ಕುಮಟಾ : ರಾಷ್ಟ್ರೀಯ ಹೆದ್ದಾರಿ 66ರ ಮಂಕಿ ಸಮೀಪ ಕಂಟೆನರ್ ವಾಹನವು ಲಾರಿ ಮತ್ತು ಟೆಂಪೊಗೆ ಪರಸ್ಪರ ಡಿಕ್ಕಿಯಾದ ಪರಿಣಾಮ ಕಲ್ಲು ತುಂಬಿಕೊಂಡು ಬರುತ್ತಿದ್ದ ಲಾರಿಯಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವು ಕಂಡಿದ್ದಾರೆ.ಇನ್ನು ಟೆಂಪೊದಲ್ಲಿ ಪ್ರಯಾಣಿಸುತಿದ್ದ ಪ್ರಯಾಣಿಕರಿಗೂ ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಹೊನ್ನಾವರ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

RELATED ARTICLES  ಗೋಕರ್ಣ ಓಂ ಬೀಚ್ ನಲ್ಲಿ ಸುಳಿಗೆ ಸಿಲುಕಿದ ಮೂವರು ಪ್ರವಾಸಿಗರು..! ಜೀವ ರಕ್ಷಿಸಿದ ಲೈಫ್ ಗಾರ್ಡಗಳು.

ಚಾಲಕನ ಅಜಾಗರುಕತೆಯ ಚಾಲನೆಯೆ ಈ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಚಿತ್ರದ ಜೊತೆಗೆ ಸತ್ವಾಧಾರಕ್ಕೆ ಮಾಹಿತಿ‌ ನೀಡಿದ್ದಾರೆ.

ಅಪಘಾತದಲ್ಲಿ ಕಲ್ಲು ತುಂಬಿದ ಲಾರಿಯ ಚಾಲಕ ಮೃತ ಪಟ್ಟಿದ್ದು, ಟೆಂಪೋದಲ್ಲಿ ಇದ್ದ ಹಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ .

RELATED ARTICLES  ರಾಜ್ಯ ಮಟ್ಟದಲ್ಲಿ ಮೊದಲ ಸ್ಥಾನ ಪಡೆದ ವಸುಧಾ ಪ್ರಭು, ಮನೋಜ್ ಕುಮಾರ್ ತೃತೀಯ : ಸರಸ್ವತಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಸಾಧನೆ.

ಪೋಲೀಸರು ಹಾಗೂ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದು ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.
IMG 20181030 WA0006
ಘಟನೆಯಿಂದಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರ ಕೆಲ ಹೊತ್ತು ಅಸ್ತವ್ಯಸ್ಥವಾಗಿತ್ತು ಈ ಬಗ್ಗೆ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಡೆದ ಘಟನಾವಳಿಗಳ ಪೂರ್ಣ ವಿವರ ಹೊರ ಬರಬೇಕಾಗಿದೆ.