ಶಿರಸಿ : ಇಲ್ಲಿನ ಪ್ರಮುಖ ಕೋಟೆಕೆರೆ ದಂಡೆಯ ಮೇಲೆ ಹುಲ್ಲು, ಗಿಡಗಂಟಿಗಳು ಬೆಳೆದು ದಂಡೆಯ ಮೇಲೆ ನಡೆಯಲೂ ತೀರಾ ತೊಂದರೆ ಯಾಗುತ್ತಿತ್ತು. ಅಲ್ಲಿಯ ಹಿಂಡುಗಳಿಂದ ಹಾವು,ಹುಳಹಪ್ಪಡಿಗಳು ಬರಬಹುದೆಂಬ ಭಯದಲ್ಲಿಯೇ ಜನ ಓಡಾಡುತ್ತಿದ್ದರು. ಬೆಳಗ್ಗಿನ ವಾಕ್ ಮಾಡುವವರಿಗಂತೂ ಈ ಗಿಡ ಗಂಟಿಗಳಿಂದ ಕಿರಿಕಿರಿ ಉಂಟಾಗುತ್ತಿತ್ತು.

ನಗರಸಭೆಯವರು ಈ ಗಿಡಗಂಟಿಗಳನ್ನು, ಕಸವನ್ನು ತೆಗೆದು ಸ್ವಚ್ಛ ಗೊಳಿಸಬೇಕಾಗಿತ್ತು. ಆದರೆ ಅವರು ಕಾಲ ಕಾಲಕ್ಕೆ ಈ ಕೆಲಸವನ್ನು ನಿರ್ವಹಿಸದೇ ಇರುವದರಿಂದ ಇಲ್ಲಿಗೆ ಬರುವ ಈಜುಗಾರರು, ವಾಕಿಂಗ್ ಮಾಡುವವರು ಸೇರಿ ಅನಿರ್ವಾಯವಾಗಿ ಸ್ವಚ್ಛತೆ ಬಗ್ಗೆ ಗಮನಹರಿಸಿ ಕಳೆದ ಭಾನುವಾರದಿಂದ ಸ್ವಚ್ಛತಾ ಅಭಿಯಾನ ಕೈಗೊಂಡರು.

RELATED ARTICLES  ಕುಮಟಾದಲ್ಲಿ ಗುರುವಾರ 24.4 ಮಿಲಿ ಮೀಟರ್ ಮಳೆ.

ಮೊದಮೊದಲು ಕೆರೆಯ ಒಳಗೆ ಇದ್ದ ಕಸ ಕಡ್ಡಿ, ಹಾವಸೆ ಇತ್ಯಾದಿಗಳನ್ನು ತೆಗೆದು ಸ್ವಚ್ಛ ಗೊಳಿಸುತ್ತದ್ದ ಇವರು ಈಗ ದಡದ ಮೇಲೂ ಸಹ ಸ್ವಚ್ಛ ಗೊಳಿಸಿ ಖಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗದ್ದಾರೆ.
FB IMG 1540781458202

ಈಗ ಸ್ವಚ್ಛತೆ ಮಾಡುವವರ ಸಂಖ್ಯೆ 60ಕ್ಕೆ ಮೀರಿದೆ. ಇವರ ಕೆಲಸ ಶ್ಲಾಘನೀಯ ಮತ್ತು ಅನುಕರಣೀಯವಾಗಿದೆ. ಇದಲ್ಲದೆ ಕೆರೆಯ ಪಕ್ಕದಲ್ಲಿ ನಾಮಫಲಕವನ್ನು ಹಾಕಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಸಹ ಮಾಡುತ್ತಿದ್ದಾರೆ. ಹಾಗೂ ಕಸ ಚೆಲ್ಲಲು ಅಲ್ಲಲ್ಲಿ ಕಸದ ಬಕೆಟ್ ಸಹ ಇಟ್ಟಿದ್ದಾರೆ.

RELATED ARTICLES  ಹಬ್ಬದ ಕಳೆ‌ ಕಸಿದ ಮಳೆ : ವ್ಯಾಪಾರಿಗಳಿಗೂ ನಿರಾಸೆ.

ಕೋಟೆಕೆರೆ ಶಿರಸಿಯ ಅತಿದೊಡ್ಡ ಸುಂದರ ಕೆರೆಯಾಗಿದ್ದು, ಇವರು ಈ ಕೆರೆಯ ಸುತ್ತಲೂ ಪೂರ್ಣ ಸ್ವಚ್ಛತೆ ಮಾಡುವ ಗುರಿ ಇಟ್ಟುಕೊಂಡಿರುವುದು ಗಮನಾರ್ಹ. ಸಂಬಂಧಿಸಿದ ಇಲಾಖೆಯವರು ಮಾಡಬೇಕಾದ ಕಾರ್ಯವನ್ನು ಸಾರ್ವಜನಿಕರೇ ಮಾಡುತ್ತಿರುವುದು ಎಲ್ಲರ ಗಮನ ಸೆಳೆದಿದೆ.