಿದ್ಯಾರ್ಥಿಗಳ ಒಕ್ಕೂಟ ಉದ್ಘಾಟನೆ.

ಇದರಲ್ಲಿ ಸುಮಾರು 210 ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಈ ವಿಮಾನ ಹೊಂದಿದ್ದು, ದುರಂತದ ವೇಳೆ ವಿಮಾನದಲ್ಲಿ 189 ಮಂದಿ ಪ್ರಯಾಣಿಕರಿದ್ದರು ಎಂದು ಹೇಳಲಾಗುತ್ತಿದೆ. ದುರಂತದಲ್ಲಿ ಬದುಕುಳಿದಿರಬಹುದಾದ ಪ್ರಯಾಣಿಕರಿಗಾಗಿ ಶೋಧ ಹಾಗೂ ರಕ್ಷಣಾ ಕಾರ್ಯ ನಡೆಯುತ್ತಿದೆ.

ಈ ದುರಂತವು ಸುಮಾತ್ರ ದ್ವೀಪದಿಂದ ದೂರ ತೀರದಲ್ಲಿರುವ ಪ್ಯಾಂಕಾಲ್ ಪಿನಾಂಗ್ ನಗರಕ್ಕೆ ಜಕಾರ್ತದಿಂದ ಹೊರಟಿದ್ದ ವಿಮಾನವು ಸಮುದ್ರದಲ್ಲಿ ಪತನಗೊಂಡ ವಿದ್ಯಾಮಾನವನ್ನು ಇಂಡೋನೇಷ್ಯಾದ ಶೋಧ ಮತ್ತು ರಕ್ಷಣಾ ಸಂಸ್ಥೆ ದೃಢಪಡಿಸಿದೆ.

RELATED ARTICLES  ನಾಳೆ ಉತ್ತರಕನ್ನಡದಲ್ಲಿ‌ 22 ಸಾವಿರಕ್ಕೂ ಹೆಚ್ಚು ಕೋವಿಡ್ ಲಸಿಕೆ ಲಭ್ಯ..!

ವಿಮಾನದ ಆಸನಗಳ ಸಹಿತ ವಿವಿಧ ಬಗೆಯ ಅವಶೇಷಗಳು ತೇಲುತ್ತಿರುವುದು ಸಮುದ್ರದ ಬಳಿಯಿರುವ ತೈಲ ಸಂಸ್ಕರಣಾ ಘಟಕದ ಅಸುಪಾಸಿನಲ್ಲಿ ಕಂಡು ಬಂದಿದೆ ಎಂದು ವರದಿಯಾಗಿದೆ.

ಈ ದುರಂತದಲ್ಲಿ ಪೈಲಟ್ ಸುನೇಜಾ (31) ದಿಲ್ಲಿಯವರು ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ.