ಭಟ್ಕಳ: ಕನ್ನಡ ಕಾವ್ಯ ಸುಗಮ ಸಂಗೀತ ಜನಪದ ಸಂಗೀತ ಇವುಗಳ ಮಹತ್ವದ ಕಡೆಗೆ ಶಾಲಾ ಕಾಲೇಜು ವಿದ್ಯಾರ್ಥಿಗಳ ಗಮನ ಸೆಳೆಯುವ ಉದ್ದೇಶದಿಂದ ವಿನೂತ ಪ್ರಯೋಗ ಕನ್ನಡ “ಭಾವ ಗಾನ ಯಾನ” ವನ್ನು ಆರಂಬಿಸುತ್ತಿದ್ದು ನವೆಂಬರ್ ಒಂದು ಕನ್ನಡ ರಾಜ್ಯೋತ್ಸವದಂದು ಜನತಾ ವಿದ್ಯಾಲಯ ಜ್ಯೂನಿಯರ್ ಕಾಲೇಜ್ ಶಿರಾಲಿಯಲ್ಲಿ ಪ್ರಾಚಾರ್ಯರಾದ ಅಮೃತ ರಾಮರಥ ಅವರು ಭಾವ ಗಾನ ಯಾನ ಕ್ಕೆ ಚಾಲನೆ ನೀಡಲಿದ್ದಾರೆ.

RELATED ARTICLES  ಕೆನರಾ ಎಜ್ಯುಕೇಶನ್ ಸೊಸೈಟಿಯ ಗಿಬ್ ಇಂಗ್ಲೀಷ್ ಮೀಡಿಯಮ್ ನರ್ಸರಿ ಮತ್ತು ಪ್ರಾಥಮಿಕ ಶಾಲೆಯ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ.

ಹೆಸರಾಂತ ಕವಿಗಳ ಜೊತೆ ನಮ್ಮ ಜಿಲ್ಲೆಯ ಕವಿಗಳ ಕವಿತೆಗಳನ್ನು ,ಕನ್ನಡ ಜಾನಪದ ರಂಗಗೀತೆ, ದೇಶಭಕ್ತಿಗಳನ್ನು ಮತ್ತು ಕನ್ನಡದ ಅಭಿಮಾನದ ಹಲವು ಕವಿತೆಗಳನ್ನ ವಿದ್ಯಾರ್ಥಿಗಳಿಗೆ ಪರಿಚಯಿಸಲಾಗುವುದು.

RELATED ARTICLES  ಅಕ್ರಮ ಜಾನುವಾರು ಸಾಗಾಟ : ಇಬ್ಬರ ಬಂಧನ.

ಗಾಯನದಲ್ಲಿ ಉಮೇಶ ಮುಂಡಳ್ಳಿ ಜೊತೆಗೆ ಡಾ.ಸಂಧ್ಯಾ ಭಟ್ , ಕೊಳಲಿನಲ್ಲಿ ವಿನಾಯಕ ಭಂಡಾರಿ ,ಹರೀಶ್ ಧಾರೇಶ್ವರ ಮತ್ತು ಹಾರ್ಮೋನಿಯಂ ನಲ್ಲಿ ವಿನೋದ್ ಗೌಡ ಭಾಗವಹಿಸಲಿದ್ದಾರೆ